ವಿಪರೀತ ಚಳಿ- ಸ್ನಾನ ಮಾಡಲು ಬಿಗ್ ಪ್ಲ್ಯಾನ್ ಮಾಡಿದ ವ್ಯಕ್ತಿ
ದೇಶದ ಹಲವೆಡೆ ಕೊರೆಯುವ ಚಳಿಗೆ ಜನ ಮನೆ ಬಿಟ್ಟು ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬೆಳಗಿನ ಜಾವ ಸಂಜೆ ವೇಳೆ ಆವರಿಸುವ ದಟ್ಟ ಮಂಜು ಮತ್ತು ಚಳಿ ಜನರಿಗೆ ಅನಾರೋಗ್ಯದ ಭೀತಿಯನ್ನು ಹುಟ್ಟಿಸಿದೆ. ಇದೆಲ್ಲದರ ನಡುವೆ ಕೆಲ ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿಪರೀತ ಚಳಿಗೆ ಹಿಡಿದ ಕೈಗನ್ನಡಿಯಾಗಿವೆ. ಹೀಗೊಂದು ವೈರಲ್ ವಿಡಿಯೋದಲ್ಲಿ ಚಳಿಯಿಂದಾಗಿ ಬೆಳಿಗ್ಗೆ ಸ್ನಾನವನ್ನು ವ್ಯಕ್ತಿ ಹೇಗೆ ತಪ್ಪಿಸುತ್ತಾನ್ನೆನ್ನುವುದು ವಿಡಿಯೋ ವೈರಲ್ ಆಗಿದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಜನರು ನೀರನ್ನು ಸ್ವಲ್ಪ ಬಿಸಿ ಮಾಡಿದ ನಂತರ ಸ್ನಾನ ಮಾಡುತ್ತಾರೆ. ಆದರೆ ನೀವು ತಣ್ಣೀರಿನಿಂದ ಸ್ನಾನ ಮಾಡುತ್ತಿದ್ದರೆ, ನೀವು ಈ ವಿಡಿಯೊವನ್ನು ನೋಡಲೇಬೇಕು. ಇದರಲ್ಲಿ ಒಬ್ಬ ವ್ಯಕ್ತಿಯು ಸ್ನಾನ ಮಾಡಲು ಬಯಸುತ್ತಾನೆ. ಆದರೆ ಅವನು ನೀರನ್ನು ಮುಟ್ಟಿದ ತಕ್ಷಣ ನಡುಗುತ್ತಾನೆ. ವಿಡಿಯೊದಲ್ಲಿ ವ್ಯಕ್ತಿಯು ಒಂದು ಹನಿ ನೀರನ್ನು ಸಹ ಖರ್ಚು ಮಾಡುವುದಿಲ್ಲ. ಆದರೆ ಸ್ನಾನವನ್ನು ಮಾಡುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಅವನು ಸ್ನಾನ ಮಾಡುವ ಸಂಪೂರ್ಣ ಕಾರ್ಯವನ್ನು ಮಾಡುತ್ತಾನೆ. ಆದರೆ ಒಂದು ಹನಿ ನೀರನ್ನು ಸಹ ಖರ್ಚು ಮಾಡುವುದಿಲ್ಲ. ಮೊದಲ ವ್ಯಕ್ತಿ ತನ್ನ ಕೈಯಿಂದ ನೀರಿನ ತಾಪಮಾನವನ್ನು ಪರೀಕ್ಷಿಸುತ್ತಾನೆ. ನೀರು ಕೈಗೆ ತಾಗಿದಾಗ ನಡುಗುತ್ತಾನೆ. ವಾಸ್ತವವಾಗಿ ನೀರು ಸಾಕಷ್ಟು ತಂಪಾಗಿರುತ್ತದೆ. ಬಳಿಕ ಆತ ನೀರಿಲ್ಲದೆ ಸ್ನಾನ ಮಾಡಲು ನಿರ್ಧರಿಸುತ್ತಾನೆ. ನೀರಿನ ಪಾತ್ರೆಯಿಂದ ನೀರು ತೆಗೆಯುವಂತೆ ನಟಿಸುತ್ತಿದ್ದರೂ ಅವರ ಚೊಂಬು ನೀರನ್ನು ಮುಟ್ಟದೇ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಮಯದಲ್ಲಿ ವ್ಯಕ್ತಿಯು ತನ್ನ ದೇಹವನ್ನು ನಿಜವಾಗಿಯೂ ತನ್ನ ಮೇಲೆ ನೀರನ್ನು ಸುರಿಯುತ್ತಿರುವಂತೆ ಉಜ್ಜುತ್ತಾನೆ. ಬಳಿಕ ಟವೆಲ್ ನಿಂದ ಒರೆಸಿಕೊಳ್ಳುತ್ತಾನೆ. ಆದರೆ, ಈ ಸೋಗು ಸ್ನಾನದಲ್ಲಿ ಅವರ ಮೈಮೇಲೆ ಒಂದು ಹನಿ ನೀರು ಕೂಡ ಬೀಳುವುದಿಲ್ಲ.

