Lamborghini car: ನಡುರಸ್ತೆಯಲ್ಲೇ ಸುಟ್ಟು ಕರಕಲಾದ ಕೋಟಿ ಬೆಲೆ ಬಾಳುವ ಲ್ಯಾಂಬೋರ್ಗಿನಿ ಕಾರು- ವಿಡಿಯೋ ವೈರಲ್‌

ಹೈದರಾಬಾದ್, ಏಪ್ರಿಲ್‌, 15: ಸಾಮಾನ್ಯವಾಗಿ ಕಾರುಗಳು ಇದ್ದಕ್ಕಿದ್ದಂತೆ ಬೆಂಕಿಗಾಹುತಿಯಾಗಿರುವುದನ್ನು ನೋಡಿದ್ದೇವೆ. ಆದರೆ ದಾಲ್ಲಾಳಿಗಳಿಬ್ಬರ ಹಣದ ವಿಚಾರಕ್ಕೆ ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹಚ್ಚಿದ ಘಟನೆ ಹೈದರಾಬಾದ್‌ನ ಪಹಾಡಿ ಶರೀಫ್‌ನಲ್ಲಿ ಶನಿವಾರ (ಏಪ್ರಿಲ್‌ 13) ನಡೆದಿದ್ದು, ಇದೀಗ ಕಾರು ಧಗಧಗಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಅಷ್ಟಕ್ಕೂ ನಡೆದಿದ್ದಾದ್ರೂ ಏನು ಹಾಗೂ ಈ ಕಾರಿನ ಮೌಲ್ಯ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹಚ್ಚಿದ ಹಿನ್ನೆಲೆ ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟಗಾರ ನೀರಜ್ ದೂರು ನೀಡಿದ್ದು, ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಇಲ್ಲಿನ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇನ್ನು ಲ್ಯಾಂಬೋರ್ಗಿನಿ ಕಾರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಯನ್ನು ಅಹಮದ್ ಎಂದು ಗುರುತಿಸಲಾಗಿದೆ.

Fire to Lamborghini car video viral

ಶನಿವಾರ ಕಾರಿನ ಮಾಲೀಕ ಮತ್ತು ಅಹಮದ್ ಇಬ್ಬರೂ ವ್ಯವಹಾರದ ಬಗ್ಗೆ ಚರ್ಚೆ ನಡೆಸಲು ಭೇಟಿಯಾಗಿದ್ದು, ಇದು ವಾಗ್ವಾದಕ್ಕೆ ತಿರುಗಿ ಈ ವೇಳೆ ಅಹಮದ್ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿಯೇ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಾಲೀಕ ಮತ್ತು ಆರೋಪಿ ಇಬ್ಬರೂ ಕಾರು ಮರು ಮಾರಾಟದ ವ್ಯವಹಾರದಲ್ಲಿ ತೊಡಗಿದ್ದಾರೆ. ಈ ಹಿಂದೆಯೂ ಕಾರು ಮಾರಾಟಕ್ಕೆ ಸಂಬಂಧಿಸಿದಂತೆ ಕಮಿಷನ್ ಹಂಚಿಕೆ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ ಎಂದು ಪಹಾಡಿ ಶರೀಫ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಹಿನ್ನೆಲೆ ಏನು?: ಹೈದರಾಬಾದ್‌ನ ನೀರಜ್ ಎಂಬುವವರಿಗೆ ಈ ಕಾರು ಸೇರಿದೆ ಎನ್ನಲಾಗಿದ್ದು, ಈತ ಈ ಕಾರನ್ನು ಮಾರಲು ನಿರ್ಧರಿಸಿದ್ದ. ಇದಕ್ಕಾಗಿ ಈ ಕಾರನ್ನು ಕೊಳ್ಳುವ ಯಾರಾದರೂ ಇದ್ದರೆ ಹುಡುಕುವಂತೆ ತನ್ನ ಆತ್ಮೀಯರಲ್ಲಿ ಹೇಳಿಕೊಂಡಿದ್ದ. ಬಳಿಕ ಅಮನ್ ಎಂಬಾತ ತನ್ನ ಮತ್ತೊಬ್ಬ ಸ್ನೇಹಿತ ಹಮ್ದನ್ ಎಂಬಾತನೊಂದಿಗೆ ಬಂದು ಅಹ್ಮದ್ ಎಂಬುವವರಿಗೆ ಈ ಕಾರನ್ನು ತೋರಿಸುವುದಕ್ಕಾಗಿ ತೆಗೆದುಕೊಂಡು ಹೋಗಿದ್ದರು.

ಮಾತುಕತೆಯ ವೇಳೆ ಅಹ್ಮದ್ ಹಾಗೂ ಈತನ ಸ್ನೇಹಿತರು ವಾಗ್ದಾದಕ್ಕೆ ಇಳಿದಿದ್ದಾರೆ. ಈ ವೇಳೆ ಅವರನ್ನು ಸಮಾಧಾನಪಡಿಸಲು ಅಮನ್ ಮುಂದಾಗಿದ್ದಾರೆ. ಆದರೆ ಕೋಪಗೊಂಡಿದ್ದ ಗುಂಪೊಂದು ಅಮನ್ ಅವರನ್ನು ಪಕ್ಕಕ್ಕೆ ತಳ್ಳಿ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+