Exit Poll ಎಕ್ಸಾಟ್ ಪೋಲ್ ಎಂದು ಭಾವಿಸಿ ಬಿಜೆಪಿ ಭರ್ಜರಿ ಪ್ಲ್ಯಾನ್: ಸಿದ್ಧವಾಗುತ್ತಿದೆ ಸಿಹಿ
ಇನ್ನೇನು ಕೆಲವೇ ಕ್ಷಣಗಳಲ್ಲಿ 18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರದ ಸಿದ್ಧತೆ ನಡೆಸಿವೆ. ಈ ಸಂಭ್ರಮದ ಸಂಭ್ರಮ ಬಿಜೆಪಿಯಲ್ಲಿ ತುಸು ಹೆಚ್ಚಗಿ ಕಾಣುತ್ತಿದೆ. ಬಿಜೆಪಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರುವು ಸಾಧ್ಯತೆ ದಟ್ಟವಾಗಿದೆ.
ಚುನಾವಣೋತ್ತರ ಸಮೀಕ್ಷೆಗಳು ಜೂನ್ 1 ರಂದು ಹೊರ ಬಿದ್ದಿದ್ದು, ಇದರಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ಕ್ರಾಸ್ ಮಾಡಬಹುದು ಎಂದು ಈಗಾಗಲೇ ಹೇಳಲಾಗುತ್ತಿದೆ. ಎಕ್ಸಿಟ್ ಪೋಲ್ ರಿಸಲ್ಟ್‌ನ್ನೇ ಎಕ್ಸಾಟ್ ಪೋಲ್ ರಿಸಲ್ಟ್ ಎಂದು ಭಾವಿಸಿ, ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಈ ಪಕ್ಷ ಪ್ರಮಾಣವಚನಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳನ್ನು ಚುರುಕು ಗೊಳಿಸಿದೆ.

ಗೆಲುವಿನ ಸಿಹಿ
ಗೆಲುವು ಖಚಿತ ಎಂದು ಭಾವಿಸಿ ದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ತಿನಿಸುಗಳನ್ನು ತಯಾರಿಸಲು ಶುರು ಮಾಡಿ ಬಿಟ್ಟಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನಿಶ್ಚಿತವಾಗಿ ಸರ್ಕಾರ ರಚನೆ ಮಾಡಲಿದೆ ಎಂದು ತಿಳಿಸಿವೆ. ಇದನ್ನ ಗಮನಿಸಿ ಬಿಜೆಪಿ ಸಿಹಿ ತಿನಿಸುಗಳನ್ನು ತಯಾರಿಸಿಕೊಂಡಿದೆ.
400 ಕೆಜಿ ಸ್ವೀಟ್
ಲೋಕಸಭೆ ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಂಭ್ರಮವನ್ನು ಸಂಭ್ರಮಿಸಲು, ಬಿಜೆಪಿ ಯುವ ಮೋರ್ಚಾ ಸಿದ್ಧತೆಗಳನ್ನು ನಡೆಸಿದೆ. ಕುಶಲಕರ್ಮಿಗಳು 400 ಕೆಜಿಯಷ್ಟು ಸಿಹಿ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸನ್ನಿ ಯಾದವ್ ಹೇಳಿದ್ದಾರೆ. ಜೂನ್ 4 ರಂದು ಫಲಿತಾಂಶ ಪ್ರಕಟವಾದ ನಂತರ ಕಾರ್ಯಕರ್ತರು ಸಂಚರಿಸಿ ಜನರಿಗೆ ಸಿಹಿ ಹಂಚಲಿದ್ದಾರೆ ಎಂದು ತಿಳಿಸಿದ್ದಾರೆ.
ಎಣಿಕೆ ದಿನ ಬೆಳಗ್ಗೆಯಿಂದ ಬೂಂದಿ ಲಡ್ಡುಗಳ ಆರ್ಡರ್‌ಗಾಗಿ ಕರೆಗಳು ಬರುತ್ತಿವೆ ಎಂದು ಗ್ರಾಹಕರು ಹೇಳಿದ್ದಾರೆ. 50 ಕೆಜಿಗೆ ಮತ್ತು 100 ಕೆಜಿಗೆ ಆರ್ಡರ್ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಎಲ್ಲರ ಮೊದಲ ಮೊದಲ ಆಯ್ಕೆ ಸಿಹಿ ಬೂಂದಿ ಲಡ್ಡುಗಳು.

