ಭಾರೀ ಮಳೆಯಿಂದ ಚೆನ್ನೈನಲ್ಲಿ ಪ್ರವಾಹ: ಸಹಾಯವಾಣಿ ಪ್ರಾರಂಭ
ಚೆನ್ನೈ, ನವೆಂಬರ್ 14: ಚೆನ್ನೈ ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ನಗರದ ನಿವಾಸಿಗಳಿಗೆ ತಮ್ಮ ಪ್ರದೇಶಗಳಲ್ಲಿ ನೀರಿನ ಅವಘಡ ಮತ್ತು ಪ್ರವಾಹ ಸ್ಥಿತಿಯನ್ನು ತಿಳಿಸಲು 24/7 ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದೆ.
ಸಾರ್ವಜನಿಕರು ತಮ್ಮ ಮಳೆ ಸಂಬಂಧಿತ ದೂರುಗಳನ್ನು ನೋಂದಾಯಿಸಲು ನಾಗರಿಕ ಸಂಸ್ಥೆಯು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1913, 044 25619206 ಮತ್ತು 044 25619207 ಅನ್ನು ಪ್ರಕಟಿಸಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ದೂರು ನೀಡುವಾಗ #ChennaiCorporation ಅಥವಾ #ChennaiRains ಎಂಬ ಹ್ಯಾಶ್‌ಟ್ಯಾಗ್ ಬಳಸಲು ಸೂಚಿಸಲಾಗಿದೆ. ಇದಲ್ಲದೇ, ಸಾರ್ವಜನಿಕರು 94454 77205 ವಾಟ್ಸಾಪ್ ಮೂಲಕ ನಿಗಮವನ್ನು ಸಂಪರ್ಕಿಸಬಹುದು ಎಂದು ಚೆನ್ನೈ ಕಾರ್ಪೊರೇಷನ್ ಆಡಳಿತವು ಪ್ರಕಟಿಸಿದೆ.

ನವೆಂಬರ್ 16ರವರೆಗೆ ವ್ಯಾಪಕ ಮಳೆ:
ತಮಿಳುನಾಡಿನಲ್ಲಿ ಈಶಾನ್ಯ ಮಾನ್ಸೂನ್ ಆರಂಭವಾಗಿರುವ ಕಾರಣ, ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಚೆನ್ನೈ ಹವಾಮಾನ ಇಲಾಖೆ ತನ್ನ ಇತ್ತೀಚಿನ ಮುನ್ಸೂಚನೆಯಲ್ಲಿ, ರಾಜ್ಯ ಮತ್ತು ಪುದುಚೇರಿಯಲ್ಲಿ ನವೆಂಬರ್ 165 ರವರೆಗೆ ವ್ಯಾಪಕ ಮಳೆ ಮುಂದುವರಿಯಲಿದ್ದು, ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ಏತನ್ಮಧ್ಯೆ, ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಾದ ಚೆಂಗಲ್ಪಟ್ಟು, ಕಾಂಚೀಪುರಂ ಮತ್ತು ತಿರುವಳ್ಳೂರ್‌ನಲ್ಲಿ ದೀಪಾವಳಿಯ ಸ್ವಲ್ಪ ವಿರಾಮದ ನಂತರ ನಿನ್ನೆ ಸಂಜೆಯಿಂದ ಸಾಧಾರಣ ಮಳೆಯಾಗಿದೆ. ಚೆನ್ನೈನಲ್ಲಿ ತಾರಾಮಣಿ, ವೆಲಚೇರಿ, ರಾಯಪೆಟ್ಟಾ, ಮಂಡೈವೇಲಿ, ಮೈಲಾಪುರ್, ಪಟ್ಟಿನಂಬಾಕ್ಕಂ, ತಿರುವಲ್ಲಿಕೇಣಿ, ಮಡಿಪಾಕ್ಕಂ, ಪಲ್ಲಿಕರನೈ, ಕೋವಿಲಂಬಾಕ್ಕಂ, ಕಿಲಿಕಟ್ಟಲೈ, ಎಗ್ಮೋರ್, ಚೆಟ್‌ಪೇಟ್, ಪುದುಪೆಟ್ಟೈ, ಎಕ್ಕಡುತಂಗಲ್, ರಾಯಪೆಟ್ಟಾ ಮತ್ತು ವಾಷರ್‌ಮೆನ್‌ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.
ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ನಗರದ ಕೆಲವೆಡೆ ಸಾಧಾರಣ ಮಳೆ ಹಾಗೂ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 31-32 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24-25 ಡಿಗ್ರಿ ಸೆಲ್ಸಿಯಸ್ ಎಂದು ಐಎಂಡಿ ತಿಳಿಸಿದೆ.
ಈಶಾನ್ಯ ಮಾನ್ಸೂನ್ ತಮಿಳುನಾಡಿಗೆ ಪ್ರಮುಖ ಮಾನ್ಸೂನ್ ಋತುವಾಗಿದೆ, ಅದರ ಕಾರ್ಯಕ್ಷಮತೆಯು ರಾಜ್ಯದ ಕೃಷಿ ಚಟುವಟಿಕೆಗಳು ಮತ್ತು ಜಲಾಶಯದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಳೆದ ವಾರದವರೆಗೆ ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಶೇ 17ರಷ್ಟು ಕಡಿಮೆ ಮಳೆಯಾಗಿತ್ತು.












Click it and Unblock the Notifications