Get Updates
Get notified of breaking news, exclusive insights, and must-see stories!

ಆರು ವರ್ಷದ ವಿನಿಶ್ರೀ ಅಸ್ಥಿ ಮಜ್ಜೆ ಕಸಿ ಚಿಕಿತ್ಸೆಗೆ ಸಣ್ಣ ಸಹಾಯವಾದರೂ ಮಾಡಿ

ಮೀನುಗಾರರ ಕುಟುಂಬವೊಂದು ತಮ್ಮ ಮನೆ ಮಗಳ ಅಸ್ಥಿ ಮಜ್ಜೆ ಕಸಿಯ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಸಲು ಬಹಳ ಶ್ರಮಿಸುತ್ತಿದೆ. ತಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನದ ನಂತರ ನಿಮ್ಮ ಮುಂದೆ ಸಹಾಯಕ್ಕಾಗಿ ಕೈ ಚಾಚುತ್ತಿದೆ. ಈ ಕುಟುಂಬ ಹೇಗಿತ್ತು, ಆ ಹೆಣ್ಣುಮಗಳು ಹೇಗಿದ್ದಳು, ಈಗ ಹೇಗಾಗಿದ್ದಾಳೆ ಅನ್ನೋದನ್ನು ಅವರದೇ ಮಾತಲ್ಲಿ ಮುಂದೆ ಓದಿ.

"ಎರಡು ವರ್ಷಗಳ ಹಿಂದೆ ನಮ್ಮ ಕುಟುಂಬಕ್ಕೆ ಇದ್ದ ಒಂದೇ ಒಂದು ದಾರಿ ಎಂದರೆ ಅದು ಆತ್ಮಹತ್ಯೆಯಾಗಿತ್ತು. ಅಂತಹ ಪರಿಸ್ಥಿತಿಯನ್ನು ನಾವು ತಲುಪಿದ್ದೆವು. ಪ್ರತಿ ದಿನವೂ ನಾವು ನೋವಿನಿಂದ ನರಳುತ್ತಾ ಕಳೆಯುತ್ತಿದ್ದೆವು. ಇದಕ್ಕೆ ಕಾರಣ ಏನೆಂದರೆ, ನಮ್ಮ ಮಗಳ ಚಿಕಿತ್ಸೆಗೆ ಸಾಕಷ್ಟು ಹಣ ನಮ್ಮ ಬಳಿ ಇರಲಿಲ್ಲ".

"ಅಮ್ಮ, ನೀನು ಏಕೆ ಹೋಗಿ ಎಲ್ಲರ ಬಳಿ ದುಡ್ಡು ಕೇಳುತ್ತಾ ಇದ್ದೀಯಾ? ಇದು ನನಗೆ ಇಷ್ಟವಾಗುತ್ತಾ ಇಲ್ಲ" ಎಂದು ನಮ್ಮ ಮಗಳು ಹೇಳುತ್ತಿದ್ದಳು. ಆದರೆ ನಮ್ಮ ಹತ್ತಿರ ನಿನ್ನ ಚಿಕಿತ್ಸೆಗೆ ಬೇಕಾದಷ್ಟು ಹಣ ಇಲ್ಲವೆಂದು ಯಾವ ಬಾಯಿಯಿಂದ ಅವಳ ಬಳಿ ಹೇಳುವುದು? ನಮ್ಮ ಹೃದಯ ಒಡೆದು ಚೂರು ಚೂರಾಗಿತ್ತು. ನಮ್ಮ ಮಗಳಿಗೆ ಥಲಸ್ಸೆಮಿಯಾ ಮೇಜರ್ ಕಾಯಿಲೆಯಿದ್ದು, ಅದರ ಚಿಕಿತ್ಸೆಗೆ ಸುಮಾರು 9,40,000 ರುಪಾಯಿ (US $ 14,462)ಬೇಕಾಗಿದೆ. ಇದರಿಂದ ಅವಳ ಅಸ್ಥೆ ಮಜ್ಜೆಯ ಕಸಿ ಮಾಡಬೇಕು.

ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಅಸಹಾಯಕ ತಾಯಿ ನಾನು. ಈ ಸ್ಥಿತಿ ನನಗೆ ಪ್ರತಿ ದಿನವೂ ಕಣ್ಣೀರು ತರಿಸುತ್ತದೆ. ನನ್ನ ಹೆಸರು ಮುತುವಲ್ಲಿ ಮತ್ತು ನನ್ನ ಆರು ವರ್ಷದ ಮಗಳ ಹೆಸರು ವಿನಿಶ್ರೀ. ಅವಳು ಹುಟ್ಟಿದಾಗಿನಿಂದ ಕಾಯಿಲೆಯಿಂದ ನರಳುತ್ತಿದ್ದಾಳೆ. ಅವಳಿಗೆ ಥಲಸ್ಸೆಮಿಯಾ ಮೇಜರ್ ಇದೆ ಎಂಬ ವಿಷಯ ಅವಳು ಹುಟ್ಟಿ ಮೂರು ತಿಂಗಳ ಬಳಿಕ ನಮಗೆ ತಿಳಿಯಿತು.

