ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

EWS Quota: ಶಿಕ್ಷಣ, ಉದ್ಯೋಗಗಳಲ್ಲಿ ಶೇ.10 ರಷ್ಟು ಮೀಸಲಾತಿ ಎತ್ತಿ ಹಿಡಿದ 'ಸುಪ್ರೀಂ'

|
Google Oneindia Kannada News

ನವದೆಹಲಿ, ನವೆಂಬರ್‌ 7: ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) 10 ಪ್ರತಿಶತ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಸೋಮವಾರ 4:1 ಬಹುಮತದೊಂದಿಗೆ ಎತ್ತಿಹಿಡಿದಿದೆ. ಐದರಲ್ಲಿ ನಾಲ್ವರು ನ್ಯಾಯಾಧೀಶರು EWS ಕೋಟಾದ ಪರವಾಗಿ ತೀರ್ಪು ನೀಡಿದ್ದಾರೆ.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು.ಯು. ಲಲಿತ್ ನೇತೃತ್ವದ ಐವರು ನ್ಯಾಯಾಧೀಶರ ಸುಪ್ರೀಂ ಕೋರ್ಟ್ ಪೀಠವು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) 10 ಪ್ರತಿಶತ ಮೀಸಲಾತಿಯನ್ನು ಒದಗಿಸುವ 103 ನೇ ಸಂವಿಧಾನ ತಿದ್ದುಪಡಿಯನ್ನು ಪ್ರಶ್ನಿಸುವ ಅರ್ಜಿಗಳನ್ನು ವಿಚಾರಣೆ ನಡೆಸಿತು.

Hijab Verdict: ಸುಪ್ರೀಂಕೋರ್ಟ್ ಹಿಜಾಬ್ ತೀರ್ಪು: ಸಿಜೆಐ ಪೀಠಕ್ಕೆ ವರ್ಗಾವಣೆ Hijab Verdict: ಸುಪ್ರೀಂಕೋರ್ಟ್ ಹಿಜಾಬ್ ತೀರ್ಪು: ಸಿಜೆಐ ಪೀಠಕ್ಕೆ ವರ್ಗಾವಣೆ

ಕೇಂದ್ರ ಸರ್ಕಾರವು 103ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ 2019ರಂದು ಜನವರಿಯಲ್ಲಿ ಇಡಬ್ಲ್ಯೂಎಸ್ (EWS ಆರ್ಥಿಕವಾಗಿ ದುರ್ಬಲ ವಿಭಾಗ) ಈ ಶೇ 10ರಷ್ಟು ಮೀಸಲಾತಿಯ ಕೋಟಾ ಜಾರಿಗೆ ತರಲಾಗಿತ್ತು. ಇದರ ಅಡಿಯಲ್ಲಿ ಸಾಮಾನ್ಯ ವರ್ಗವು ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10 ರಷ್ಟು ಮೀಸಲಾತಿಯ ಲಾಭವನ್ನು ಪಡೆಯುತ್ತದೆ. ಈ ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಸುಪ್ರೀಂನ ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸುತ್ತಿದೆ.

EWS Reservation Verdict : Supreme Court upholds 10% EWS reservation in education and jobs

ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿಯನ್ನು ನೀಡುವ ಸಾಂವಿಧಾನಿಕ ಸಿಂಧುತ್ವವನ್ನು ಕುರಿತ ವಿಚಾರಣೆಯನ್ನು ಸತತ 7ನೇ ದಿನವೂ ಸುಪ್ರೀಂಕೋರ್ಟ್ ಆಲಿಸಿತು. 103ನೇ ತಿದ್ದುಪಡಿ ಕಾಯಿದೆ, 2019ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್‌ನ್ನು ಆಲಿಸಿದ ನಂತರ, ನ್ಯಾಯಾಲಯವು ಈ ವಿಷಯದ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಸಂವಿಧಾನದಲ್ಲಿ ನೀಡಿರುವ ಯಾವುದೇ ಕಾನೂನಿನಲ್ಲಿ ಬದಲಾವಣೆಯಾದಾಗ, ಹೊಸ ವಿಷಯವನ್ನು ಸೇರಿಸಿದಾಗ ಅಥವಾ ಸಂಪೂರ್ಣ ಹೊಸ ಕರಡನ್ನು ಸಿದ್ಧಪಡಿಸಿ ಮತ್ತು ಕಾನೂನನ್ನು ರಚಿಸಿದಾಗ ಅದನ್ನು ಸಾಂವಿಧಾನಿಕ ತಿದ್ದುಪಡಿ ಎಂದು ಕರೆಯಲಾಗುತ್ತದೆ. ಸಂಸತ್ತು ಈ ಕೆಲಸವನ್ನು ಮಾಡುತ್ತದೆ. 103ನೇ ತಿದ್ದುಪಡಿಯೊಂದಿಗೆ, 15 (6) ಮತ್ತು 16 (6)ನೇ ವಿಧಿಗಳನ್ನು ಸಂವಿಧಾನದಲ್ಲಿ ಸೇರಿಸಲಾಯಿತು, ಇದರಿಂದಾಗಿ EWS ಅಂದರೆ ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ 10 ಪ್ರತಿಶತ ಮೀಸಲಾತಿಯನ್ನು ಪಡೆಯಲಿದೆ.

ಕೇಂದ್ರ ಸರ್ಕಾರವು 103ನೇ ಸಾಂವಿಧಾನಿಕ ತಿದ್ದುಪಡಿಯ ಅಡಿಯಲ್ಲಿ ಜನವರಿ 2019ರಲ್ಲಿ EWS ಕೋಟಾವನ್ನು ಜಾರಿಗೆ ತಂದಿತು. ಇದರ ಅಡಿಯಲ್ಲಿ ಸಾಮಾನ್ಯ ವರ್ಗವು ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ 10 ಪ್ರತಿಶತದಷ್ಟು ಮೀಸಲಾತಿಯ ಲಾಭವನ್ನು ಪಡೆಯುತ್ತದೆ. ಈ ಕಾನೂನನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಐವರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸುತ್ತಿದೆ.

EWS Reservation Verdict : Supreme Court upholds 10% EWS reservation in education and jobs

ಏಳು ದಿನಗಳಲ್ಲಿ 20 ಕ್ಕೂ ಹೆಚ್ಚು ವಕೀಲರನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 27 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಹೆಚ್ಚಿನ ಅರ್ಜಿದಾರರು ತಿದ್ದುಪಡಿಯ ಸಿಂಧುತ್ವವನ್ನು ಪ್ರಶ್ನಿಸಿದರು ಮತ್ತು ಅದನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಪ್ರತಿವಾದಿ ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯಗಳು ಮೀಸಲಾತಿಯ ನಿಬಂಧನೆಯನ್ನು ಸಮರ್ಥಿಸಲು ನ್ಯಾಯಾಲಯವನ್ನು ಕೇಳಿದ್ದವು.

English summary
Supreme Court on Monday upheld the 10 percent reservation for Economically Weaker Classes (EWS) with a 4:1 majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X