ಮೋದಿ ಬಂಟನ ವಿರುದ್ಧದ ಕೇಸ್ ಸುಪ್ರೀಂಕೋರ್ಟಿಗೆ

ನವದೆಹಲಿ, ನ.20: ಗುಜರಾತ್ ಸರ್ಕಾರದಿಂದ ಬೆಂಗಳೂರಿನ ಯುವತಿ ಬಗ್ಗೆ ನಡೆದ ಅಕ್ರಮ ಗೂಢಚರ್ಯೆ ವಿವಾದ ಈಗ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಅಮಾನತುಗೊಂಡಿರುವ ಗುಜರಾತಿನ ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆಯನ್ನು ಸಿಬಿಐ ಅಥವಾ ಇತರೆ ಸಂಸ್ಥೆಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್ ‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆ ಯುವತಿ ಜತೆ ಗುಜರಾತ್ ‌ನ ಪ್ರಮುಖ ನಾಯಕನಿಗೆ ಇದ್ದ ಸಂಬಂಧವು ನನಗೆ ಗೊತ್ತಾಯಿತು ಎಂಬ ಕಾರಣಕ್ಕಾಗಿಯೇ ನರೇಂದ್ರ ಮೋದಿ ಸರ್ಕಾರ ನನಗೆ ಕಿರುಕುಳ ನೀಡುತ್ತಿದೆ. ನನ್ನ ವಿರುದ್ಧ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಆದಷ್ಟು ಬೇಗ ಈ ಪ್ರಕರಣವನ್ನು ಬೇರೆ ಸಂಸ್ಥೆಗೆ ವಹಿಸಿ ನನ್ನನ್ನು ರಕ್ಷಿಸಿ ಎಂದು ಕೋರಿ ಶರ್ಮಾ ತಮ್ಮ ರಿಟ್ ಅರ್ಜಿಯಲ್ಲಿ ಹೇಳಿದ್ದಾರೆ.

2009ರಲ್ಲಿ ಅಂದಿನ ಗೃಹ ಸಚಿವ ಅಮಿತ್ ಶಾ ಅವರು 'ಸಾಹೀಬ್' ಆದೇಶದಂತೆ ಯುವತಿಯ ಚಲನವಲನಗಳ ಬಗ್ಗೆ ಅಕ್ರಮವಾಗಿ ಗೂಢಚರ್ಯೆಗೆ ಸೂಚಿಸಿದ್ದರು. ಅದು ಈಗ ವಿವಾದಕ್ಕೆ ಕಾರಣವಾಗಿದೆ.

Final hearing on Dec. 6 on Sharma’s plea for CBI probe, trial transfer

ವೆಂಕಯ್ಯನಾಯ್ಡು ಕಿಡಿ: ಗೂಢಚರ್ಯೆ ಪ್ರಕರಣ ಸಂಬಂಧಿಸಿದಂತೆ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಗೂಢಚರ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರು ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಆದರೆ, ಮಕ್ಕಳ ಮೇಲಿನ ರೇಪ್, ಕೊಲೆ ಅಪರಾಧಿಗಳ ಗಲ್ಲುಶಿಕ್ಷೆಯನ್ನು ಜೀವಾವಧಿಗಿಳಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳಾ ಸುರಕ್ಷತೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ನಾಯ್ಡು ಕಿಡಿಕಾರಿದ್ದಾರೆ.

ಬಿಜೆಪಿ ಮಾತ್ರ ಪ್ರತಿ ಕೇಸಿಗೂ ಉನ್ನತ ಮಟ್ಟದ ತನಿಖೆ, ರಾಜಿನಾಮೆಗೆ ಒತ್ತಾಯಿಸುತ್ತದೆ. ಈ ಪ್ರಕರಣದಲ್ಲಿ ಸಾಹೀಬ್ ಅಂದರೆ ಮೋದಿ ಅಲ್ಲದೆ ಬೇರ್ಯಾರೂ ಅಲ್ಲ. ಈ ಪ್ರಕರಣದ ತನಿಖೆ ನಡೆಯಲೇಬೇಕು. ಅದರ ವರದಿ ಬರುವವರೆಗೆ ಮೋದಿ ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲೂ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಲೇ ಈ ಬಗ್ಗೆ ಅಪ್ದೇಡ್ ಮುಂದೆ ನಿರೀಕ್ಷಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+