ಅವಳ ದೇಹದ ಉಷ್ಣಾಂಶ ಹೆ,ಚ್ಚಿ ಅವಳಿಗೆ ಥಂಡಿ ಕೂಡ ಆಗಿತ್ತು. ಅದಕ್ಕಾಗಿ ನಾವು ಹತ್ತಿರವೇ ಇದ್ದ ಕಾರೈಕಲ್ ನ ವೈದ್ಯರೊಬ್ಬರ ಬಳಿಗೆ ಅವಳನ್ನು ಕರೆದುಕೊಂಡು ಹೋದೆವು. ಅಲ್ಲಿಂದ ನಾವು ಮೂರಕ್ಕಿಂತ ಹೆಚ್ಚು ಆಸ್ಪತ್ರೆಗಳಿಗೆ ಅವಳನ್ನು ಕರೆದುಕೊಂಡು ಹೋದೆವು. ಅದು ಕಾರೈಕಲ್ ನಿಂದ ಪುದುಚೆರಿಗೆ ಹೋಗಿ ಈಗ ಚೆನ್ನೈ ತನಕ ಬಂದು ನಿಂತಿದೆ.

ಅವಳಿಗೆ ಮೂರು ತಿಂಗಳದಾಗಿನಿಂದ ಹಿಡಿದು ಇಲ್ಲಿಯವರೆಗೂ ಅವಳ ರಕ್ತ ವರ್ಗಾವಣೆಗೆ ನಾವು ಪ್ರತಿ ತಿಂಗಳು ಹಲವಾರು ದಿನ ಆಸ್ಪತ್ರೆಗಳಿಗೆ ಹೋಗಿ ಬರುತ್ತಿದ್ದೇವೆ. ಪ್ರಸ್ತುತ ಅವಳ ರಕ್ತ ವರ್ಗಾವಣೆ ಚೆನ್ನೈನ vhs ಆಸ್ಪತ್ರೆಯಲ್ಲಿ ನಡೆಯುತ್ತಾ ಇದೆ ಹಾಗೂ ಅವಳ ಚಿಕಿತ್ಸೆ ಚೆನ್ನೈ ನ ಅಪೋಲೋ ಆಸ್ಪತ್ರೆಯಲ್ಲಿ ನಡೆಯುತ್ತದೆ.

ನನ್ನ ಗಂಡನ ಹೆಸರು ಅಂಬಾಜ್ಹಳಗನ್. ಅವರು ವೃತ್ತಿಯಿಂದ ಒಬ್ಬ ಮೀನಿನ ವ್ಯಾಪಾರಿ. ನಮ್ಮ ಮನೆಗೆ ಅವರೊಬ್ಬರೇ ದುಡಿಯುವ ವ್ಯಕ್ತಿ. ಅವರ ಪ್ರತಿ ತಿಂಗಳ ಆದಾಯ ಸುಮಾರು 4,000 ರುಪಾಯಿ. ಅದು ಅವರು ಹಿಡಿಯುವ ಮೀನಿನ ಮೇಲೆ ಅವಲಂಬಿತವಾಗಿರುತ್ತದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಆದಾಯದ ಮಾರ್ಗ ನಮಗೆ ಇಲ್ಲ.

ಅವಳ ಚಿಕಿತ್ಸೆಗೆ ಏನನ್ನಾದರೂ ಮಾರಿ ಹಣವನ್ನು ಹೊಂದಿಸೋಣವೆಂದರೆ ನಮ್ಮ ಹತ್ತಿರ ಯಾವುದೇ ಆಸ್ತಿ ಕೂಡ ಇಲ್ಲ. ನಾವು ಆದಷ್ಟು ಬೇಗ ಹಣವನ್ನು ಕಟ್ಟಬೇಕು. ಅದರ ನಂತರವೇ ಅವಳ ಚಿಕಿತ್ಸೆ ಶುರು ಮಾಡಲು ಸಾಧ್ಯ. ನಮಗೆ ನಿಮ್ಮ ಸಹಾಯ ಖಂಡಿತವಾಗಿಯೂ ಅವಶ್ಯಕವಾಗಿದೆ.

ಮಕ್ಕಳೇ ದೇಶದ ಮುಂದಿನ ಪ್ರಜೆಗಳು. ಅವರ ಮೂಲಕವೇ ನಾವು ಭವಿಷ್ಯದ ಸಮಾಜವನ್ನು ಕಟ್ಟಲು ಸಾಧ್ಯ. ಆದ್ದರಿಂದ ಅವರಿಗೆ ಒಳ್ಳೆಯ ಭವಿಷ್ಯವನ್ನು ಕಟ್ಟಿಕೊಡುವುದು ನಮ್ಮ ಹೊಣೆಯಾಗಿದೆ ಮತ್ತು ವಿನಿಶ್ರೀ ಕೂಡ ಇದಕ್ಕೆ ಹೊರತಾಗಿಲ್ಲ. ನಿಮ್ಮ ಕಡೆಯಿಂದ ಆಗುವ ಯಾವುದೇ ಸಹಾಯ ಬಹಳ ಮುಖ್ಯವಾಗಿದೆ. ಕೈ ಜೋಡಿಸಿ ಕೇಳಿಕೊಳ್ತೀನಿ, ನೆರವು ನೀಡುವ ಮೂಲಕ ಅವಳಿಗೆ ಒಂದು ಜೀವನವನ್ನು ನೀಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+