ಪ್ರತಿ ವರ್ಷ 1.5 ಲಕ್ಷ 'ಅಗ್ನಿವೀರರ' ನೇಮಕಕ್ಕೆ ನಿರ್ಧಾರ

ಬೆಂಗಳೂರು ಜೂನ್ 16: ಕೇಂದ್ರ ಸರ್ಕಾರ ಮಂಗಳವಾರ ಘೋಷಣೆ ಮಾಡಿದ 'ಅಗ್ನಿಪಥ್' ಯೋಜನೆ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಪ್ರತಿ ವರ್ಷ ಸೇನೆಗೆ 1.5 ಲಕ್ಷ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

"2032ರ ವೇಳೆಗೆ ಸೈನ್ಯದಲ್ಲಿ ಶೇ.50ರಷ್ಟು ಮಂದಿ ಅಗ್ನಿವೀರರೇ ಕಾರ್ಯ ನಿರ್ವಹಿಸಲಿದ್ದಾರೆ" ಎಂದು ಉಪಮುಖ್ಯ ಸೇನಾ ಸಿಬ್ಬಂದಿ ಲೆಫ್ಟಿನೆಂಟ್ ಜನರಲ್ ಬಿ. ಎಸ್. ರಾಜು ತಿಳಿಸಿದ್ದಾರೆ.

"ಯುವಕರಿಗೆ ಸೇನೆಗೆ ಸೇರಿ ಅಲ್ಪಾವಧಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಈ ಯೋಜನೆ ಇದಾಗಿದೆ. ಪ್ರತಿ ವರ್ಷ 1.5 ಲಕ್ಷ ಅಗ್ನಿವೀರನ್ನು ನೇಮಕ ಮಾಡಿಕೊಳ್ಳುವ ಮೂಲಕ ಮುಂದಿನ ಹತ್ತು ವರ್ಷದಲ್ಲಿ 12 ಲಕ್ಷ ಅಗ್ನಿವೀರರನ್ನೇ ಸೇನೆಗೆ ಬಳಸಿಕೊಳ್ಳುವ ಗುರಿ ಹೊಂದಿದ್ದೇವೆ" ಎಂದರು.

Every Year 1.5 Lakh Agniveer Recruitments to Army

ಈಗಾಗಲೇ ಯೋಜನೆ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈಗ ಸೇನೆ ಘೋಷಣೆ ಮಾಡಿರುವ ತೀರ್ಮಾನ ಇನ್ನಷ್ಟು ಆಕ್ರೋಶ ಹೆಚ್ಚಾಗಲು ಕಾರಣವಾಗಬಹುದು ಎಂದೂ ಅಂದಾಜಿಸಲಾಗಿದೆ.

ಯೋಜನೆಯಡಿ ಇದೇ ವರ್ಷ 40ಸಾವಿರ ಮಂದಿಯನ್ನು ನೇಮಕ ಮಾಡಲಿಕೊಳ್ಳಲಾಗುತ್ತದೆ. ಈ ನೇಮಕಾತಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾಗ ಹೋಗಲಿದೆ. ಮುಂದಿನ 7-8ವರ್ಷಕ್ಕೆ 1.2ಲಕ್ಷಕ್ಕೆ ಏರಿಕೆ ಆದರೆ, ನಂತರ 10-11ನೇ ವರ್ಷಕ್ಕೆ ಈ ಸಂಖ್ಯೆ 1.6ಲಕ್ಷಕ್ಕೆ ಏರಿಕೆಯಾಗಲಿದೆ.

15ವರ್ಷ ಸೇವೆ ಮಾಡಲಿರುವ ಅಗ್ನಿವೀರರು: 'ಅಗ್ನಿಪಥ್ ನೇಮಕಾತಿ ಯೋಜನೆ'ಯಡಿ ಈ ವರ್ಷವೇ ಭಾರತೀಯ ವಾಯುಪಡೆ ಮತ್ತು ನೌಕಾಪಡೆಗೆ ಒಟ್ಟು 3000 ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದೇವೆ.

ಈ ಸಂಖ್ಯೆಯು ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತೇವೆ. ಮುಖ್ಯವಾಗಿ ನೇಮಕಗೊಳ್ಳುವ ಅಗ್ನಿವೀರರ ಪೈಕಿ ಶೇ. 25ರಷ್ಟು ಉತ್ತಮರನ್ನು ಮುಂದಿನ 15ವರ್ಷಗಳವರೆಗೆ ಸೇನೆಯಲ್ಲಿ ಮುಂದುವರಿಸಲಾಗುವುದು. ಉಳಿದವರನ್ನು ನಾಲ್ಕು ವರ್ಷದ ಅಲ್ಪಾವಧಿ ಸೇವೆ ಬಳಿಕ ತೆಗೆದು ಹಾಕಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+