ಅಜ್ಞಾತವಾಸದಿಂದ ವರ್ಮಾ ರಿಟರ್ನ್, ರಜನಿ ಬಗ್ಗೆ ಟ್ವೀಟ್

Posted By:
Subscribe to Oneindia Kannada
   ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ಗೆ ವಾಪಸ್ ,ಬಂದ ಕೂಡಲೇ ರಜಿನಿ ರಾಜಕೀಯ ಪ್ರವೇಶದ ಬಗ್ಗೆ ಟ್ವೀಟ್ | Oneindia Kannada

   ಬೆಂಗಳೂರು, ಜನವರಿ 02: ಜನಪ್ರಿಯ, ವಿವಾದಾತ್ಮಕ ಚಿತ್ರಕರ್ಮಿ ರಾಮ್‌ ಗೋಪಾಲ್ ವರ್ಮಾ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

   ಟ್ವಿಟ್ಟರ್ ಗೆ ಬಂದ ವರ್ಮಾ, ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಟ್ವೀಟ್ ಮಾಡಿದ್ದಾರೆ. ರಜನಿಕಾಂತ್‌ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದನ್ನು ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ಎಲ್ಲ ಜನರು ರಜನಿಗೆ ಮಾತ್ರ ವೋಟ್ ಮಾಡಲಿದ್ದಾರೆ ಎಂದಿದ್ದಾರೆ.

   'ತಮಿಳುನಾಡಿನ ರಾಜಧಾನಿ ಬೆಂಗಳೂರಾಗಿದ್ರೆ ಚೆಂದ'

   ಬಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ರಾಮ್ ಗೋಪಾಲ್ ವರ್ಮಾ ಅವರು ವಿವಾದಾತ್ಮಕ ಟ್ವೀಟ್ ಮಾಡುವುದರಲ್ಲಿ ಎತ್ತಿದ ಕೈ.

   ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವುದನ್ನು ಲೇವಡಿ ಮಾಡಿ ಟ್ವೀಟ್ ಮಾಡಿದ್ದು ಭಾರಿ ಸುದ್ದಿಯಾಗಿತ್ತು.

   ಬೆಂಗಳೂರು ಈಗ ತಮಿಳುನಾಡಿನ ರಾಜಧಾನಿ

   ಬೆಂಗಳೂರು ಈಗ ತಮಿಳುನಾಡಿನ ರಾಜಧಾನಿ

   ಜಯಲಲಿತಾ ಜೈಲು ಪಾಲಾಗಿರುವುದು ಹಾಗೂ ಅವರ ಅಭಿಮಾನಿಗಳ ಅತಿರೇಕದ ವರ್ತನೆ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

   ಪರಪ್ಪನ ಅಗ್ರಹಾರವೇ ಆಡಳಿತ ಕೇಂದ್ರವಾಗಿದೆ. ಭಾರತ ಒಂದಾಗಿದೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ' ಎಂಬರ್ಥದಲ್ಲಿ ಟ್ವೀಟ್ ಮಾಡಿ, ಬೆಂಗಳೂರು ಈಗ ತಮಿಳುನಾಡಿನ ರಾಜಧಾನಿಯಾಗಿಬಿಟ್ಟಿದೆ ಎಂದಿದ್ದರು.

   ರಜನಿ ಬಗ್ಗೆ ಈ ಹಿಂದೆ ಕೂಡಾ ಟ್ವೀಟ್

   ಟ್ವಿಟ್ಟರ್ ಅಜ್ಞಾತವಾಸಕ್ಕೆ ಒಳಗಾಗಿದ್ದ ನಾನು ಪವನ್ ಕಲ್ಯಾಣ್ ಅವರ ಅಜ್ಞಾತವಾಸಿ ಚಿತ್ರದಿಂದ ಸ್ಫೂರ್ತಿಗೊಂಡು ಮತ್ತೆ ಬಂದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

   ಈ ಹಿಂದೆ ಕೋಟಿಗೊಬ್ಬ 2 ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ರನ್ನು ಹೊಗಳಿದ್ದ ವರ್ಮಾ ಅವರು ಈ ರೀತಿ ವೈವಿಧ್ಯ ಪಾತ್ರ ರಜನಿ ಕೂಡಾ ಮಾಡಿಲ್ಲ ಎಂದಿದ್ದರು.

   ರಜನಿ ರಾಜಕೀಯ ಪ್ರವೇಶದ ಬಗ್ಗೆ

   ಟ್ವಿಟ್ಟರ್ ಗೆ ಬಂದ ವರ್ಮಾ, ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಟ್ವೀಟ್ ಮಾಡಿದ್ದಾರೆ. ರಜನಿಕಾಂತ್‌ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದನ್ನು ಸ್ವಾಗತಿಸಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ಎಲ್ಲ ಜನರು ರಜನಿಗೆ ಮಾತ್ರ ವೋಟ್ ಮಾಡಲಿದ್ದಾರೆ ಎಂದಿದ್ದಾರೆ.

   ವರ್ಮಾ ಟ್ವೀಟ್ ಗೆ ಟಾಂಗ್

   ರಜನಿ ಎಂಟ್ರಿ ಏನು ಥಂಡರ್ ಆಗಿಲ್ಲ. ನರಿ ಥರಾ ಎಂಟ್ರಿಕೊಡುತ್ತಿದ್ದಾರೆ. ಜಯಲಲಿತಾ ಅವರು ಬದುಕಿದ್ದಾಗ ರಜನಿ ರಾಜಕೀಯ ಪ್ರವೇಶಿಸಬೇಕಿತ್ತು. ಚಿರಂಜೀವಿ ಅವರು ವೈ ಎಸ್ ಆರ್ ಬದುಕಿದ್ದಾಗ ರಾಜಕೀಯ ಎಂಟ್ರಿ ಪಡೆದರು. ಚಿರು ಸೋತರೂ ಅವರ ಎಂಟ್ರಿಯಲ್ಲಿ ಧಮ್ ಇತ್ತು.

   ನೀವು ಯಾಕೆ ರಾಜಕೀಯ ಸೇರಬಾರದು

   ವರ್ಮಾ ಅವರೇ ನೀವು ಯಾಕೆ ರಾಜಕೀಯ ಸೇರಬಾರದು ಅಥವಾ ಹೊಸ ಪಕ್ಷ ಕಟ್ಟಬಾರದು. ಸ್ಟಾರ್ ಗಳನ್ನು ಪ್ರಶ್ನಿಸುವ ನೀವು ಪಕ್ಷ ಕಟ್ಟಿದರೆ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದ ಫ್ಯಾನ್ಸ್.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Film maker Ram Gopal varma makes a comeback on Twitter and tweeted about Rajinikanth's entry into politics.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