Get Updates
Get notified of breaking news, exclusive insights, and must-see stories!

ನಕಲಿ ಪಾಸ್ಪೋರ್ಟ್ ಕೇಸ್: ಛೋಟಾ ರಾಜನ್ ಗೆ 7 ವರ್ಷ ಜೈಲು

ನಕಲಿ ಪಾಸ್ಪೋರ್ಟ್ ಪಡೆದ ಪ್ರಕರಣ ಸಾಬೀತಾಗಿರುವ ಹಿನ್ನಲೆಯಲ್ಲಿ ದೆಹಲಿ ಹೈಕೋರ್ಟ್ ಭೂಗತ ಪಾತಕಿ ಛೋಟಾ ರಾಜನ್ ಹಾಗೂ ಇತರ ಮೂವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ನವದೆಹಲಿ, ಏಪ್ರಿಲ್ 25: ನಕಲಿ ಪಾಸ್ಪೋರ್ಟ್ ಪಡೆದ ಪ್ರಕರಣ ಸಾಬೀತಾಗಿರುವ ಹಿನ್ನಲೆಯಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಹಾಗೂ ಇತರ ಮೂವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ದೆಹಲಿ ಹೈಕೋರ್ಟ್ ಈ ಆದೇಶ ನೀಡಿದ್ದು ನಾಲ್ವರ ಮೇಲೆಯೂ ತಲಾ 15,000 ರೂಪಾಯಿ ದಂಡವನ್ನೂ ವಿಧಿಸಿದೆ. ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ಛೋಟಾ ರಾಜನ್ ಹಾಗೂ ಆತನಿಗೆ ನಕಲಿ ಪಾಸ್ ಪೋರ್ಟ್ ನೀಡಿದ್ದ ಮೂವರು ಪಾಸ್ ಪೋರ್ಟ್ ಅಧಿಕಾರಿಗಳನ್ನು ಅಪರಾಧಿಗಳೆಂದು ದೆಹಲಿ ಹೈಕೋರ್ಟ್ ಸೋಮವಾರ ಘೋಷಿಸಿತ್ತು. ಮತ್ತು ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.

Fake passport case: Seven years jail for Chhota Rajan

2017ರ ಜನವರಿಯಲ್ಲಿ ಛೋಟಾ ರಾಜನ್ ಹಾಗೂ ಆತನ ಮೂವರು ಸಹಚರರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಇದಲ್ಲದೆ, ಈ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ), ಪಾಸ್ ಪೋರ್ಟ್ ಅಧಿಕಾರಿಗಳಾದ ಜಯಶ್ರೀ ರಾಹಟೆ, ದೀಪಕ್ ನಟವರ್ ಲಾಲ್, ಲಲಿತಾ ಲಕ್ಷ್ಮಣ್ ಅವರು ನಕಲಿ ಪಾಸ್ ಪೋರ್ಟ್ ನೀಡಲು ಸಹಕರಿಸಿದ್ದಾರೆಂದು ಆರೋಪಿಸಿತ್ತಲ್ಲದೆ, ನ್ಯಾಯಾಲಯದಲ್ಲಿ ಅವರ ವಿರುದ್ಧ ಆರೋಪ ಪಟ್ಟಿಯನ್ನೂ ಸಲ್ಲಿಸಿತ್ತು.

ಈ ಪ್ರಕರಣ ನಡೆದಿದ್ದು 90ರ ದಶಕದಲ್ಲಿ. ಆಗ, ಛೋಟಾ ರಾಜನ್ ಗೆ 'ಮೋಹನ್ ಕುಮಾರ್' ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಸ್ ಪೋರ್ಟ್ ನೀಡಲಾಗಿತ್ತು. ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವಾರು ದೇಶಗಳಿಗೆ ಬೇಕಿದ್ದ ಛೋಟಾ ರಾಜನ್ ಮೇಲೆ 1995ರಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಆತ ನಕಲಿ ಪಾಸ್ ಪೋರ್ಟ್ ಪಡೆದು ತನಗೆ ಬೇಕಾದಲ್ಲಿಗೆ ಸುತ್ತಾಡಲು ಸಂಚು ರೂಪಿಸಿದ್ದ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+