ಬರ್ಲಿನ್ ಗೋಡೆಯೇ ಬಿದ್ದುಹೋಯಿತು, ಪಾಕ್ ಜತೆಗೆ ಸಂಬಂಧ ಸುಧಾರಿಸಲ್ಲವಾ?
ಬರ್ಲಿನ್ ಗೋಡೆಯೇ ಬಿದ್ದುಹೋಗಿ, ಜರ್ಮನಿ ದೇಶವೇ ಒಂದಾಯಿತು. ಇದೀಗ ಕರ್ತರ್ ಪುರ್ ಕಾರಿಡಾರ್ ಯೋಜನೆಯು ಎರಡು ದೇಶಗಳ ಮಧ್ಯೆ ಉತ್ತಮ ಭವಿಷ್ಯಕ್ಕೆ ಸೇತುವೆ ಆಗಬಹುದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬರ್ಲಿನ್ ಗೋಡೆ ಕೆಡವಬಹುದು ಎಂದು ಯಾರಿದ್ದರೂ ಆಲೋಚನೆ ಮಾಡಿದ್ದರಾ. ಗುರು ನಾನಕ್ ಜೀ ಅವರ ಆಶೀರ್ವಾದದಿಂದ ಈ ಕರ್ತರ್ ಪುರ್ ಕಾರಿಡಾರ್ ಯೋಜನೆ ಬರೀ ಕಾರಿಡಾರ್ ಆಗಿ ಉಳಿಯದೆ ಎರಡು ದೇಶಗಳ ಜನರ ಮಧ್ಯದ ಸೇತುವೆ ಆಗಲಿ ಎಂದು ಹೇಳಿದ್ದಾರೆ.
1947ರಲ್ಲಿ ದೇಶ ವಿಭಜನೆ ಆಗಿದ್ದು ಆಗಿಹೋಯಿತು. ಸರಕಾರ ಮತ್ತು ಸೇನೆ ಮಧ್ಯೆ ಸಮಸ್ಯೆಗಳು ಮುಂದುವರಿಯಬಹುದು ಮತ್ತು ಸಮಯವೇ ಇದರಿಂದ ಆಚೆ ಬರುವ ದಾರಿಯನ್ನು ತೋರಲಿದೆ ಎಂದಿದ್ದಾರೆ.

ಕರ್ತರ್ ಪುರ್ ಸಾಹಿಬ್ ಪಾಕಿಸ್ತಾನದಲ್ಲಿ ರಾವಿ ನದಿಯ ಆಚೆಗಿದೆ. ಭಾರತದ ಪಂಜಾಬ್ ನ ಡೇರಾ ಬಾಬಾ ನಾನಕ್ ನಿಂದ ನಾಲ್ಕು ಕಿ.ಮೀ. ದೂರದಲ್ಲಿ ಈ ಸ್ಥಳ ಇದೆ. ಗಡಿ ಜಿಲ್ಲೆ ಗುರುದಾಸ್ ಪುರ್ ಅನ್ನು ಐತಿಹಾಸಿಕ ಕರ್ತರ್ ಪುರ್ ಜತೆಗೆ ಬೆಸೆಯುವಂಥ ರಸ್ತೆ ನಿರ್ಮಾಣಕ್ಕೆ ಸಿಖ್ ಸಮುದಾಯದಿಂದ ಬಹು ಕಾಲದಿಂದ ಬೇಡಿಕೆ ಇತ್ತು.

ಈ ಕಾರಿಡಾರ್ ನಿರ್ಮಾಣವಾದ ಭಾರತದ ಯಾತ್ರಾರ್ಥಿಗಳು ಸುಲಭವಾಗಿ ಪಾಕಿಸ್ತಾನದ ಕರ್ತರ್ ಪುರ್ ಗೆ ತೆರಳಬಹುದು. ಭಾರತದ ಸಚಿವ ಸಂಪುಟವು ಕಾರಿಡಾರ್ ಅಭಿವೃದ್ಧಿ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ ಕೆಲ ಗಂಟೆಗಳಲ್ಲೇ ಪಾಕಿಸ್ತಾನವು ಈ ತೀರ್ಮಾನವನ್ನು ಸ್ವಾಗತಿಸಿತ್ತು.












Click it and Unblock the Notifications