ಯುವ ಮನಸುಗಳನ್ನು ಹಾಳು ಮಾಡುವ ಅಡಲ್ಟ್ ಸಿನಿಮಾ: ಡಾ ರೂಪಾ ರಾವ್ ಬರಹ
ಬೆಂಗಳೂರು: ಕನ್ನಡದ 'ಟಾಕ್ಸಿಕ್' ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಅದರಲ್ಲಿನ ಕೆಲ ದೃಶ್ಯಗಳು ಸುದ್ದಿಯಾದವು. ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿದ್ದು ನೋಡಿದ್ದೇವೆ. ಸಿನಿಮಾಗಳು, ವೆಬ್‌ಸಿರೀಸ್‌ಗಳಲ್ಲಿ ತೋರಿಸುವ ಲೈಂಗಿಕತೆಯ ದೃಶ್ಯಗಳು ಮಕ್ಕಳ ಮೇಲೆ ಹೇಗೆಲ್ಲ ಮನೋವೈಜ್ಞಾನಿಕವಾಗಿ ಪರಿಣಾಮ ಬೀರುತ್ತವೆ. ಯುವ ಮನಸ್ಸಿನ ಮೇಲೆ ಈ ವಿಚಾರಗಳ ನಿರಂತರ ದಾಳಿ, ಲೈಂಗಿಕತೆ ಆಲೋಚನೆಗಳಿಂದ ಮನಸ್ಸು, ಮೆದುಳಿನಲ್ಲಿನ ಆಗುವ ಬದಲಾವಣೆ, ಸಂಬಂಧ ಹಾಗೂ ಸಿನಿಮಾಗಳ ಕುರಿತು ರಾಷ್ಟ್ರೀಯತಾವಾದಿ ಮತ್ತು ಎಂಪನೇಲ್ಡ್ ಮನಶ್ಶಾಶಸ್ತ್ರಜ್ಞರಾದ 'ರಾಪಾ ರಾವ್' ಅವರ ಫೆಸ್‌ಬುಕ್ ಬರಹ ಇಲ್ಲಿದೆ.
''ಮಡಿವಂತಿಕೆ ಬೇಡ, ಪಕ್ಕಕ್ಕೆ ಮುಜುಗರವನ್ನೂ ಎತ್ತಿಡೋಣ.. ಒಂದು ಹೊಸ ಪ್ರಯೋಗ ಅಂತ ಒಪ್ಪಿಕೊಳ್ಳೋಣ. ಕನ್ನಡದ್ದು ಇಂಟರ್ನ್ಯಾಷನಲ್ ಲೆವೆಲ್ಲಿಗೆ ಏರಿದ ಅಂತ ಹೆಮ್ಮೆ ಅಂತ ನೋಡೋಣ. ಹಾಗಾಗಿ ನಾನು ಬರೆಯುತ್ತಿರುವುದು 'ಟಾಕ್ಸಿಕ್' ಎಂಬ ಸಿನಿಮಾ ಟೀಸರ್ ಬಗ್ಗೆ ಮಾತ್ರ ಅಲ್ಲವೇ ಅಲ್ಲ.

ನಿಧಾನವಾಗಿ ಯುವ ಮನಸ್ಸುಗಳಿಗೆ ಲೈಂಗಿಕತೆ ಎಂಬ ಸೊಗಸಾದ ವಿಷಯದಲ್ಲಿ ವಿಕೃತಿ ಎಂಬ ವಿಷ ಉಣಿಸುತ್ತಿರುವ ಹಲವಾರು ಟಾಕ್ಸಿಕ್ ಸಿನಿಮಾಗಳು ವೆಬ್ ಸೀರೀಸ್ ಟೀಸರ್‌ಗಳ ಬಗ್ಗೆ. ಇಂತಹ ದೃಶ್ಯಾವಳಿಗಳು ಲೈಂಗಿಕ ಮಿಲನ ಮಹೋತ್ಸವದ ವಿಜೃಂಭಣೆ ಮನೋವೈಜ್ಞಾನಿಕವಾಗಿ ಮೆದುಳಿನ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದರ ವಿಶ್ಲೇಷಣೆಯೇ ಹೊರತು ಜಡ್ಜ್ಮೆಂಟ್ ಅಲ್ಲ ಹಾಗಾಗಿ ಸ್ಟಾರುಗಳ ಅಭಿಮಾನಿಗಳು, ಮತ್ತು ಇಂಟರ್ನ್ಯಾಷನಲ್ ಸಿನಿಮಾಗಳು ಅಭಿಮಾನಿಗಳು ಸಮಾಧಾನವಾಗಿ ಓದಿ.
