ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಬ್ಲ್ಯುಎಸ್ ಮೀಸಲಾತಿ ತೀರ್ಪು: ಸ್ಟಾಲಿನ್ ಅಧ್ಯಕ್ಷತೆಯ ಸರ್ವಪಕ್ಷ ಸಭೆ ತಿರಸ್ಕಾರ

|
Google Oneindia Kannada News

ಚೆನ್ನೈ, ನವೆಂಬರ್‌ 13: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿ ನೀಡುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಸರ್ವಾನುಮತದಿಂದ ತೀರ್ಪನ್ನು ತಿರಸ್ಕರಿಸಲಾಯಿತು.

ತಮಿಳುನಾಡು ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯು ಸಂವಿಧಾನದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕಾರಣ ಇಡಬ್ಲ್ಯುಎಸ್‌ಗೆ ಶೇ. 10ರಷ್ಟು ಮೀಸಲಾತಿಯನ್ನು ಒದಗಿಸುವ 103ನೇ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ನಿಲುವುಗಳನ್ನು ತೆಗೆದುಕೊಂಡಿತು.

ಮೀಸಲಾತಿಗೆ ಒತ್ತಾಯಿಸಿ ಶಾಸಕ ಸಿ.ಟಿ.ರವಿಗೆ ಮನವಿ ಸಲ್ಲಿಸಿದ ಬಲಿಜ ಸಮುದಾಯಮೀಸಲಾತಿಗೆ ಒತ್ತಾಯಿಸಿ ಶಾಸಕ ಸಿ.ಟಿ.ರವಿಗೆ ಮನವಿ ಸಲ್ಲಿಸಿದ ಬಲಿಜ ಸಮುದಾಯ

ಸುಪ್ರೀಂಕೋರ್ಟ್‌ನ ತೀರ್ಪು ಬಡವರ ವಿರುದ್ಧ ತಾರತಮ್ಯ ಮಾಡಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸರಿಯಾಗಿ ಸ್ಥಾಪಿಸಲು ತಮಿಳುನಾಡು ಸರ್ಕಾರವು ತನ್ನ ಅಭಿಪ್ರಾಯಗಳನ್ನು ನೋಂದಾಯಿಸಲು ನಾವು ವಿನಂತಿಸುತ್ತೇವೆ. ಬಡವರು, ನಿರ್ಗತಿಕರು ಮತ್ತು ದುರ್ಬಲ ಜನರ ಬಡತನವನ್ನು ನಿವಾರಿಸಲು ನಾವು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಂಬಲಿಸುತ್ತೇವೆ. ಆದರೆ ಸಾಮಾಜಿಕ ನ್ಯಾಯದ ನಿಜವಾದ ಮೌಲ್ಯಗಳನ್ನು ವಿರೂಪಗೊಳಿಸಲು ಬಿಡುವುದಿಲ್ಲ ಎಂದು ಸಭೆಯ ನಿರ್ಣಯವು ಹೇಳಿದೆ.

ಸೋಮವಾರ ಸುಪ್ರೀಂಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನ ಪೀಠವು 3:2 ರಷ್ಟು ಬಹುಮತದ ತೀರ್ಪಿನಲ್ಲಿ ಇಡಬ್ಲ್ಯುಎಸ್ ಮೀಸಲಾತಿ ಕೋಟಾವು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳುವ ಮೂಲಕ ಸಂವಿಧಾನದ 103ನೇ ತಿದ್ದುಪಡಿ ಕಾಯಿದೆ 2019ರ ಸಿಂಧುತ್ವವನ್ನು ಎತ್ತಿಹಿಡಿದಿದೆ.

ಭಾರತದ ಹಿಂದಿನ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಮತ್ತು ಎಸ್ ರವೀಂದ್ರ ಭಟ್ ಅವರು ಬಹುಮತದ ತೀರ್ಪನ್ನು ವಿರೋಧಿಸಿದರು. 103ನೇ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಿದರು. ಆದರೆ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ, ಬೇಲಾ ತ್ರಿವೇದಿ ಮತ್ತು ಜೆಬಿ ಪರ್ದಿವಾಲಾ ಅವರು ಮೂವರ ಪ್ರತ್ಯೇಕ ಏಕರೂಪದ ತೀರ್ಪುಗಳ ಮೂಲಕ ಬಹುಪಾಲು ಪೀಠವು ಇಡಬ್ಲ್ಯುಎಸ್ ತಿದ್ದುಪಡಿಯನ್ನು ಎತ್ತಿಹಿಡಿದಿದೆ.

ಮೀಸಲಾತಿಯಿಂದ ಏನನ್ನು ಸಾಧಿಸಲಾಗಿಲ್ಲ

ಮೀಸಲಾತಿಯಿಂದ ಏನನ್ನು ಸಾಧಿಸಲಾಗಿಲ್ಲ

ನ್ಯಾಯಮೂರ್ತಿ ತ್ರಿವೇದಿ ಮತ್ತು ಜಸ್ಟಿಸ್ ಪರ್ದಿವಾಲ್ ಇಬ್ಬರೂ ನ್ಯಾಯಮೂರ್ತಿಗಳು ಶತಮಾನಗಳ ಹಳೆಯದಾದ ಸಾಮಾಜಿಕ ತಾರತಮ್ಯದಲ್ಲಿ ಆಧಾರದ ಮೇಲೆ ನೀಡಲಾಗಿರುವ ಮೀಸಲಾತಿಯು ದೀರ್ಘಕಾಲ ಉಳಿದಿದ್ದು ಅದನ್ನು ಮರುಪರಿಶೀಲಿಸಬೇಕು ಎಂದು ಸೂಚಿಸಿದರು. ಸಂವಿಧಾನ ಜಾರಿಗೆ ಬಂದ 50 ವರ್ಷಗಳಲ್ಲಿ ಮೀಸಲಾತಿಯಿಂದ ಏನನ್ನು ಸಾಧಿಸಬೇಕೆಂದು ಬಯಸಿದ್ದೀರೋ ಅದನ್ನು ಇಂದಿಗೂ ಸಾಧಿಸಲಾಗಿಲ್ಲ ಎಂದು ನ್ಯಾಯಮೂರ್ತಿ ತ್ರಿವೇದಿ ಹೇಳಿದರು.

