Video: ಫೋಟೋ ಕ್ಲಿಕ್ಕಿಸಿಕೊಳ್ಳಲು ನೀರಿಗಿಳಿದು ಕೊಚ್ಚಿ ಹೋದ ಕುಟುಂಬ: ಭಯಾನಕ ವಿಡಿಯೋ ವೈರಲ್!
ಮಹಾರಾಷ್ಟ್ರದ ಲೋನಾವಾಲಾದಲ್ಲಿರುವ ಭೂಶಿ ಅಣೆಕಟ್ಟು ನೋಡಲು ತೆರಳಿದ ಐವರು ಪ್ರವಾಸಿಗರು ಭಾನುವಾರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಟುಂಬವೊಂದು ಫೋಟೋ ಕ್ಲಿಕ್ಕಿಸಲು ನೀರಿಗಿಳಿದ ವೇಳೆ ಡ್ಯಾಂನಿಂದ ನೀರನ್ನು ಬಿಡಲಾಗಿದೆ. ಈ ವೇಳೆ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಅಣೆಕಟ್ಟೆ ಪ್ರದೇಶದ ಜಲಪಾತದಲ್ಲಿ ಈ ಘಟನೆ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ.

ಮಾಹಿತಿ ಪ್ರಕಾರ, ಭೂಶಿ ಅಣೆಕಟ್ಟಿನ ಬಳಿಯ ಜಲಪಾತದಲ್ಲಿ ಮುಳುಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು ಐದು ಜನರು ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿ ಸುಮಾರು 24 ಗಂಟೆ ಕಳೆದರೂ ಇಬ್ಬರ ಮೃತದೇಹ ಪತ್ತೆಯಾಗಿಲ್ಲ, ಶೋಧ ಕಾರ್ಯ ಈಗಲೂ ನಡೆಯುತ್ತಿದೆ.
ಜೂನ್ 25 ರಂದು ಮದುವೆ ನಿಮಿತ್ತ ಕುಟುಂಬವೊಂದು ಹಾಗೂ ಅವರ ಸಂಬಂಧಿಕರು ಜಮಾಯಿಸಿ ಭೂಶಿ ಅಣೆಕಟ್ಟು ನೋಡಲು ತೆರಳಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ.
महाराष्ट्र के लोनावाला में बड़ा हादसा..
— Vivek Gupta (@imvivekgupta) June 30, 2024
पिकनिक मानना गया पूरा परिवार बुशी डेम में डूबा..
परिवार में महिला समेत छोटे बच्चे भी पानी के तेज बहाव में बहे..
सर्च ऑपरेशन जारी है.#Maharashtra pic.twitter.com/a0cAskXmwS
ಪುಣೆ ಜಿಲ್ಲೆಯ ಹಡಪ್ಸರ್‌ನ ಸೈಯದ್ ನಗರದ ಅನ್ಸಾರಿ ಕುಟುಂಬದ 15-16 ಜನರು ಭಾನುವಾರ ಮಧ್ಯಾಹ್ನ ಭೂಶಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಏಳು ಜನ ಸದಸ್ಯರು ಜಲಪಾತದಲ್ಲಿ ಫೋಟೋ ಕ್ಲಿಕ್ಕಿಸಲು ಇಳಿದಿದ್ದಾರೆ. ಈ ಸಮಯದಲ್ಲಿ ಆಣೆಕಟ್ಟಿನಿಂದ ನೀರನ್ನು ಬಿಡಲಾಗಿದೆ.

ಕಣ್ಣೆದುರು ಹಲವಾರು ಪ್ರವಾಸಿಗರಿದ್ದರೂ ಏನೂ ಮಾಡಲು ಆಗಿಲ್ಲ. ಕುಟುಂಬಸ್ಥರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಇಬ್ಬರು ನೀರಿನ ಪ್ರವಾಹದಿಂದ ಹೊರಬಂದು ಬದುಕುಳಿದಿದ್ದಾರೆ. ಆದರೆ, ನಾಲ್ವರು ಪುಟ್ಟ ಮಕ್ಕಳು ಹಾಗೂ ಓರ್ವ ಮಹಿಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಮೂವರ ಮೃತದೇಹಗಳು ರಕ್ಷಣಾ ತಂಡಕ್ಕೆ ಪತ್ತೆಯಾಗಿದ್ದು, ಇಬ್ಬರು ನಾಪತ್ತೆಯಾಗಿಲ್ಲ.
ನೂರ್ ಶಾಹಿಸ್ತಾ ಅನ್ಸಾರಿ (ವಯಸ್ಸು 35), ಅಮಿನಾ ಆದಿಲ್ ಅನ್ಸಾರಿ (ವಯಸ್ಸು 13), ಮರಿಯಾ ಅನ್ಸಾರಿ (ವಯಸ್ಸು 7), ಹುಮಿದಾ ಅನ್ಸಾರಿ (ವಯಸ್ಸು 6) ಮತ್ತು ಅದ್ನಾನ್ ಅನ್ಸಾರಿ (ವಯಸ್ಸು 4) ಮೃತರು. ಇವರಲ್ಲಿ ಮಾರಿಯಾ ಮತ್ತು ಅದ್ನಾನ್ ಇನ್ನೂ ನಾಪತ್ತೆಯಾಗಿಲ್ಲ, ಉಳಿದ ಮೂವರ ಮೃತದೇಹಗಳು ಪತ್ತೆಯಾಗಿವೆ.
ಜಲಪಾತದಲ್ಲಿ ಇಳಿದಾಗ ಅನ್ಸಾರಿ ಕುಟುಂಬದ ಸದಸ್ಯರಿಗೆ ಡ್ಯಾಂನಿಂದ ನೀರು ಬಿಡುವುದು ತಿಳಿದಿರಲಿಲ್ಲ. ಪುಟ್ಟ ಮಕ್ಕಳೊಂದಿಗೆ ಜಲಪಾತದ ನೀರಿನಲ್ಲಿ ಆನಂದಿಸುತ್ತಾ ನಿಂತಿದ್ದಾರೆ. ಆ ಸಮಯದಲ್ಲಿ ಭೂಶಿ ಅಣೆಕಟ್ಟಿನಿಂದ ನೀರು ರಬಸದಿಂದ ಹರಿದು ಬಂದಿದೆ. ಇದರಿಂದಾಗಿ ಜಲಪಾತದ ನೀರಿನ ಮಟ್ಟ ಹೆಚ್ಚಿದೆ. ಹೊರಬರುವ ಮೊದಲೇ ನೀರಿನ ಹರಿವು ಹೆಚ್ಚಾಗಿದೆ. ಕೆಲವೇ ನಿಮಿಷಗಳಲ್ಲಿ ನೀರಿನ ಬಲವಾದ ಪ್ರವಾಹಕ್ಕೆ ಎಲ್ಲರೂ ಕೊಚ್ಚಿಹೋಗಿದ್ದಾರೆ.












Click it and Unblock the Notifications