ಜಾರ್ಖಂಡ್‌ನಲ್ಲಿ ಐವರು ನಕ್ಸಲರ ಬಂಧನ
ಹಜಾರಿಬಾಘ್,ಸೆಪ್ಟೆಂಬರ್ 1: ಜಾರ್ಖಂಡ್‌ನಲ್ಲಿ ಐವರು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ.ಎರಡು ಪ್ರತ್ಯೇಕ ಸ್ಥಳಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಐವರು ನಕ್ಸಲರನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರ ಪೈಕಿ ನಿಷೇಧಿತ ತೃತೀಯ ಪ್ರಸ್ತುತಿ ಕಮಿಟಿ(ಟಿಪಿಸಿ)ಯ ಸದಸ್ಯನೂ ಒಬ್ಬ ಇದ್ದಾನೆ. ಉಳಿದ ನಾಲ್ವರು ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ಎಫ್ಐ) ಸದಸ್ಯರು.
ಈ ನಡುವೆ, ದುಮ್ಕಾ ಸೆಂಟ್ರಲ್ ಜೈಲಿನಲ್ಲಿ ಮನೋಜ್ ಕುಮಾರ್ ದೆಹ್ರಿ(60) ಎಂಬ ನಕ್ಸಲ್ ನಾಯಕನೊಬ್ಬ ಜೈಲಿನಲ್ಲಿ ಮೃತಪಟ್ಟಿದ್ದಾನೆ. ಆತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. 2008ರಿಂದ ಜೈಲಿನಲ್ಲಿದ್ದ. ಆತನಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಲತೇಹಾರ್ ಜಿಲ್ಲೆಯ ಬಾಲುಮಠ್ ಪ್ರದೇಶದಲ್ಲಿ ಟಿಪಿಸಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಸಾಹೇಂದ್ರ ಯಾದವ್ ಅಲಿಯಾಸ್ ನರಿಯನ್ ಲತೇಹಾರ್ ಜಿಲ್ಲೆಯ ಬಾರ್ಬಹ್ದಿಹ್ ಗ್ರಾಮಕ್ಕೆ ಬೇಟಿ ನೀಡುವ ಸಂದರ್ಭದಲ್ಲಿ ಬಂಧಿಸಲಾಗಿದೆ.
ಈತನ ತಲೆಗೆ ಒಂದು ಲಕ್ಷ ರೂಪಾಯಿ ಇನಾಮು ಘೋಷಿಸಲಾಗಿತ್ತು. ಲೂಟಿ, ಅಪಹರಣ ಮುಂತಾದವುಗಳು ಸೇರಿ 17 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು.
ರಾಮಗಢ, ರಾಂಚಿ, ಹಜಾರಿಬಾಘ್, ಛಾತ್ರ ಜಿಲ್ಲೆಗಳಲ್ಲಿ ಭಯೋತ್ಪಾದನೆ ಉಂಟು ಮಾಡುತ್ತಿದ್ದ ಪಿಎಲ್ಎಫ್ಐಯ ನಾಲ್ವರು ಸದಸ್ಯರನ್ನು ಹಜಾರಿಬಾಘ್ ಜಿಲ್ಲೆಯಲ್ಲಿ ರಸ್ತೆ ಬದಿ ಹೋಟೆಲ್ನಲ್ಲಿ ಊಟಕ್ಕೆ ಬಂದಿದ್ದಾಗ ಬಂಧಿಸಲಾಗಿದೆ.












Click it and Unblock the Notifications