ಹದಿನೆಂಟರ ಮೇಲಿನವರಿಗೆ ಮಾತ್ರ..
ಮೊದಲಿಗೆ ಇಂತಹ ದೃಶ್ಯಗಳು ಅಡಲ್ಟ್ ಮಾತ್ರ ಎಂಬ ಟೈಟಲ್ ಹೊತ್ತಿರುತ್ತವೆ. ಅಂದರೆ ಹದಿನೆಂಟರ ಮೇಲಿನವರಿಗೆ ಮಾತ್ರ.. ಮೊದಲಿಗೆ ಸ್ಪಷ್ಟಪಡಿಸೋಣ. ಯಂಗ್ ಬ್ರೈನ್ ಅಂದರೆ ಅಂದರೆ ಕೇವಲ ವಯಸ್ಸಿನ ಸಂಖ್ಯೆ ಅಲ್ಲ. ಇದು ಇನ್ನೂ ಪೂರ್ಣವಾಗಿ ರೂಪುಗೊಳ್ಳದ ಮೆದುಳು. ಈ ಮೆದುಳಿನಲ್ಲಿ ಭಾವನೆಗಳು ಆಲೋಚನೆಗಳಿಗಿಂತ ಬೇಗ ಬರುತ್ತವೆ. ಆಸೆಗಳು ತೀವ್ರವಾಗಿರುತ್ತವೆ. ಆದರೆ ತಾಳ್ಮೆ, ತೀರ್ಮಾನ, ಸ್ವನಿಯಂತ್ರಣ ಇವೆಲ್ಲವನ್ನು ನಿಯಂತ್ರಿಸುವ ಭಾಗ ಇನ್ನೂ ಸಂಪೂರ್ಣವಾಗಿ ಮ್ಯಾನುಫ್ಯಾಕ್ಚರಿಂಗ್ ಹಂತದಲ್ಲೇ ಇರುತ್ತದೆ.
ವಿಜ್ಞಾನ ಹೇಳುವುದೇನೆಂದರೆ, ಇಂತಹ ಮೆದುಳು 25 ವಯಸ್ಸಿನವರೆಗೂ ವೈರಿಂಗ್ ಪ್ರಕ್ರಿಯೆಯಲ್ಲೇ ಇರುತ್ತದೆ. ಅದಿನ್ನೂ ಚಿಕ್ಕ ಮಗುವೇ ಈ ಮೆದುಳುಗಳು ಅಡಲ್ಟ್ ಅನ್ನುವ ಹೆಸರಿನಲ್ಲಿ A ಸರ್ಟಿಫಿಕೇಟ್ ಇರುವ ಯುಟ್ಯೂಬ್ ನಲ್ಲಿ ವೆಬ್ಸೀರೀಸ್, ಮತ್ತು ಟೀಸರ್‌ಗಳನ್ನು ನೋಡುತ್ತವೆ.
