India Weather: ತಗ್ಗಿದ ಚಂಡಮಾರುತ ಪ್ರಸರಣ: ಜುಲೈ 31ರವರೆಗ ಈ ಭಾಗಗಳಿಗೆ ಭಾರೀ ಮಳೆ ಮುನ್ಸೂಚನೆ

IMD Weather Forecast: ಒಂದು ತಿಂಗಳಿನಿಂದ ದೇಶದ ನಾನಾ ಕಡೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ದಕ್ಷಿಣ ಭಾರತದ ನಂತರ ಉತ್ತರ ಭಾರತದಲ್ಲಿ ಕಳೆದ ನಾಲ್ಕೈದು ವಾರಗಳಲ್ಲಿ ಭಾರೀ ಮಳೆ (Heavy Rain Alert) ಆಗುತ್ತಿದೆ. ಸದ್ಯ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲೂ ಸಕ್ರಿಯವಾಗಿರುವ ಮುಂಗಾರು ಮಳೆ ಕೊಂಚ ತಗ್ಗಿದೆ. ಕಾರಣ ತೀವ್ರ ಸ್ವರೂಪದಲ್ಲಿದ್ದ ಚಂಡಮಾರುತ ಪ್ರಸರಣದ (Cyclonic Circulation) ತೀವ್ರತೆ ಇಳಿಕೆ ಆಗಿದೆ. ಹೀಗಾಗಿ ಮಳೆ ಇಳಿಮುಖ ಮಾಡಿದೆ. ಹೀಗಿದ್ದರೂ ಸಹಿ ಒಂದಷ್ಟು ರಾಜ್ಯಗಳಲ್ಲಿ ಭಾರೀ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಕೆಲವು ರಾಜ್ಯಗಳಲ್ಲಿ ಅಗತ್ಯವಿದ್ದ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ (School Holidays) ಸಹ ಘೋಷಿಸುವ ಸಾಧ್ಯತೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ವಾಯುವ್ಯ ಮಧ್ಯಪ್ರದೇಶ ಮತ್ತು ಪಕ್ಕದ ಪೂರ್ವ ರಾಜಸ್ಥಾನದ ಮೇಲೆ ಇಂದು ಸೋಮವಾರ (ಜುಲೈ 28) ಬೆಳಗ್ಗೆ 08.30ಕ್ಕೆ ಕಡಿಮೆ ಒತ್ತಡದ ಪ್ರದೇಶ ಉಂಟಾಗಿದೆ. ಸದ್ಯ ತನ್ನ ಮೂಲ ಪ್ರದೇಶದಲ್ಲೇ ಮುಂದುವರಿಯುತ್ತಿರುವ ಈ ಹವಾಮಾನ ವೈಪರೀತ್ಯವು ತಗ್ಗುವ ಎಲ್ಲ ಲಕ್ಷಣ ಇದೆ. ಅಲ್ಲದೇ ಸಮುದ್ರ ಮೇಲ್ಮೈನಲ್ಲಿ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿಲೋ ಮಿಟರ್ ವರೆಗ ವಿಸ್ತರಣೆ ಆಗಿದೆ. ಇದರಿಂದ ನೈಋತ್ಯಕ್ಕೆ ಓರೆಯಾಗಿದ್ದು, ಅದೇ ಭಾಗದತ್ತ ಸಂಚರಿಸಲಿದೆ. ಈ ಮೊದಲು ಇದರ ಎತ್ತರ 7 ಕಿಲೋ ಮೀಟರ್‌ನಷ್ಟಿದತ್ತು. ಇಂದು ಕೊಂಚ ಕಡಿಮೆ ಆಗಿದೆ.

Extreme Heavy Rain for These Few States until July 31st Due To Climate Change on Sea Level

ಬಿರುಗಾಳಿ ವೇಗ ಗಂಟೆಗೆ 50-60 ಕಿ.ಮೀ.

ಇಷ್ಟೇ ಅಲ್ಲದೇ ಗುಜರಾತ್-ಉತ್ತರ ಕೇರಳ ಕರಾವಳಿಯಲ್ಲಿ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಸ್ಟ್ರಫ್ ಉಂಟಾಗಿದೆ. ಸಮುದ್ರ ಮಟ್ಟದಲ್ಲಿ ಬಿರುಗಾಳಿ, ಕಡಿಮೆ ಒತ್ತಡದ ಪ್ರದೇಶ ಮುಂದುವರಿಯುತ್ತಿದೆ. ಭೂಮಿ ಮೇಲ್ಮೈನಲ್ಲಿ ಅಂದರೆ ಮಧ್ಯ ಪ್ರದೇಶ, ಜಾರ್ಖಂಡ್ ಭಾಗದಲ್ಲಿ ಮತ್ತು ಪಶ್ಚಿಮ ಬಂಗಾಳದ ಉದ್ದಕ್ಕೂ ಸೃಷ್ಟಿಯಾಗಿದ್ದ ವಾಯುಭಾರ ಕುಸಿತ ಕೊನೆಗೊಂಡಿದೆ. ಹೀಗಾಗಿ ಈ ಭಾಗಗಳಲ್ಲಿ ಮಳೆರಾಯನ ಅಬ್ಬರ ಇಳಿಕೆಯಾಗಿದೆ. ಹೀಗಿದ್ದರೂ ಸಹ ಬಿರುಗಾಳಿ 50-60 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ ಎಂದು ಸೋಮವಾರದ ಹವಾಮಾನ ಇಲಾಖೆಯ ಮುನ್ಸೂಚನಾ ವರದಿಯಲ್ಲಿ ತಿಳಿಸಲಾಗಿದೆ.

ಜುಲೈ 31ರತನಕ ಎಲ್ಲೆಲ್ಲಿ ಭಾರೀ ಮಳೆ

ಜುಲೈ 31ರವರೆಗೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಬಿಹಾರ್, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ್‌ಗಳಲ್ಲಿ ಭಾರೀ ಮಳೆ ಆಗುವ ನಿರೀಕ್ಷೆ ಇದ್ದು, 'ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದಂತೆ ಉತ್ತರ ಪ್ರದೇಶ ಪೂರ್ವ ಭಾಗ, ಕರ್ನಾಟಕದ ಕರಾವಳಿ, ಜಾರ್ಖಂಡ, ಕೇರಳ, ತಮಿಳುನಾಡು, ಗೋವಾ, ಕೊಂಕಣ, ದೆಹಲಿ, ನಾಗಾಲ್ಯಾಂಡ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಗುಜರಾತ್ ಕರಾವಳಿ ಭಾಗಗಳು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ. ಹೀಗಾಗಿ ಮುಂದಿನ 48 ಗಂಟೆ ಈ ಭಾಗಗಳಿಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ.

ಕರ್ನಾಟಕ ಕರಾವಳಿ, ಒಡಿಶಾ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳಲ್ಲಿ ಕಳೆದೊಂದು ವಾರದಿಂದ ಜೋರು ಮಳೆ ದಾಖಲಾಗಿತ್ತದೆ. ಇಂದಿನಿಂದ ಆ ಪ್ರದೇಶಗಳಲ್ಲಿ ಮಳೆ ಇಳಿಮುಖವಾಗಿದ್ದು, ಚಳಿಯೇ ಹೆಚ್ಚಾಗಿದ್ದ ಕಡೆ ಬಿಸಿಲಿನ ದರ್ಶನವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+