ಉತ್ತರ ಭಾರತದಲ್ಲಿ ಬಿಸಿಲು ಬೇಗೆ ಹೆಚ್ಚಾಗಿದೆ. ಹೀಗಾಗಿ ಸಂಭ್ರಮಾಚರಣೆಗೆ ಬಿಸಿಲು ಅಡ್ಡಿ ಪಡಿಸಬಾರದು ಎಂದು ಸಾದಾ ಪೇಟಾ, ಕೇಸರಿ ಪೇಟಾಗಳಿಗೆ ಭಾರೀ ಬೇಡಿಕೆ ಕಾಣಿಸಿಕೊಂಡಿದೆ. ಬರೀ ಸಿಹಿ ತಿನಿಸು ಹಾಗೂ ತಲೆಗೆ ಸುತ್ತಿಕೊಳ್ಳುವ ಪೇಟಾಗಳಿಗೆ ಬೇಡಿಕೆ ಹುಟ್ಟಿಕೊಂಡಿಲ್ಲ. ಬದಲಿಗೆ ಬ್ಯಾಂಡ್ ಗಳಿಗೂ ಬೇಡಿಕೆ ಹೆಚ್ಚಾಗಿದೆ. ಬಹುತೇಕ ಡ್ರಮ್‌ಗಳು ಮತ್ತು ಡ್ರಮ್‌ಗಳು ಬುಕ್ ಆಗುತ್ತಿವೆ.
ಮಂಗಳವಾರ ಮಧ್ಯಾಹ್ನದ ವೇಳೆದ ದೇಶದ ಮಿಡಿತ ಏನಿರಲಿದೆ ಎಂದು ತಿಳಿಯಲಿದೆ. ಈ ವೇಳೆ ಎಲ್ಲ ಪಕ್ಷಗಳು ತಯಾರಿ ನಡೆಸಿವೆ. ಈ ಬೆನ್ನಲ್ಲೆ ಬಿಜೆಪಿ, ಎನ್‌ಡಿಎ ಮೈತ್ರಿ ಕೂಟ ಹಾಗೂ INDIA ಮೈತ್ರಿ ಕೂಟಗಳಿಂದಲೂ ಸಿಹಿ ತಿನಿಸುಗಳಿಗೆ ಬುಕ್ಕಿಂಗ್ ಆರಂಭವಾಗಿವೆ. ಇನ್ನು ಎಕ್ಸಿಟ್ ಪೋಲ್‌ನ್ನೇ ನೆಚ್ಚಿಕೊಂಡು ಬಿಜೆಪಿ ತಯಾರಿ ನಡೆಸಿದ್ದರೆ, INDIA ಮೈತ್ರಿ ಕೂಟ ಎಕ್ಸಿಟ್ ಪೋಲ್ ರಿಸಲ್ಟ್ ಉಲ್ಟಾ ಆಗಲಿದೆ ಎಂಬ ಉದ್ದೇಶದಿಂದ ಈಗಾಗಲೇ ಸಿಹಿಗಳಿಗೆ ಕ್ವಿಂಟಲ್ ಗಟ್ಟಲೇ ಆರ್ಡರ್ ನೀಡುತ್ತಿವೆ.
ಬರೀ ಸಿಹಿ ತಿನಿಸುಗಳಿಗೆ ಈ ಗೆಲುವಿನ ಸಂಭ್ರಮಾಚರಣೆ ಸೀಮಿತವಾಗಿಲ್ಲ. ಬದಲಿಗೆ ಬಣ್ಣ ಹಾಗೂ ಪಟಾಕಿಗಳ ಬೇಡಿಕೆಯೂ ಹೆಚ್ಚಾಗಿದೆ.












Click it and Unblock the Notifications