03ನೇ ತಿದ್ದುಪಡಿಯಡಿ ಮೇಲ್ಜಾತಿಗಳಿಗೆ ಮೀಸಲಾತಿ

03ನೇ ತಿದ್ದುಪಡಿಯಡಿ ಮೇಲ್ಜಾತಿಗಳಿಗೆ ಮೀಸಲಾತಿ

ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರು, 10 ಪ್ರತಿಶತ ಇಡಬ್ಲ್ಯೂಎಸ್ ಮೀಸಲಾತಿಯು ಒಂದು ದೃಢವಾದ ಹೆಜ್ಜೆಯಾಗಿದೆ. ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ನೀಡಲಾಗಿರುವ ಮೀಸಲಾತಿಯಾಗಿದೆ ಎಂದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ವಿಧಿ 103ನೇ ತಿದ್ದುಪಡಿಯಲ್ಲಿ ಮೇಲ್ಜಾತಿಗಳಿಗೆ ಮೀಸಲಾತಿ ನೀಡಲಾಗಿದೆ ಮತ್ತು ಇದು ಭಾರತೀಯ ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಾಗಿದೆ ಎಂದಿದ್ದರು.

 ಡಿಎಂಕೆಯ ಬೂಟಾಟಿಕೆ ನಾಟಕ: ಎಐಡಿಎಂಕೆ

ಡಿಎಂಕೆಯ ಬೂಟಾಟಿಕೆ ನಾಟಕ: ಎಐಡಿಎಂಕೆ

ಆರ್ಥಿಕ ಸ್ಥಿತಿಗತಿಯಲ್ಲಿ ಹಿನ್ನೆಲೆಯಲ್ಲಿ ನೀಡಲಾಗುವ ಮೀಸಲಾತಿಯನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಅರ್ಜಿದಾರರ ವಕೀಲರು ಪ್ರತಿಪಾದಿಸಿದರು. ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆ 2019 ರ ಸಿಂಧುತ್ವವನ್ನು ಪ್ರಶ್ನಿಸಿ 2019 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇಡಬ್ಲ್ಯೂಎಸ್ ಮೀಸಲಾತಿ ಕುರಿತು ತಮಿಳುನಾಡಿನಲ್ಲಿ ಶಾಸಕಾಂಗ ಪಕ್ಷಗಳ ನಾಯಕರ ಸಭೆಯನ್ನು ಕರೆದ ಡಿಎಂಕೆಯ ಈ ಬೂಟಾಟಿಕೆ ನಾಟಕವನ್ನು ತಮಿಳುನಾಡಿನ ಜನರು ಅರ್ಥಮಾಡಿಕೊಳ್ಳಬೇಕು ಎಂದು ಮೀನುಗಾರಿಕೆಯ ಮಾಜಿ ಸಚಿವ ಮತ್ತು ಹಿರಿಯ ಎಐಎಡಿಎಂಕೆ ನಾಯಕ ಡಿ ಜಯಕುಮಾರ್ ಹೇಳಿದರು.

ಯುಪಿಎ ಸರ್ಕಾರವಿದ್ದಾಗ ರಚಿಸಲಾದ ಆಯೋಗದ ಶಿಫಾರಸ್ಸು

ಯುಪಿಎ ಸರ್ಕಾರವಿದ್ದಾಗ ರಚಿಸಲಾದ ಆಯೋಗದ ಶಿಫಾರಸ್ಸು

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಶುಕ್ರವಾರ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ನೀಡುವ 10 ಪ್ರತಿಶತ ಮೀಸಲಾತಿ ನಿಲುವಿನಲ್ಲಿ ದ್ವಂದ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದೆ. ಮೀನುಗಾರಿಕೆ ಮಾಜಿ ಸಚಿವ ಮತ್ತು ಹಿರಿಯ ಎಐಎಡಿಎಂಕೆ ನಾಯಕ ಡಿ ಜಯಕುಮಾರ್, 2006ರಲ್ಲಿ ಡಿಎಂಕೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ರಚಿಸಲಾದ ಆಯೋಗದ ಶಿಫಾರಸಿನ ಮೇರೆಗೆ ಶೇಕಡ ಹತ್ತು ಮೀಸಲಾತಿ ಕಾನೂನನ್ನು ರಚಿಸಲಾಗಿದೆ. ಬಿಜೆಪಿ ಇದನ್ನು 2019 ರಲ್ಲಿ ಮಾತ್ರ ಜಾರಿಗೆ ತಂದಿದೆ ಎಂದು ಅವರು ಹೇಳಿದರು.

English summary
An all-party meeting chaired by Tamil Nadu Chief Minister MK Stalin expressed displeasure over the Supreme Court's decision to grant 10 per cent reservation to the Economically Weaker Sections (EWS) and unanimously rejected the decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X