ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ ಲೀಕ್‌ ಮಾಡಿ ನರೇಂದ್ರ ಮೋದಿ ಬಗ್ಗೆ ಅಪಪ್ರಚಾರ

|
Google Oneindia Kannada News

ನವ ದೆಹಲಿ, ಮೇ 13: ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ (ಮಂಗಳವಾರ) ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ, ಈ ಸಂದರ್ಭವನ್ನು ಬಳಸಿಕೊಂಡು ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದಾರೆ.

ನಿನ್ನೆ ರಾತ್ರಿ 8 ಗಂಟೆಗೆ ಮೋದಿ ಕೊರೊನಾ ಲಾಕ್‌ಡೌನ್ ಬಗ್ಗೆ ದೇಶದ ಜನರಿಗೆ ಸಂದೇಶ ನೀಡಲು ಬರುವುದಾಗಿ ತಿಳಿಸಿದ್ದರು. ಅವರ ಮಾತು, ಮುಂದಿನ ಆದೇಶ ಏನು ಎಂದು ಜನ ಕಾಯುತ್ತಿದ್ದರು. ಆದರೆ, ಅದಕ್ಕೆ ಒಂದು ಗಂಟೆ ಮುಂಚೆ ಸೋಷಿಯಲ್ ಮೀಡಿಯಾದಲ್ಲಿ ಮೋದಿರ ಒಂದು ವಿಡಿಯೋ ಹರಿದಾಡಲು ಶುರುವಾಯಿತು.

ಲಾಕ್ ಡೌನ್ 4 ಘೋಷಿಸಿ ಜನರ ಮೆದುಳಿಗೆ ಇನ್ನಷ್ಟು ಹುಳಬಿಟ್ಟ ಪ್ರಧಾನಿ ಮೋದಿ ಲಾಕ್ ಡೌನ್ 4 ಘೋಷಿಸಿ ಜನರ ಮೆದುಳಿಗೆ ಇನ್ನಷ್ಟು ಹುಳಬಿಟ್ಟ ಪ್ರಧಾನಿ ಮೋದಿ

ಈ ವಿಡಿಯೋದಲ್ಲಿ ಮೋದಿ 8 ಗಂಟೆಯ ಭಾಷಣಕ್ಕಾಗಿ ಎಷ್ಟೊಂದು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ಮೇಕಪ್ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು. ಆದರೆ, ಇದೊಂದು ಹಳೆಯ ವಿಡಿಯೋವಾಗಿದ್ದು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಈಗ ಹರಿಬಿಟ್ಟು ಸುಳ್ಳು ಸುದ್ದಿಯನ್ನು ತೆಲಿಬಿಡಲಾಗಿದೆ.

40 ಸೆಕೆಂಡ್ ವಿಡಿಯೋ

40 ಸೆಕೆಂಡ್ ವಿಡಿಯೋ

ಮೋದಿ ನಿನ್ನೆ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡುವ ಮುನ್ನ ಹೇಗೆ ರೆಡಿಯಾದರು ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಒಂದು ವಿಡಿಯೋ ಹರಿಬಿಟ್ಟರು. ಆದರೆ, ಇದೊಂದು ಹಳೆಯ ವಿಡಿಯೋವಾಗಿದೆ. 40 ಸೆಕೆಂಡ್ ವಿಡಿಯೋ ಇದಾಗಿದ್ದು, ಅಂತರಾಷ್ಟ್ರೀಯ ಮೇಕಪ್ ಕಲಾವಿದರು ಮೋದಿಗೆ ಮೇಕಪ್ ಮಾಡುತ್ತಿದ್ದಾರೆ. ನಿನ್ನೆ ಏಳು ಗಂಟೆ ಸುಮಾರಿಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಪ್ರಾರಂಭವಾಯಿತು.

