ಜಿಎಸ್ ಟಿ: ತೆರಿಗೆದಾರರ 10 ಪ್ರಶ್ನೆಗಳಿಗೆ ನಮ್ಮ ಉತ್ತರ
ಜಿಎಸ್ ಟಿ ಬಗ್ಗೆ ಹಲವಾರು ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಸರಕು ಮತ್ತು ಸೇವೆಗಳ ಬೆಲೆ ಬಗ್ಗೆ ಒಂದೆಡೆ ಚಿಂತೆಯಾಗಿದ್ದರೆ, ತೆರಿಗೆದಾರರಿಗೆ ಮತ್ತಷ್ಟು ಗೊಂದಲಗಳಿವೆ.
ತೀವ್ರ ಕುತೂಹಲ ಎಬ್ಬಿಸಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಎಂಬ ಹೊಸ ಚೌಕಟ್ಟಿನೊಳಗೆ ಇಡೀ ದೇಶ ಒಳಪಡುವ ದಿನ ಸನ್ನಿಹಿತವಾಗಿದೆ. ಜುಲೈ 1ರಿಂದ ಈವರೆಗೆ ಇದ್ದ ತೆರಿಗೆ ವ್ಯವಸ್ಥೆಯು ಬದಲಾಗಿ ಹೊಸ ತೆರಿಗೆ ವ್ಯವಸ್ಥೆಯು ದೇಶದಲ್ಲಿ ಅಸ್ತಿತ್ವಕ್ಕೆ ಬರಲಿದೆ.
ಇದರಿಂದಾಗಿ ಹಲವಾರು ಪ್ರಯೋಜನಗಳನ್ನು ನಿರೀಕ್ಷಿಸಲಾಗಿದೆ. ದೇಶದ ಅಭಿವೃದ್ಧಿಗೆ ಇದು ಪ್ರಮುಖವಾದ ಸಾಧನೆಯೆಂದೂ ಹೇಳಲಾಗುತ್ತಿದೆ. ಆದರೆ, ಅದೇ ಸಮಯದಲ್ಲಿ ದಿನಬಳಕೆ ವಸ್ತುಗಳು, ಐಶಾರಾಮಿ ವಸ್ತುಗಳ ಬೆಲೆಗಳಲ್ಲಿ ಏರಿಳಿಕೆಯಾಗುವ ಸ್ಪಷ್ಟ ಸೂಚನೆಯೂ ಸಿಕ್ಕಿದೆ.
ಆದರೂ, ನಾಗರಿಕರನ್ನು ಈ ಹೊಸ ತೆರಿಗೆ ವ್ಯವಸ್ಥೆ ಹೆಚ್ಚು ಗೊಂದಲ ತಂದಿದೆ. ಕೇವಲ ಪದಾರ್ಥ, ಸಾಮಗ್ರಿ, ಸೇವೆಗಳ ಬೆಲೆಗಳಲ್ಲಿನ ಏರಿಳಿಕೆ ಮಾತ್ರವಲ್ಲ, ಬದಲಿಗೆ, ವೈಯಕ್ತಿಕ ಆದಾಯದ ತೆರಿಗೆ ಸಲ್ಲಿಕೆಯ ಮೇಲೂ ಈ ಜಿಎಸ್ ಟಿ ಪರಿಣಾಮ ಬೀರುತ್ತದೆ. ಆದರೆ, ಅವರಿಗಿಂತಲೂ ಹೆಚ್ಚು ಗೊಂದಲದಲ್ಲಿರುವುದು ತೆರಿಗೆ ಪಾವತಿದಾರರು.
ಹಾಗಿದ್ದರೆ, ಈ ಜಿಎಸ್ ಟಿಯ ಬಗ್ಗೆ ತೆರಿಗೆದಾರರ ಸಾಮಾನ್ಯ ಪ್ರಶ್ನೆಗಳನ್ನು ಪಟ್ಟಿ ಮಾಡಲಾಗಿದ್ದು ಅವಕ್ಕೆ ಸೂಕ್ತ ಉತ್ತರವನ್ನೂ ನೀಡಲಾಗಿದೆ. ಈ ಪ್ರಶ್ನೋತ್ತರ ಮಾಲಿಕೆಯು ಇಲ್ಲಿ ನಿಮಗಾಗಿ.