'A ಸರ್ಟಿಫಿಕೇಟ್ ಇದೆ' ಮಕ್ಕಳು ನೋಡಲ್ಲಾ ಅಲ್ವಾ ಅಂತ ಮಾಧ್ಯಮಗಳು ತಿಪ್ಪೆ ಸಾರಿಸುತ್ತವೆ. 'ಅವರು ಯಾರೂ ಮಾಡದೇ ಇರೋದನ್ನೇನು ತೋರಿಸ್ತಿಲ್ಲ ಅಲ್ವಾ ಅಂತ ಪ್ರಗತಿಮುಖಿ ಜನ ಸಮಾಧಾನ' ಮಾಡುತ್ತಾರೆ. 'ಇವೆಲಾಲಾ ಇಷ್ಟೊಂದು ಕಾಮನ್ ಆಗಿ ಹೋಗಿದೆಯಾಕ್ರಿ ಯೋಚನೆ ಮಾಡೋದು ಅಂತ ನಾವೆಲ್ಲಾ ಹೇಳಿಬಿಡ್ತೇವೆ.' ಆದರೆ ಈ ಟೀಸರ್‌ಗಳು ಡಿಜಿಟಲ್ ಮಾಧ್ಯಮದಲ್ಲಿ ಕಾಣುವಾಗ ವಯಸ್ಸು ಕೇಳುವುದಿಲ್ಲ. ವಿಡಿಯೋಗಳು ಡೌನ್ಲೋಡ್ ಆಗಿ ಒಬ್ಬರಿಂದ ಒಬ್ಬರಿಗೆ ಹರಿಯುವಾಗ 'ನಿನ್ನ ವಯಸನ್ನು ಪ್ರೂವ್ ಮಾಡು' ಎಂದು ಕೇಳಲ್ಲ.
ಮಕ್ಕಳ ಕೈಲಿರುವ ಮೊಬೈಲ್‌ನಲ್ಲೂ ಅಂಥದ್ದೆ ದಶ್ಯಗಳು
ರೀಲ್ಸ್‌ಗಳು ಮೊಬೈಲ್‌ನಲ್ಲಿ ಬರಲು ಯಾರ ಪೋಷಕರ ಅನುಮತಿಯನ್ನೂ ಕಾಯುವುದಿಲ್ಲ. ಆ ದೃಶ್ಯಾವಳಿಗಳು ಅಡಲ್ಟ್‌ಗಳಳಿಗಾಗಿ ಮಾತ್ರ ಆಗಿರಬಹುದು. ಆದರೆ ಅದರ ಅತ್ಯಂತ ಉದ್ರೇಕಕಾರಿ ದೃಶ್ಯಗಳು ಈಗಾಗಲೇ ಎಲ್ಲರ ಫೋನ್‌ಗಳಿಗೆ ತಲುಪಿರುತ್ತವೆ. ಇದನ್ನು ನೋಡಿದ ಯಂಗ್ ಮನಸು ಮತ್ತು ಎಳೆ ಮೆದುಳುಗಳು ಹೇಗೆ ಟಾಕ್ಸಿಕ್ ಆಗಬಹುದು ಗೊತ್ತಾ.
ಸೆಕ್ಸ್ ಅಂದರೆ ಕೇವಲ ಉದ್ರೇಕ, ವಿಚಿತ್ರ ಶಬ್ಧ ವಿಕೃತಿ.. ಫ್ಯಾಂಟಸಿ ಎಂಬ ಆಲೋಚನೆ. ಮೆದುಳು ಒಂದು ವಿಷಯದ ಪುನರಾವರ್ತನೆಯಿಂದ ನೊಡಿ ನೋಡಿ ಕಲಿಯುತ್ತದೆ. ಅದರಲ್ಲಿಯೂ ಕಿರಿಯ ಮೆದುಳು, ಹೇಳಿ ಅಥವಾ ಬೈದು ಅಥವಾ ನಿಯಂತ್ರಣ ಮಾಡುವುದರಿಂದ ಅಲ್ಲ. ಇಂತಹ ವಿಡಿಯೋಗಳನ್ನು ನೋಡಿದಾಗ. ಮೊದಲು ಆಕ್ಟಿವೇಟ್ ಆಗೋದು ಮೆದುಳಿನ ಡೋಪಮಿನ್ ವ್ಯವಸ್ಥೆ. ಡೋಪಮಿನ್ ಅಂದ್ರೆ ಕೇವಲ ಸುಖದ ಹಾರ್ಮೋನ್, ಸಾಲದು 'ಮತ್ತೆ ಮತ್ತೆ ಇನ್ನೂ ಹೆಚ್ಚೂ ಬೇಕು' ಅನ್ನುವ ಹಾರ್ಮೋನ್.
