Marriage: ಮಗನ ಮದುವೆ ಮಾಡಲು ಹೋಗಿ ಸೊಸೆ ತಾಯಿಗೆ ಮರುಳಾದ ತಂದೆ- ಇಬ್ಬರು ಪರಾರಿ!
ಲಕ್ನೋ ಜುಲೈ 15: ಮಗನ ಮದುವೆ ತಯಾರಿಯಲ್ಲಿದ್ದ ಅಪ್ಪನಿಗೆ ಪ್ರೀತಿ ಶುರುವಾಗಿ ಸೊಸೆ ತಾಯಿಯೊಂದಿಗೆ ಪರಾರಿಯಾದ ವಿಚಿತ್ರ ಘಟನೆ ಉತ್ತರಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ಸಾಮಾನ್ಯವಾಗಿ ಹುಡುಗನಿಗೆ ಹುಡುಗಿಯನ್ನು ಕೇಳಲು ಹುಡುಗನ ಕುಟುಂಬಸ್ಥರು ಹುಡುಗಿಯ ಮನೆಗೆ ತೆರಳುತ್ತಾರೆ. ಹಾಗೇ ಮಗನ ಮದುವೆಯ ತಯಾರಿಯಲ್ಲಿದ್ದ ತಂದೆ ತಯಾರಿ ಬಗ್ಗೆ ಸೊಸೆ ತಾಯಿಯೊಂದಿಗೆ ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡಿದ್ದಾರೆ. ಮದುವೆ ಚಪ್ಪರ, ಸಿದ್ಧತೆ, ಕಾರ್ಯಕ್ರಮ ಹೀಗೆ ಎಲ್ಲದರ ಬಗ್ಗೆ ಮಾತುಕತೆಯಲ್ಲೇ ಸೊಸೆ ತಾಯಿಯೊಂದಿಗೆ ಮಗನ ತಂದೆಗೆ ಪ್ರೀತಿ ಹುಟ್ಟಿದೆ. ಇದಕ್ಕೆ ಸೊಸೆ ತಾಯಿ ಕೂಡ ಗ್ರೀನ್ ಸಿಗ್ನಿಲ್ ಕೊಟ್ಟಿದ್ದಾರೆ.

ಇದರಿಂದಾಗಿ ಮಗನ ಮದುವೆಗೂ ಮುನ್ನವೇ ತಂದೆ ಹಾಗೂ ಸೊಸೆ ತಾಯಿ ಎಸ್ಕೇಪ್ ಆಗಿದ್ದಾರೆ. ಇದರಿಂದಾಗಿ ಆರು ಮಕ್ಕಳ ತಾಯಿಗೂ ಹತ್ತು ಮಕ್ಕಳಿರುವ ತಂದೆಗೂ ಪ್ರೀತಿ ಶುರುವಾಗಿ ಮಗ ಹಾಗೂ ಮಗಳ ಮದುವೆ ನಿಂತು ಹೋಗಿದೆ.
ಆಗಿದ್ದೇನು?
ಒಂದು ತುಂಬು ಕುಟುಂಬದಲ್ಲಿ ಹುಡುಗನಿಗೆ ಮದುವೆ ಮಾಡಲು ಹುಡುಗಿ ನೋಡಲು ಶುರು ಮಾಡಿದ್ದಾರೆ. ಹುಡುಗನಿಗೆ ಫೋಟೋ ತೋರಿಸಿದಾಗ ಆತನಿಗೆ ಹುಡುಗಿ ಒಪ್ಪಿಗೆ ಆಗಿದ್ದಾಳೆ. ಇಬ್ಬರಿಗೆ ಒಪ್ಪಿಗೆ ಆದ ಬಳಿಕ ನೋಡುವ ಶಾಸ್ತ್ರ ಇದೆಲ್ಲವೂ ನಡೆಸಲು ಹುಡುಗನ ತಂದೆ ಹಾಗೂ ಸೊಸೆ ತಾಯಿಯೊಂದಿಗೆ ಮಾತುಕತೆ ನಡೆದಿದೆ.
ಹುಡುಗ ಹಾಗೂ ಹುಡುಗಿ ಒಪ್ಪಿದ ಬಳಿಕ ಫೋನ್ ನಂಬರ್‌ಗಳು ವಿನಿಮಯ ಆಗಿವೆ. ಹುಡುಗನ ಅಪ್ಪ ಮದುವೆಯ ಎಲ್ಲಾ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹುಡುಗಿ ನೋಡುವ ಶಾಸ್ತ್ರ ಮುಗಿದ ಬಳಿಕ ಒಂದೆರೆಡು ದಿನದ ಬಳಿಕ ಮುಂದಿನ ಶಾಸ್ತ್ರಕ್ಕಾಗಿ ಹುಡುಗಿಯ ತಾಯಿಗೆ ಕರೆ ಮಾಡಿದ್ದಾರೆ. ಬಳಿಕ ಎರಡು ಕುಟುಂಬದ ಶಾಸ್ತ್ರಗಳು ಮದುವೆ ಮಾತುಕತೆ ನಡೆಸಿದ್ದಾರೆ.

ಇದೇ ವಿಚಾರವಾಗಿ ಹುಡುಗಾ ಹುಡುಗಿ ಅಪ್ಪ ಅಮ್ಮ ಎರಡು ದಿನಕ್ಕೆ ಒಂದು ಬಾರಿ ಮಾತನಾಡುತ್ತಿದ್ದರು. ನಂತರ ಇವರಿಬ್ಬರು ದಿನಕ್ಕೊಂದು ಬಾರಿ ಮಾತನಾಡಲು ಶುರು ಮಾಡಿದ್ದಾರೆ. ಹೀಗೆ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಹುಡುಗನ ತಂದೆ ಹಾಗೂ ಸೊಸೆ ತಾಯಿ ಇಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ.
ಆದರೆ ಮಕ್ಕಳಿಗೆ ಮದುವೆ ಮಾಡಲು ಉತ್ತಮ ಸಮಯ ಕೂಡಿ ಬರಲೇ ಇಲ್ಲ. ಹೀಗಾಗಿ ಪೋಷಕರಿಬ್ಬರ ಮಾತು ಗಾಢವಾಗಿ ಮುಂದುವರೆದು ಇವರಿಬ್ಬರ ಪ್ರೀತಿ ಹೆಚ್ಚಾಗಿದೆ. ಹೀಗಾಗಿ ಮಗ ಮದುವೆಗೂ ಮುನ್ನ ತಂದೆ ಸೊಸೆ ತಾಯಿಯೊಂದಿಗೆ ಪರಾರಿಯಾಗಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.












Click it and Unblock the Notifications