ಕೇಂದ್ರ, ರಾಜ್ಯ ತೆರಿಗೆಗಳ ವಿವರ
ಕೇಂದ್ರದ ತೆರಿಗೆಗಳು: ಅಬಕಾರಿ ತೆರಿಗೆ, ಅಬಕಾರಿ ಸುಂಕ (ಔಷಧೀಯ ತಯಾರಿಕೆ ಮೇಲೆ ವಿಧಿಸಲಾಗುವ), ಹೆಚ್ಚುವರಿ ಅಬಕಾರಿ ಸುಂಕ (ವಿಶೇಷ ಮಹತ್ವವುಳ್ಳ ಸರಕುಗಳ ಮೇಲೆ), ಹೆಚ್ಚುವರಿ ಅಬಕಾರಿ ಸುಂಕ (ಜವಳಿ ಹಾಗೂ ಜವಳಿ ಉತ್ಪನ್ನಗಳು), ಹೆಚ್ಚುವರಿ ಸೀಮಾ ಶುಲ್ಕ, ವಿಶೇಷ ಹೆಚ್ಚುವರಿ ಸೀಮಾ ಶುಲ್ಕ, ಸೇವಾ ತೆರಿಗೆ, ಸರಕು ಮತ್ತು ಸೇವೆಗಳ ಪೂರೈಕೆ, ಸರ್ ಚಾರ್ಜ್ ಹಾಗೂ ಸೆಸ್ ಗಳು.
ರಾಜ್ಯದ ತೆರಿಗೆಗಳು: ರಾಜ್ಯದ ಮೌಲ್ಯವರ್ಧನೆ ತೆರಿಗೆಗಳು, ಕೇಂದ್ರ ಮಾರಾಟ ತೆರಿಗೆ, ಐಷಾರಾಮಿ ತೆರಿಗೆ, ಪ್ರವೇಶ ತೆರಿಗೆ (ಎಲ್ಲಾ ವಿಧ), ಮನರಂಜನೆ ಮತ್ತು ವಿನೋದ ಚಟುವಟಿಕೆಗಳ ಮೇಲಿನ ತೆರಿಗೆ, ಜಾಹೀರಾತು ತೆರಿಗೆ, ಖರೀದಿ ತೆರಿಗೆ, ಲಾಟರಿ, ಬೆಟ್ಟಿಂಗ್, ಜೂಜಾಟದ ಮೇಲಿನ ತೆರಿಗೆ, ಸರಕು ಮತ್ತು ಸೇವೆಗಳ ಪೂರೈಕೆಗೆ ಸಂಬಂಧಿಸಿದ ಸರ್ ಚಾರ್ಜ್ ಹಾಗೂ ಸೆಸ್ ಗಳು.
ತೈಲಕ್ಕಿಲ್ಲ ಜಿಎಸ್ ಟಿ
ಮನುಷ್ಯರ ಬಳಕೆಗಾಗಿ ಇರುವ ಮದ್ಯ, ಕಚ್ಚಾ ತೈಲ, ಮೋಟರ್ ಸ್ಪಿರಿಟ್, ಹೈ ಸ್ಪೀಡ್ ಡೀಸೆಲ್ ಇಂಜಿನ್, ನ್ಯಾಚುರಲ್ ಗ್ಯಾಸ್, ವಿಮಾನಗಳಿಗೆ ಬಳಸುವ ಇಂಧನಗಳನ್ನು ತಾತ್ಕಾಲಿಕವಾಗಿ ಹೊರಗಿಡಲಾಗಿದೆ.

ಕೇಂದ್ರಕ್ಕೆ ಇದೆ ಹೆಚ್ಚಿನ ಅಧಿಕಾರ
ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಜಿಎಸ್ ಟಿ ಆಧಾರದಲ್ಲಿಯೇ ತೆರಿಗೆ ವಿಧಿಸಲಾಗುವುದು. ಈ ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಹೆಚ್ಚಿಗೆ ತೆರಿಗೆ ವಿಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.