ಸೆಕ್ಸುಯಲ್ ದೃಶ್ಯಗಳ ಗಾಢ ಪರಿಣಾಮ
ಇಂತಹ ವಿಡಿಯೋಗಳ ಪ್ರತಿ ಕ್ಲಿಪ್, ಪ್ರತೀ ಸೆಕ್ಸುಯಲ್ ದೃಶ್ಯಗಳು ಯಾವುದೇ ಕಷ್ಟಪಡದೇ, ಏನೂ ಆಗದೇ ಡೋಪಮೈನ್ ಅನ್ನು ಏರಿಸುತ್ತದೆ. ಪಾರ್ನ್ ದೃಶ್ಯದ ವೀಕ್ಷಣೆಯಂತೆಯೇ ದಿಢೀರ್ ಆಗಿ ಉದ್ರೇಕ ಆಗುವ ಉದ್ರೇಕ ಸಾಕು. ನಿಧಾನ ಊಹೂಂ ಬೇಡ ಬೇಡ. ಇದೊಂದು ಯುದ್ಧ ಈ ಯುದ್ಧದಲ್ಲಿ ಗೆಲ್ಲಬೇಕು ಅಷ್ಟೇ ಎದುರಾಳಿ, ವೀಕ್ ಅಂತ ಕಾಣುವ ಯಾರಾದರೂ ಗಂಡು, ಹೆಣ್ಣು, ಮಕ್ಕಳು, ವೃದ್ಧರು..ಯಾರೋ ಒಬ್ಬರು. ಇದರಿಂದ ವಾಸ್ತವ ಜೀವನದಲ್ಲಿ ಓದು, ಕೆಲಸ, ಸಂಬಂಧ ಎಲ್ಲವೂ ತುಂಬಾ ಸ್ಲೋ ಆಗಿ ಕಾಣುತ್ತಾರೆ. ಏಕೆಂದರೆ ಅಲ್ಲಿ ಡೋಪಮೈನ್ ತಕ್ಷಣ ಬರುತ್ತಿಲ್ಲ. ಆದರೆ ಇಂತಹವಿಡಿಯೋ ವೀಕ್ಷಣೆ ಡೋಪಾಮೈನ್ ಒಂದೇ ಬದುಕು ಎಂದು ಕಲಿಸಿ ಬಿಡುತ್ತೆ. ಡೋಪಾಮೈನ್‌ಗಿಂತ ಮುಖ್ಯ ಹಾರ್ಮೋನ್ ಆಕ್ಸಿಟೋಸಿನ್. ಇದು ನಂಬಿಕೆ, ಭದ್ರತೆ, ಬಂಧನಕ್ಕೆ ಸಂಬಂಧಿಸಿದ ಹಾರ್ಮೋನ್. ಆದರೆ ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ.
ಸುರಕ್ಷಿತ ಸಂಬಂಧ ಬೇಕು. ಆದರೆ ಲೈಂಗಿಕತೆಯನ್ನು ಕೇವಲ ದೃಶ್ಯ ಮಾಧ್ಯಮದ ಮೂಲಕ ಉದ್ರಿಕ್ತವಾಗಿ ಅನುಭವಿಸಿದ ಮೆದುಳು ಆಕ್ಸಿಟೋಸಿನ್‌ನ ಅರ್ಥವನ್ನೇ ಕಲಿಯುವುದಿಲ್ಲ. ಹೀಗಾಗಿ ದೈಹಿಕವಾಗಿ ನಿಕಟ ಸಂಪರ್ಕ ಬೇಕಾಗುತ್ತದೆ, ಆದರೆ ಮಾನಸಿಕ ಬಂಧನ ಬೇಡ. ಆಕರ್ಷಣೆ ಬೇಕು, ಆದರೆ ಹೊಣೆಗಾರಿಕೆ ಬೇಡ. ನೆನ್ನೆ ನಾನು ಹೇಳಿದ ಸಿಗರೇಟು ಸೇದಿ ಬಿಸಾಕುವಂತಹ ಮನೋಭಾವ ಒಂದಷ್ಟು ದಿನಗಳ ಸುಖ ಮಾತ್ರ ಬೇಕು ಎಂಬ ಆಲೋಚನೆ ಬರುವುದು ಹೀಗೆಯೇ.
