ಎಕ್ಸಿಟ್ ಪೋಲ್: ಮಹಾರಾಷ್ಟ್ರ, ಹರ್ಯಾಣದಲ್ಲಿ ಕೇಸರಿ ರಂಗು
ಮುಂಬೈ, ಅ.15: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಚುನಾವಣೆ ಸತ್ವ ಪರೀಕ್ಷೆ ಎನಿಸಿರುವ ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನ ಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್ ಸಿಪಿ, ಎಂಎನ್‍ಎಸ್, ಐಎನ್‍ಎಲ್ ಡಿ ಸೇರಿದಂತೆ ಘಟಾನುಘಟಿ ನಾಯಕರ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಉಭಯ ರಾಜ್ಯಗಳಲ್ಲೂ ಕೇಸರಿ ರಂಗು ಚೆಲ್ಲಲಿದೆ ಎಂಬ ಸುದ್ದಿ ಬಂದಿದೆ.
ಮಹಾರಾಷ್ಟದ 288 ಅಸೆಂಬ್ಲಿ ಕ್ಷೇತ್ರಗಳ ಒಟ್ಟು 4,119 ಅಭ್ಯರ್ಥಿಗಳು, ಹರಿಯಾಣದ 90 ಕ್ಷೇತ್ರಗಳಲ್ಲಿನ 1,351 ಅಭ್ಯರ್ಥಿಗಳ ಭವಿಷ್ಯ ಅಕ್ಟೋಬರ್ 19ರಂದು ಹೊರಬೀಳಲಿದೆ. ಹರಿಯಾಣದಲ್ಲಿ ಕಾಂಗ್ರೆಸ್, ಐಎನ್ ಎಲ್ ಡಿ, ಬಿಜೆಪಿ ಮಧ್ಯೆ ಪೈಪೋಟಿ ಇದೆ. [ಮುಂಬೈನಲ್ಲಿ ಮತದಾನ % ಇಳಿಕೆ, ಪಕ್ಷಗಳಿಗೆ ಆತಂಕ ]

ಜೀ ನ್ಯೂಸ್ ಹರ್ಯಾಣ:
ಕಾಂಗ್ರೆಸ್ : 15
ಐಎನ್ ಎಲ್ ಡಿ:28
ಬಿಜೆಪಿ: 37
ಎಚ್ ಜೆ ಸಿ:6
ಇತರೆ: 4
ಸಿ ವೋಟರ್ಸ್ ಹರ್ಯಾಣ
ಕಾಂಗ್ರೆಸ್ : 15
ಬಿಜೆಪಿ : 37
ಐಎನ್ ಎಲ್ ಡಿ: 28
ಎಚ್ ಜೆಸಿ+ 6
ಇತರೆ : 6
ಚಾಣಕ್ಯ ಫಲಿತಾಂಶ ಹರ್ಯಾಣ:
ಬಿಜೆಪಿ: 52
ಐಎನ್ ಎಲ್ ಡಿ: 23
ಕಾಂಗ್ರೆಸ್ : 10
ಇತರೆ : 5
ಇಂಡಿಯನ್ ನ್ಯೂಸ್ /ಆಕ್ಸಿಸ್ ಎಕ್ಸಿಟ್ ಪೋಲ್ ಮಹಾರಾಷ್ಟ್ರ
ಬಿಜೆಪಿ: 103
ಶಿವಸೇನಾ: 88
ಕಾಂಗ್ರೆಸ್ : 45
ಎನ್ ಸಿಪಿ: 35
ಎಂಎನ್ ಎಸ್ : 3
ಇತರೆ : 4
ಎಬಿಪಿ ನ್ಯೂಸ್ ನೆಲ್ಸನ್ ಮುಂಬೈ:
ಬಿಜೆಪಿ+: 127
ಶಿವಸೇನಾ :77
ಕಾಂಗ್ರೆಸ್: 40
ಎನ್ ಸಿಪಿ: 34
ಎಂಎನ್ಎಸ್ : 5
ಇತರೆ : 5
ಮಹಾರಾಷ್ಟ್ರ ಚುನಾವಣೋತ್ತರ ಫಲಿತಾಂಶದ ಬಗ್ಗೆ ಚಾಣಕ್ಯ ತಕ್ಷಣಕ್ಕೆ ಪ್ರಕಟಿಸಿದೆ ಕುತೂಹಲ ಉಳಿಯುವಂತೆ ಮಾಡಿತ್ತು. ಲೋಕಸಭೆಯಲ್ಲಿ ಮಿಕ್ಕೆಲ್ಲಾ ಸಮೀಕ್ಷಾ ಸಂಸ್ಥೆಗಳಿಗಿಂತ ಚಾಣಕ್ಯ ಕರಾರುವಕ್ ವರದಿ ನೀಡಿತ್ತು.
ಚಾಣಕ್ಯ ಸಂಸ್ಥೆ ಮಹಾರಾಷ್ಟ್ರ:
ಬಿಜೆಪಿ+ 151
ಶಿವಸೇನಾ : 71
ಕಾಂಗ್ರೆಸ್ : 27
ಎನ್ ಸಿಪಿ: 28
ಎಂಎನ್ಎಸ್ ಹಾಗೂ ಇತರೆ : 11












Click it and Unblock the Notifications