ಸಣ್ಣ ಉಳಿತಾಯದಾರರಿಗೆ ಉಪಯುಕ್ತ ಹೇಗೆ?
ವಾರ್ಷಿಕವಾಗಿ 20 ಲಕ್ಷ ರು. ವಹಿವಾಟು ನಡೆಸುವ ಉದ್ಯಮಿಗಳು ಜಿಎಸ್ ಟಿ ವ್ಯಾಪ್ತಿಯಲ್ಲಿ ಬರಲಿದ್ದಾರೆ. ಒಂದು ವಾಣಿಜ್ಯ ವರ್ಷದಲ್ಲಿ ವ್ಯಕ್ತಿಯೊಬ್ಬನ ವ್ಯವಹಾರಗಳ ಕ್ರೋಢೀಕೃತ ಸಂಪಾದನೆಯ ಆಧಾರದಲ್ಲಿ ಆಯಾ ರಾಜ್ಯಗಳಿಗೆ ಸಂಬಂಧಪಟ್ಟಂತೆ ಕೆಲ ವಿನಾಯ್ತಿಗಳೂ ಇವೆ.

ಇದು ಜಿಎಸ್ ಟಿ ವ್ಯಾಪ್ತಿಗೆ ಬರುವುದಿಲ್ಲವೇ?
ದತ್ತಿ ಧಾರ್ಮಿಕ ಸಂಸ್ಥೆಗಳಿಂದ ದಾನ ನೀಡುವುದು ತೆರಿಗೆ ವ್ಯಾಪ್ತಿಗೆ ಬರಲಿದೆಯೇ? ದತ್ತಿ, ಧರ್ಮಾರ್ಥ ಸೇವೆಗಳಲ್ಲಿ ಯಾವುದೇ ಪರಸ್ಪರ ಲಾಭಗಳು ಇಲ್ಲದಿರುವುದರಿಂದ ಅವುಗಳನ್ನು ಜಿಎಸ್ ಟಿ ವ್ಯಾಪ್ತಿಯಲ್ಲಿ ತರಲು ನಿರ್ಧರಿಸಿಲ್ಲ.

ಪ್ರಾಂತ್ಯವಾರು ತೆರಿಗೆ ಹೇಗೆ?
ವಿಭಿನ್ನ ವಲಯಗಳಿಗೆ ವಿಭಿನ್ನ ತೆರಿಗೆಗಳಿವೆ. ಸಂಯೋಜನೆ ದರವು ರಾಜ್ಯದಲ್ಲಿನ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಇದು ಅನ್ವಯವಾಗುತ್ತದೆ. ಸರಕು ಮತ್ತು ಸೇವಾ ತೆರಿಗೆಳ ಪೂರೈಕೆದಾರರಾಗಿದ್ದರೆ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರ್ಷಿಕ ವಹಿವಾಟಿನ ಶೇ. 0.5ರಷ್ಟು, ಉತ್ಪಾದಕರಾದಲ್ಲಿ ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಹಿವಾಟಿನ ಶೇ. 1ರಷ್ಟು, ರೆಸ್ಟೋರೆಂಟ್ ಸೇವಾ ವಲಯದಲ್ಲಿ ಶೇ. 2.5ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಪ್ಯಾನ್ ಸಂಖ್ಯೆ ಬೇಕೇ ಬೇಕು!
ಉದ್ಯಮಿಯ ವ್ಯವಹಾರ ಬೇರೆ ಬೇರೆ ರಾಜ್ಯಗಳಿದ್ದರೆ ಆತ ಅದೇ ಪ್ಯಾನ್ ಸಂಖ್ಯೆ ಉಪಯೋಗಿಸಿ, ಪ್ರತ್ಯೇಕವಾಗಿಯೇ ತೆರಿಗೆ ಪಾವತಿಸಬೇಕು. ಒಂದೇ ಪ್ಯಾನ್ ಹೊಂದಿರುವ ಎಲ್ಲಾ ನೊಂದಾವಣಿಗಾರರು ಸಂಯೋಜಿತ ಯೋಜನೆಯನ್ನು ಪಾಲಿಸಬೇಕು. ಒಬ್ಬ ನೋಂದಾಯಿತ ವ್ಯಕ್ತಿ ಹೊರಗುಳಿದರೂ, ಉಳಿದ ನೋಂದಾಯಿತ ವ್ಯಕ್ತಿಗಳು ತೆರಿಗೆಗೆ ಪಾವತಿಸಲು ಅರ್ಹರಾಗಿರುತ್ತಾರೆ.