ಇದರ ಜೊತೆಗೇ ನಿಧಾನವಾಗಿ ಏರುತ್ತಿರುವುದು ಕಾರ್ಟಿಸೋಲ್ ಹಾರ್ಮೋನ್ ಅತಿಯಾದ ಉದ್ರೇಕ, ಹೋಲಿಕೆ, ಪ್ರದರ್ಶನ ಇವೆಲ್ಲ ಮೆದುಳಿಗೆ ನಿರಂತರ ಸಣ್ಣ ಸಣ್ಣ ಒತ್ತಡ ಕೊಡುತ್ತವೆ. ಇದರಿಂದ ಅಶಾಂತಿ, ಅಸಮಾಧಾನ, ನಿರಂತರ restless feeling, ಆತಂಕ ಇವೆಲ್ಲ ಸಾಮಾನ್ಯವಾಗುತ್ತವೆ.
ಇನ್ನೊಂದು ಸೂಕ್ಷ್ಮ ಬದಲಾವಣೆ ನಾನು ಗಮನಿಸುತ್ತಿದ್ದೇನೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುವುದು ಅಂದ್ರೆ ಏನು ಅನ್ನೋ ಗೊಂದಲ ಜನರಲ್ಲಿ, ಧೈರ್ಯ, ಶೂರ ವೀರತನ ಅಂದ್ರೆ ದೈಹಿಕ ಲೈಂಗಿಕ ಪ್ರದರ್ಶನ. ಆಧುನಿಕತೆ ಅಂದ್ರೆ ಅಶ್ಲೀಲ ಮಾತುಗಳ ಅನಾವರಣ, ಲೈಂಗಿಕ ವಿಜ್ರಂಭಣೆಯ ಅತಿರೇಕ, ರಕ್ತಪಾತ, ತಲೆ ಕತ್ತರಿಸುವ ದೃಶ್ಯ, ಕೈ ಕಾಲು ಕಡಿಯುವ ಇತ್ಯಾದಿ ದೃಶ್ಯ ವೈಭವಗಳೇ ಅನ್ನುವ, ಗಂಡು ಹೆಣ್ಣು ಜೊತೆ ಇದ್ದಾರೆ ಅಂದ್ರೆ ಅವರಿಬ್ಬರಿಗೂ ಪರಸ್ಪರ ಇಷ್ಟ ಆಗಿ ಮಲಗುವುದು ಸರ್ವೇ ಸಾಮಾನ್ಯ ಅಂತ ಬಿಂಬಿಸುವ ಕಲ್ಪನೆ ಸಾಮಾನ್ಯವಾಗುತ್ತಿದೆ.
ಆದರೆ ನಮ್ಮ ನೆಲೆ ಬೇರೆ..ಭಾರತೀಯ ಮನಸ್ಸು ಬೆಳೆದ ಮಣ್ಣು ಬೇರೆ. ಒಮ್ಮೆ ಇಲ್ಲಿ ನಿಕಟವಾಗುವುದು ಅಂದ್ರೆ ಒಂದು ರಾತ್ರಿಯಲ್ಲಲ್ಲ , ಇದು ಭದ್ರತೆ, ಪರಸ್ಪರ ನಂಬಿಕೆ, ಭಾವನಾತ್ಮಕವಾಗಿ ಒಟ್ಟಾಗುವುದು ದೇಹಕ್ಕಿಂತ ಮುಂಚೆ ಮನಸ್ಸು ಒಂದಾಗುವ ಪ್ರಕ್ರಿಯೆ.
ಹಳೇ ಸಿನಿಮಾಗಳಲ್ಲಿ ಇಂತಹ ಸಿನ್‌ಗಳು ಹೇಗಿದ್ವು?
