ಸಂಸತ್‌ನಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ರನ್!

Subscribe to Oneindia Kannada

ನವದೆಹಲಿ, ಡಿಸೆಂಬರ್, 07: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮೊದಲ ಬಾರಿ ಸಂಸತ್ ನಲ್ಲಿ ಮಾತನಾಡಿದ್ದಾರೆ. ಜೂನ್ 3, 2012 ರಲ್ಲಿ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದ ಸಚಿನ್ ಇದೇ ಮೊದಲ ಬಾರಿಗೆ ರೈಲ್ವೆಗೆ ಸಂಬಂಧಿಸಿ ಪ್ರಶ್ನೆಯೊಂದನ್ನು ಕೇಳಿದ್ದಾರೆ.

ಕೊಲ್ಕೋತಾದಲ್ಲಿ ಮೆಟ್ರೋ ರೈಲು ಸಂಚಾರ ಸಂಬಂಧ ರೈಲ್ವೆ ಇಲಾಖೆ ಸಚಿವರಿಗೆ ಲಿಖಿತ ಪ್ರಶ್ನೆ ಕೇಳಿದ ಸಚಿನ್, ಮುಂಬೈ, ಚೆನ್ನೈ, ದೆಹಲಿಗಳಲ್ಲಿ ಇರುವಂತೆ ಕೊಲ್ಕೋತಾದಲ್ಲೂ ಮೆಟ್ರೋ ರೈಲಿನ ಹೊಸ ವಿಭಾಗ ಜಾರಿ ಮಾಡಬೇಕು, ಈ ಬಗ್ಗೆ ವಿವರಣೆ ನೀಡಿ ಎಂದು ಕೇಳಿದ್ದಾರೆ. ಅಲ್ಲದೆ ಚಾಲನಾ ಪರವಾನಗಿ ನೀಡುವಾಗ ಕೆಲವೊಂದು ಬದಲಾವಣೆ ತರುವ ಬಗ್ಗೆಯೂ ಸಹ ಸಚಿನ್ ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.[ಸಚಿನ್, ದ್ರಾವಿಡ್, ಗಂಗೂಲಿಗೆ ಸಿಗಲಿರುವ ಗೌರವ ಧನವೆಷ್ಟು?]

sachin

ಸಂಸತ್ ಸದಸ್ಯರಾಗಿ ಸಚಿನ್ ಗೈರು ಹಾಜರಿ ಬಗ್ಗೆಯೂ ಅನೇಕ ಟೀಕೆಗಳು ಕೇಳಿ ಬಂದಿದ್ದವು. ಭಾರತ ರತ್ನ ನೀಡುವ ವೇಳೆಯೂ ಗೊಂದಲದ ಹೇಳಿಕೆಗಳು ಕಂಡುಬಂದಿದ್ದವು. 42 ವರ್ಷದ ಸಚಿನ್ ಇತ್ತೀಚೆಗಷ್ಟೇ ಆಲ್ ಸ್ಟಾರ್ ಕ್ರಿಕೆಟ್ ಲೀಗ್ ನಾಯಕತ್ವ ವಹಿಸಿ ಪ್ರಪಂಚವನ್ನೇ ರಂಜಿಸಿದ್ದರು.[ಸಚಿನ್ VS ವಾರ್ನ್, ಯಾರು ಗೆದ್ರು? ಯಾರು ಸೋತ್ರು?]

ಮೈದಾನದಲ್ಲಿ ರನ್ ಮಳೆ ಹರಿಸುವ ಸಚಿನ್ ಗೆ ಸಂಸತ್ ನಲ್ಲಿ ಮಾತನಾಡಲು ಮೂರು ವರ್ಷವೇ ಬೇಕಾಯಿತು. ಒಟ್ಟಿನಲ್ಲಿ ರೈಲ್ವೆ ಸಚಿವರಿಗೆ ಲಿಖಿತ ಪ್ರಶ್ನೆ ಕಳುಹಿಸಿ ಸಚಿನ್ ತಾವು ಒಬ್ಬರು ಜನಪರ ರಾಜಕಾರಣಿ ಎಂಬುದನ್ನು ಸಾಬೀತು ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finally, the God of Cricket and Rajya Sabha MP Sachin Tendulkar on asked question in three years! While breaking his silence in the upper house of Parliament, Tendulkar asked a written question on Mumbai Metro from the Minstry of Railways.
Please Wait while comments are loading...