ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಮನವಿ ಪರಿಗಣಿಸದ ತಜ್ಞರ ಸಮಿತಿ

ನವದೆಹಲಿ, ಡಿಸೆಂಬರ್ 30: ಭಾರತದಲ್ಲಿ ಕೊರೊನಾ ವೈರಸ್ ಲಸಿಕೆಗಳ ತುರ್ತು ಬಳಕೆಗೆ ಪೈಪೋಟಿಯಲ್ಲಿ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಕಂಪೆನಿಗಳಿಗೆ ನಿರಾಶೆಯಾಗಿದೆ. ಬುಧವಾರ ನಡೆದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ವಿಷಯ ಪರಿಣತ ಸಮಿತಿಯ (ಎಸ್‌ಇಸಿ) ಸಭೆಯಲ್ಲಿ ಭಾರತ್ ಬಯೋಟೆಕ್ ಮತ್ತು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್‌ಐಐ) ಲಸಿಕೆಗಳಿಗೆ ತುರ್ತು ಬಳಕೆ ಅಧಿಕಾರಕ್ಕೆ ಅನುಮೋದನೆ ನೀಡುವ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.

ಸೆರಮ್ ಸಂಸ್ಥೆಯು ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಭಾರತದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಪಾಲುದಾರಿಕೆಯ ಸಂಪೂರ್ಣ ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡುವಂತೆ ವಾರದ ಹಿಂದೆ ಮನವಿ ಮಾಡಲಾಗಿತ್ತು.

ಆದರೆ ಎಸ್‌ಇಸಿ ಈ ಎರಡೂ ಕಂಪೆನಿಗಳಿಂದ ಹೆಚ್ಚಿನ ಮಾಹಿತಿ ಬಯಸಿದೆ. ಎಸ್‌ಐಐನಿಂದ ಹೆಚ್ಚುವರಿ ಮಾಹಿತಿಗಳನ್ನು ಒಳಗೊಂಡ ಫ್ಯಾಕ್ಟ್ ಶೀಟ್ ಹಾಗೂ ಇತರೆ ವಿವರಗಳನ್ನು ಪರಿಣತರ ಸಮಿತಿ ಕೇಳಿದೆ. ಭಾರತ್ ಬಯೋಟೆಕ್ ಹೆಚ್ಚಿನ ದತ್ತಾಂಶಗಳನ್ನು ನೀಡುವಂತೆ ಸೂಚಿಸಿದೆ.

Expert Panel Not Considered SII, Bharat Biotech Requests For Emergency Use Of Vaccines

ಆಕ್ಸ್‌ಫರ್ಡ್ ವಿವಿ-ಆಸ್ಟ್ರಾಜೆನಿಕಾದ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದ ಕೆಲವೇ ಗಂಟೆಗಳಲ್ಲಿ ಭಾರತದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಜನವರಿ 1ರಂದು ಪರಿಣತರ ಸಮಿತಿಯು ಮತ್ತೆ ಸಭೆ ಸೇರಲಿದ್ದು, ಸೆರಮ್ ಸಂಸ್ಥೆಯ ಮನವಿಯನ್ನು ಪರಿಗಣಿಸುವ ನಿರೀಕ್ಷೆಯಿದೆ. 'ಅನುಮೋದನೆ ದೊರೆತ ಕೂಡಲೇ ಲಸಿಕೆ ವಿತರಿಸಲು ಎಸ್‌ಐಐ ಸಿದ್ಧವಾಗಿದೆ. ಭಾರತ ಮೊದಲು ಬಳಿಕ ಇತರೆ ದೇಶಗಳಿಗೆ ಆದ್ಯತೆ ನೀಡಲಾಗುವುದು' ಎಂದು ಪೂನಾವಾಲ ಗ್ರೂಪ್ ಅಧ್ಯಕ್ಷ ಸಿರಸ್ ಪೂನಾವಾಲ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+