ಇಂತಹ ದೃಶ್ಯಗಳು ಆಗಲೂ ಇದ್ವು, ನಾನೇ ಹೇಳಿದಂತೆ, ಆದರೆ ಅವು ಒಂದೋ ಆ ಸನ್ನಿವೇಶಕ್ಕೆ ಪೂರಕವಾಗಿ ಗಂಡ ಹೆಂಡತಿಯ ಮಧ್ಯೆ ಇತ್ತು ಅದೂಸೂಚ್ಯವಾಗಿ, ಇನ್ನೊಂದು ಇಂತಹ ಒಂದು ಕ್ಷಣದ ತೃಪ್ತಿ ಗಳು ಕೇವಲ ಲಂಪಟ ಗಂಡು ಅಥವಾ ಹೀರೋ ಕೆಟ್ಟವನಾಗಿದ್ದಾಗ ಮಾತ್ರ ಸಾಧ್ಯ ಎಂಬಂತೆ ಇತ್ತು.
ರಾಜ್ ಅವರ ಸಿನಿಮಾ ದಾರಿ ತಪ್ಪಿದ ಮಗ ದಲ್ಲಿ ತೋರಿಸಿದ್ದು ಹೀಗೆ. ಅಷ್ಟೇ ಏಕೆ ಪುನೀತ್ ಅವರ ಯಾವ ಸಿನಿಮಾದಲ್ಲಿಯೂ ಈ ರೀತಿ ಒನ್ ನೈಟ್ ಸ್ಟಾಂಡ್ ನೋಡಿದ ನೆನಪಿಲ್ಲ. ಶಂಕರ್ ನಾಗ್ ಅವರ ಹೊಸ ಜೀವನ ಸಿನಿಮಾದಲ್ಲಿಯೂ ಅವರು ರೌಡಿ ಆಗಿದ್ದಾಗ ಮಾತ್ರ, ಆದರೆ ಇದು ಹೀರೋನ ಮುಖ್ಯ ಲಕ್ಷಣವಾಗಿ ಮಾರ್ಪಾಟಾಗಿರೋದು ಭಾರತೀಯ ಯುವ ಮನಸುಗಳನ್ನು ಲೋಲುಪ್ತತೆ ಎಡೆಗೆ ತಳ್ಳುವ ಪ್ರಯತ್ನವೂ ಇರಬಹುದು.
ಲೈಂಗಿಕತೆಯನ್ನು ಹೀಗೇ ದೃಶ್ಯ ವೈಭವ, ವಿಜಯಭೇರಿಯಾಗಿ, ವೇಗ, ಪ್ರದರ್ಶನವಾಗಿ ತೋರಿಸಿದಾಗ ಇನ್ನೂ ಬೆಳೆಯುತ್ತಿರುವ ಮೆದುಳು ಅರ್ಥ ಮಾಡಿಕೊಳ್ಳುವುದಿಲ್ಲ. ಅದು ಅನುಕರಿಸುತ್ತದೆ. ಇದರಿಂದ ತನ್ನ ಲೈಂಗಿಕ ಸಂಗಾತೀ ಇಂದ ಅತಿರೇಕದ ನಿರೀಕ್ಷೆ, ಸಂಬಂಧಗಳಿಗೆ ಅರ್ಥವೇ ಇಲ್ಲದ ಜೀವನ. ತನ್ನ ಜೊತೆಗೇ ಇರುವ ಇನ್ನೊಂದು ಮನುಷ್ಯನನ್ನು ಲೈಂಗಿಕವಾಗಿ ನೋಡುವ ದೃಷ್ಟಿ. ಎಲ್ಲವೂ ಬದಲಾಗುತ್ತದೆ.
ಲೈಂಗಿಕವಾಗಿ ಆಕ್ಟಿವ್ ಇರಲು ಮನಸ್ಸು ಚಡಪಡಿಕೆ
ಈಗಾಗಲೇ ನನ್ನದೊಂದು ಹಳೆಯ ಲೇಖನದಲ್ಲಿ ಪಾರ್ನ್ ಬಗ್ಗೆ ಬರೆದಿದ್ದೆ. ಲೈಂಗಿಕ ಸೂಚನೆಗಳು (porn, ಅಶ್ಲೀಲ ಪದಗಳು, ಬರಹಗಳು) ನಮ್ಮ ಮೆದುಳಿನಲ್ಲಿ ಲೈಂಗಿಕ ಕ್ರಿಯೆಯನ್ನು ನಡೆಸುವಂತೆ ಆಕ್ಟಿವೇಟ್ ಮಾಡುತ್ತದೆ. ಹಾಗಾಗಿಯೇ ಅಶ್ಲೀಲ ಪದ ಅಥವಾ ಪಾರ್ನ್ ಸಿನಿಮಾ ಮತ್ತು ಬರಹಗಳನ್ನು ನೋಡುವ ಮನಸು ಸದಾ ಲೈಂಗಿಕವಾಗಿ ಆಕ್ಟೀವ್ ಆಗಿರ ಬಯಸುತ್ತದೆ.
ಸಾಮಾನ್ಯವಾಗಿ ಪಾರ್ನ್ ಸಿನಿಮಾ, ಬರಹ ಅಥವಾ ಅಶ್ಲೀಲ ಸಂಭಾಷಣೆ ಇವುಗಳಲ್ಲಿ ಒಡ್ಡಿಕೊಂಡ ಮನಸು ಆ ಸಮಯಕ್ಕೆ ಸಿಕ್ಕವರನ್ನ ತನ್ನ ಲೈಂಗಿಕ ಸಂಗಾತಿ ಎಂದು ಭಾವಿಸುವುದಲ್ಲದೇ ಅವರಿಗೂ ಇಷ್ಟ ಇದೆ ಎಂದೇ ಅರ್ಥ ಮಾಡೀಕೊಳ್ಳುತ್ತದೆ. ಆದ್ದರಿಂದಲೇ ಚಿಕ್ಕವರು ದೊಡ್ಡವರು ಬೇಧವಿಲ್ಲದೇ ಅತ್ಯಾಚಾರ, ಲೈಂಗಿಕ ಹಿಂಸೆಗಳು ನಡೆಯುವ ಸಾಧ್ಯತೆ ಹೆಚ್ಚು.
ಕಾಮಲೋಲುಪ್ತ ರಾಗಿ ಇರುವ ಜನರಿಗೆ ದಿಢೀರ್ ಲಾಭದ ಮೇಲೆ ಕಣ್ಣು. ಒಂದು ವ್ಯವಹಾರ ಅಥವಾ ಯಾವುದೇ ವಿಷಯವಾಗಲಿ ಕೂಡಲೇ ಏನು ಸಿಗುತ್ತದೆ ಎಂಬುದರ ಬಗ್ಗೆ ಯೋಚಿಸುತ್ತಾರೆ ಹಾಗಾಗಿ ದೀರ್ಘ ಕಾಲದ ಅಪಾಯಗಳ ಬಗ್ಗೆ ಆಲೋಚನೆಯೂ ಬರುವುದಿಲ್ಲ.
ಲಸ್ಟ್ ಅಥವಾ ಕಾಮ ತನ್ನ ಸಂಗಾತಿಯನ್ನು ಪಡೆಯಲು ಯಾವ ಮಟ್ಟಕ್ಕಾದರೂ ಹೋಗಲು ಪ್ರೇರೇಪಿಸುತ್ತದೆ. ಕಾಮ ಪ್ರಚೋದಕ ಸಿನಿಮಾ, ಬರಹ, ನಗ್ನತೆ ಮನುಷ್ಯನನ್ನ ಕಾಮಾಂಧನ್ನನಾನಗಿ ಮಾಡುತ್ತದೆ. ಆರೋಗ್ಯಕರ ಕಾಮ ಸೃಷ್ಟಿಗೆ ಸಹಕಾರೀ ಆದರೆ ಅಂಧ ಕಾಮ ವಿನಾಶಕಾರಿ.