2016ರಲ್ಲಿ ತೆಗೆದ ವಿಡಿಯೋ

2016ರಲ್ಲಿ ತೆಗೆದ ವಿಡಿಯೋ

ಆದರೆ, ಮೋದಿಯ ಈ ವಿಡಿಯೋ ನಾಲ್ಕು ವರ್ಷಗಳ ಹಿಂದಿನದ್ದಾಗಿದೆ. 2016ರಲ್ಲಿ ಮೋದಿರ ಮೇಣದ ಪ್ರತಿಮೆ ಮಾಡುವ ಸಮಯದಲ್ಲಿ ಚಿತ್ರೀಕರಣವಾದ ವಿಡಿಯೋ ಇದಾಗಿದೆ. ಆ ಸಮಯದಲ್ಲಿ ಮ್ಯಾಡಮ್ ಟುಸ್ಸಾಡ್ಸ್ ತಮ್ಮ ತಂಡದೊಂದಿಗೆ ನವ ದೆಹಲಿಯ ನಿವಾಸದಲ್ಲಿ ಮೋದಿರನ್ನು ಭೇಟಿ ಮಾಡಿದ್ದರು. ಮೇಣದ ಪ್ರತಿಮೆಗೆ ಬೇಕಾದ ವಿವರಗಳನ್ನು ಪಡೆದರು. ಮೇಕಿಂಗ್ ವಿಡಿಯೋ ರೀತಿ ಈ ವಿಡಿಯೋ ಶೂಟ್ ಮಾಡಲಾಗಿತ್ತು.

ಮೋದಿ ಘೋಷಣೆ ಮಾಡಿದ್ದು ಐತಿಹಾಸಿಕ ಪ್ಯಾಕೇಜ್: ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾಮೋದಿ ಘೋಷಣೆ ಮಾಡಿದ್ದು ಐತಿಹಾಸಿಕ ಪ್ಯಾಕೇಜ್: ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ

ಮೋದಿ ಮೇಣದ ಪ್ರತಿಮೆ

2016ರಲ್ಲಿ ಲಂಡನ್, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಬ್ಯಾಂಕಾಕ್‌ನ ನಾಲ್ಕು ಪ್ರಮುಖ ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯಗಳಲ್ಲಿ ಮೇಣದ ಆಕೃತಿಯನ್ನು ಮಾಡಲು ಪ್ರಬಲ ವಿಶ್ವ ನಾಯಕರ ಪಟ್ಟಿ ಮಾಡಲಾಗಿತ್ತು. ಇದರಲ್ಲಿ ಪಿಎಂ ನರೇಂದ್ರ ಮೋದಿ ಸಹ ಇದ್ದರು. ಮ್ಯಾಡಮ್ ಟುಸ್ಸಾಡ್ಸ್ ಮೋದಿ ಭೇಟಿ ಮಾಡಿದರು. ಆ ಸಮಯದಲ್ಲಿ ಈ ವಿಷಯ ದೊಡ್ಡ ಸುದ್ದಿ ಮಾಡಿತ್ತು.

ಮೋದಿ ಬಗ್ಗೆ ಅಪಪ್ರಚಾರ

ಮೋದಿ ಬಗ್ಗೆ ಅಪಪ್ರಚಾರ

ಈಗಾಗಲೇ ಮೋದಿ ವಿದೇಶ ಪ್ರಯಾಣ, ಫೋಟೋ ಸೆಷನ್‌ಗಳನ್ನು ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಕಿಂಡಲ್ ಮಾಡುತ್ತಾರೆ. ನಿನ್ನೆ ಈ ವಿಡಿಯೋ ಮೂಲಕವೂ ಕ್ಯಾಮರಾ ಮುಂದೆ ಬರಲು ಮೋದಿ ಹೇಗೆಲ್ಲ ತಯಾರಿ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಆದರೆ, ಇದೊಂದು ಹಳೆಯ ವಿಡಿಯೋವಾಗಿದ್ದು, ಸುಳ್ಳು ಸುದ್ದಿಯಾಗಿದೆ.

English summary
Fake video: Prime Minister in a grand make up session. The video shoot in when PM Modi met Madame Tussauds artistes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X