ಚಳಿಗಾಲದಲ್ಲಿ ಈ ವಿಡಿಯೊ ಹೆಚ್ಚಾಗಿ ಇಂಟರ್ನೆಟ್‌ನಲ್ಲಿ ಟ್ರೆಂಡ್ ಆಗುತ್ತಿದೆ. ವಾಸ್ತವವಾಗಿ ಈ ವಿಡಿಯೊ 2018 ರಲ್ಲಿ ವೈರಲ್ ಆಗಿತ್ತು. ಈಗ ನಾಲ್ಕು ವರ್ಷದ ನಂತರ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಇಂಟರ್ನೆಟ್ ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ಜನರು ಇದನ್ನು ನೀರಿನ ಉಳಿತಾಯದ ವಿಶಿಷ್ಟ ಮಾರ್ಗವೆಂದು ಹೇಳಿದರು.
ಆದರೆ ವಿಡಿಯೋದಲ್ಲಿ ಕಾಣುತ್ತಿರುವ ವ್ಯಕ್ತಿ ನೀರಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ನೋಡುಗರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಇದು ಹೆಚ್ಚುತ್ತಿರುವ ಚಳಿಯನ್ನು ಪ್ರತಿನಿಧಿಸುತ್ತೆ. ಇಂತಹ ಪರಿಸ್ಥಿತಿಯಲ್ಲಿ ಸ್ನಾನ ಮಾಡಿದ ಅನುಭವ ಬರಲು ಈ ರೀತಿ ಮಾಡುತ್ತಿದ್ದಾರೆಂದು ವಿಡಿಯೋ ಬಿಂಬಿಸುತ್ತದೆ. ವ್ಯಕ್ತಿ ಸ್ನಾನ ಮಾಡುವ ಸ್ಥಳ ಸಾರ್ವಜನಿಕ ಸ್ನಾನ ಎಂದು ಹೇಳಲಾಗಿದೆ. ಅಲ್ಲಿ ಪಾತ್ರೆಯಲ್ಲಿ ತುಂಬಿದ ನೀರು ತುಂಬಾ ತಂಪಾಗಿದ್ದು ಆ ನೀರಿನಲ್ಲಿ ಸ್ನಾನ ಮಾಡುವುದು ಅಸಾಧ್ಯವಾದ ಮಾತು ಎಂದು ವಿಡಿಯೋದ ಮೂಲಕ ತಿಳಿಯುತ್ತದೆ. ಒಟ್ಟಿನಲ್ಲಿ ಜನ ಒಂದಲ್ಲಾ ಒಂದು ರೀತಿ ಹೆಚ್ಚುತ್ತಿರುವ ಚಳಿಯನ್ನು ಪ್ರಸ್ತುತಪಡಿಸಲು ಯೋಚಿಸುತ್ತಿದ್ದಾರೆ.











Click it and Unblock the Notifications