ಕಾಮ ಪ್ರಚೋದಕ ದೃಶ್ಯಾವಳಿ, ಬರಹ, ಸಿನಿಮಾ ಮತ್ತು ಮಾತು ಸಾಮಾಜಿಕ ಆರೋಗ್ಯಕ್ಕೆ ಮಾತ್ರವಲ್ಲ, ಸ್ವತಃ ಕಾಮದಾಸೆಗೆ ಬಿದ್ದವರಿಗೂ ಕಾಡುತ್ತದೆ, ತಮ್ಮನ್ನು ತಾವು ಸುಖಿಸಿ ಕೊಳ್ಳುತ್ತಿದ್ದೇನೆ ಎಂದುಕೊಂಡು ಕೆಟ್ಟ ಚಟಗಳಿಗೆ ಬಿದ್ದ ಯುವಕರು/ಯುವತಿಯರು ಅದರಲ್ಲಿ ಸುಟ್ಟು ಹೋಗುತ್ತಿದ್ದಾರೆ. ಈ ಕಾಮನೆಯ ಬೆಂಕಿ ಇಂದ ಹೊರ ಬರಬೇಕಾದರೆ ಇಂತಹ ಪ್ರಚೋದಕ ವಿಷಯಗಳಿಂದ ದೂರವಿರುವುದೇ ಲೇಸು.
ಅತೀ ಆದರೆ ಅಮೃತವು ಟಾಕ್ಸಿಕ್ ಆಗುತ್ತೆ
ಆಧುನಿಕ ಬದುಕು ಯಾವುದನ್ನೂ ತಪ್ಪು ಎನ್ನವುದಿಲ್ಲ, ಅದೆಷ್ಟೋ ಮುಕ್ತವಾದಿಗಳು ಮುಕ್ತತೆಯನ್ನು ಬಹಿರಂಗವಾಗಿ ವಿಜ್ರಂಭಿಸುತ್ತಾರೆ ಆದರೆ ಮುಕ್ತತೆಯ ಹೆಸರಿನಲ್ಲಿ, ಜೀವನವನ್ನೇ ಮುಕ್ತಾಯ ಮಾಡಿಕೊಳ್ಳಬಾರದು. ಯಾವುದೇ ಅತಿಯಾದರೆ ಅದು ತೊಂದರೆ. ಹಾಗೇ ಬೇಕೂ ಎನ್ನುವುದೂ ಕೂಡ ಅತೀ ಅದಾಗ ಅದು ಟಾಕ್ಸಿಕ್ ಆಗುತ್ತೆ. ಆ ಅತೀ ಎನ್ನುವುದು ಯಾವಾಗ ಎಂದರೆ ಆ ಬಯಕೆಗಳು. ಅದರ ಈಡೇರಿಕೆಗೆ ನಮ್ಮ ವ್ಯಾಪ್ತಿಯನ್ನು ಮೀರಿ ಇತರರರನ್ನು ಅವರ ವಸ್ತುಗಳನ್ನು ಅತಿಕ್ರಮಿಸಿ ಆಗ್ರಹಿಸಿದಾಗ, ಬೇಡದ ಚಟಗಳಿಗೆ ದಾಸರಾದಾಗ, ಆಮೇಲೆ ಸಾಧಾರಣ ಸಹಜ ಪ್ರೀತಿ 'ಬೋರ್' ಆಗುತ್ತೆ.
ಸ್ಥಿರ ಸಂಬಂಧ ಉಸಿರುಕಟ್ಟಿಸಿದಂತಹ ಅನುಭವ ನೀಡುತ್ತದೆ. ಶಾಂತಿ ಎಂದರೆ ಖಾಲಿ ಖಾಲಿ ಅನ್ನಿಸುತ್ತದೆ, ಮುಂದೊಂದು ದಿನ ನೈಜ ಪ್ರೀತಿ , ಸಹಜ ಲೈಂಗಿಕತೆ ವಿಚಿತ್ರವಾಗುತ್ತೆ'' ಎಂದು ಅವರು ಬರೆದುಕೊಂಡಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ












Click it and Unblock the Notifications