ಜಿಎಸ್ ಟಿ ಇಲ್ಲದಿದ್ದರೂ ತೆರಿಗೆ ಪಾವತಿಸಬೇಕು
ಹೌದು. ಆತನ ವೈಯಕ್ತಿಕ ಗಳಿಕೆಯ ಆಧಾರದ ಮೇಲೆ ಆತ ತೆರಿಗೆ ಪಾವತಿಸಬೇಕಾಗುತ್ತದೆ. ವಿನಾಯ್ತಿಗೆ ಒಳಪಟ್ಟ ಸರಕು ಅಥವಾ ಸೇವೆ ಪೂರೈಕೆದಾರನು ತನಗೆ ಸಿಕ್ಕಿರುವ ತೆರಿಗೆ ವಿನಾಯ್ತಿಗಿಂತ ಹೆಚ್ಚಿನ ತೆರಿಗೆಯನ್ನು ತನ್ನ ಗ್ರಾಹಕರಿಂದ ವಸೂಲಿ ಮಾಡುವ ಹಾಗಿಲ್ಲ.

ಶಾಶ್ವತವಾಗಿರುತ್ತದೆ ಮಾಹಿತಿ
ಜಿಎಸ್ ಟಿಯಲ್ಲಿ ನೋಂದಾವಣಿ ಮಾಡಿಸಿದಾಗ ಸಿಗುವ ಸಂಖ್ಯೆ ಅಥವಾ ದೃಢೀಕರಣ ಪತ್ರಗಳು ಶಾಶ್ವತ. ತನ್ನ ಪ್ರತಿಯೊಂದು ಶ್ರೇಣಿಯ ವ್ಯಾಪಾರಕ್ಕೆ ಪ್ರತ್ಯೇಕ ನೋಂದಾವಣಿ ಮಾಡಿಸಿಕೊಳ್ಳಬಹುದು. ನೋಂದಾವಣಿಗೂ ಪ್ಯಾನ್ ಕಾರ್ಡ್ ಕಡ್ಡಾಯ. ನೋಂದಣಿ ದೃಢೀಕರಣ ಪತ್ರವನ್ನು ಹಿಂದಿರುಗಿಸದಿದ್ದಲ್ಲಿ, ರದ್ದುಪಡಿಸದಿದ್ದಲ್ಲಿ, ಅಮಾನತಿನಲ್ಲಿಡದಿದ್ದಲ್ಲಿ ಅಥವಾ ಹಿಂಪಡೆಯದಿದ್ದಲ್ಲಿ ಅದು ಶಾಶ್ವತವಾಗಿರುತ್ತದೆ.

ವ್ಯವಹಾರವಿದ್ದರೆ ಅನಿವಾಸಿಗಳೂ ತೆರಿಗೆ ವ್ಯಾಪ್ತಿಯಲ್ಲಿ
ನಿರಂತರವಾಗಿ ಅಥವಾ ವರ್ಷದಲ್ಲಿ ಯಾವಾಗಲಾದರೂ ಭಾರತದಲ್ಲಿ ಯಾವುದೇ ರೀತಿಯ ಆರ್ಥಿಕ ವ್ಯವಹಾರ ನಡೆಸುವ ಅನಿವಾಸಿಗಳಿಗೆ ಜಿಎಸ್ ಟಿ ಅನ್ವಯವಾಗುತ್ತದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications