Vande Bharat: ರೈಲಿನ ಮೊದಲ ಮಹಿಳಾ ಲೋಕೋ ಪೈಲಟ್‌ಗೆ ಗಣರಾಜ್ಯೋತ್ಸವ-2025 ಆಹ್ವಾನ

ರಾಂಚಿ, ಜನವರಿ 23: ಭಾರತ ಸರ್ಕಾರವು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಮಹಿಳಾ ಬುಡಕಟ್ಟು ಸಹಾಯಕ ಲೋಕೋ ಪೈಲಟ್ ರಿತಿಕಾ ಟಿರ್ಕಿ ಅವರನ್ನು 'ಮಹಿಳಾ ಸಾಧಕಿ' ಯನ್ನಾಗಿ ಪರಿಗಣಿಸಿದೆ. ಇವರನ್ನು ಈ ವರ್ಷದ ಗಣರಾಜ್ಯೋತ್ಸವ ದಿನಾಚರಣೆ 2025ಗೆ ಆಹ್ವಾನಿಸಿದೆ. ಗಣರಾಜ್ಯೋತ್ಸವ ಆಹ್ವಾನ ಮೊದಲಿಗೆ ಇ-ಮೇಲ್ ಮೂಲಕ ಬಂದಿದ್ದು, ಇದನ್ನು ರಿತಿಕಾ ಅವರು ನಂಬಿರಲಿಲ್ಲ ಎಂದು ತಿಳಿಸಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲಿ ಸಹಾಯಕ ಲೋಕೋ ಪೈಲಟ್ ಆಗಿರುವ 27 ವರ್ಷದ ರಿತಿಕಾ ಅವರು ಭಾನುವಾರ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ತಾವು ಪಾಲ್ಗೊಳ್ಳಬೇಕು ಎಂಬ ಇ-ಮೇಲ್ ಆಹ್ವಾನವನ್ನು ಅವರು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದು ನಕಲಿ ಎಂದೇ ಅವರು ಭಾವಿಸಿದ್ದರು.

First Female Loco Pilot Ritika Tirkey of Vande Bharat Express gets Invited By Republic Day 2025

ಯಾವಾಗ ಅಂಚೆ ಕಚೇರಿ ಅಧಿಕಾರಿಗಳಳೇ ಮನೆ ಬಾಗಿಲಿಗೆ ಬಂದು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿದರೋ ಆಗ ರಿತಿಕಾ ಅವರು ಮೂಕವಿಸ್ಮಿತರಾದರು. ನನ್ನನ್ನು ರಾಷ್ಟ್ರಪತಿಗಳು ಆಹ್ವಾನಿಸಿತ್ತಾರೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪ್ರಿತಿ ಭವನದಿಂದ ಬಂದ ಔಪಚಾರಿಕ ಆಹ್ವಾನ ಕಂಡು ದಿಗ್ಭ್ರಮೆಗೊಂಡರು.

ಸರಳ ಕುಟುಂಬದ ಬುಡಕಟ್ಟು ಕುಟುಂಬದಲ್ಲಿ ಹುಟ್ಟಿ ಬೆಳೆದ ರಿತಿಕಾ ಅವರಿಗೆ ಈ ವಿಶಿಷ್ಟ ಅವಕಾಶ ಸಿಕ್ಕಿದೆ. ಇಂತಹ ಅವಕಾಶಕ್ಕೆ ರಿತಿಕಾ ಅಪಾತ್ರರಾಗಿದ್ದಕ್ಕೆ ಅವರ ಪೋಷಕರು, ಸ್ನೇಹಿತರ, ಆಪ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಪುರುಷ ಪ್ರಧಾನ ಕ್ಷೇತ್ರದಲ್ಲಿ ಇವರ ಅತ್ಯುತ್ತಮ ಸಾಧನೆ ಗುರುತಿಸಿ ಸರ್ಕಾರ ಗಣರಾಜ್ಯೋತ್ಸವದಂದು ಸನ್ಮಾನಿಸುವ ಸಾಧ್ಯತೆ ಇದೆ.

ರಾಷ್ಟ್ರಪತಿ ಭವನವು ನನ್ನನ್ನು 'ಮಹಿಳಾ ಸಾಧಕಿ' ಎಂದು ಆಹ್ವಾನಿಸಿದೆ. ಪ್ರತಿ ಮಹಿಳೆಯು ಸ್ವತಂತ್ರಳಾಗಬೇಕು ಎಂಬುದು ನನ್ನ ಆಶಯ. ಮಹಿಳೆಯರು ಬಹುತೇಕ ಎಲ್ಲ ರಂಗಗಳಲ್ಲಿಯೋ ತೊಡಗಿಕೊಂಡಿದ್ದಾರೆ. ಇನ್ನೂ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಮಹಿಳೆ ಛಾಪು ಮೂಡಿಸಲಿದ್ದಾರೆ. ವಿಶ್ವದಲ್ಲಿ ಯಾವ ಕೆಲಸವು ಚಿಕ್ಕದಲ್ಲ. ಮನಸ್ಸಿಟ್ಟು ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಅವರು ತಿಳಿಸಿದರು.

‍2024ರ ಸೆಪ್ಟಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ನಾನು ಸಹ ಪೈಲಟ್ ಆಗಿರುವುದೇ ಮೊದಲ ಸಾಧನೆ. ಇದೀಗ ರಾಷ್ಟ್ರಪತಿಗಳ ಆಹ್ವಾನವು ನನ್ನ ಮತ್ತೊಂದು ಸಾಧನೆ ಆಗಿದೆ ಎಂದು ರಿತಿಕಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ರಿತಿಕಾ ಅವರು 'ಟಾಟಾನಗರ ಮತ್ತು ಪಾಟ್ನಾ' ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಹಾಯಕ ಲೋಕೋ ಪೈಲಟ್ ಆಗಿ ಸೇವೆ ಮಾಡುತ್ತಿದ್ದಾರೆ. ಬುಡಕಟ್ಟು ಜನಾಂಗದ ಮೊದಲ ಮಹಿಳೆ ಭಾರತೀಯ ರೈಲ್ವೆಯಲ್ಲಿ ಇಂಥದ್ದೊಂದು ಹುದ್ದೆ ಅಲಂಕರಿಸಿದ್ದಾರೆ. ರಿತಿಕಾ ಅವರು ಮೂಲಕ ಜಾರ್ಖಂಡ್‌ನ ವಿನಮ್ರ ಕುಟುಂಬದವರು. ಬಿಐಟಿ ಮೆಸ್ರಾದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ರಾಂಚಿಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+