ತುರ್ತು ಎಚ್ಚರಿಕೆಯ ಪರೀಕ್ಷಾ ಸಂದೇಶಗಳು ಭಾರತದಾದ್ಯಂತ ರವಾನೆ: ಮೊಬೈಲ್ ಬಳಕೆದಾರರಲ್ಲಿ ಭೀತಿ!
ನಾಗ್ಪುರ ಜುಲೈ 20: ಇಂದು ಬೆಳಿಗ್ಗೆ ಆಶ್ಚರ್ಯಕರ ಘಟನೆಯೊಂದು ಬೆಳಕಿಗೆ ಬಂದಿದೆ. ನಾಗ್ಪುರ ಮತ್ತು ಭಾರತದ ಇತರ ಭಾಗಗಳಲ್ಲಿನ ಮೊಬೈಲ್ ಬಳಕೆದಾರರು ತುರ್ತು ಎಚ್ಚರಿಕೆಯ ಸಂದೇಶವನ್ನು ವಾಟ್ಸಾಪ್‌ನಲ್ಲಿ ಅನಿರೀಕ್ಷಿತವಾಗಿ ಸ್ವೀಕರಿಸಿ ಆತಂಕಕ್ಕೊಳಗಾಗಿದ್ದಾರೆ.
ನಾಗಪುರ ಮತ್ತು ಇತರ ನಗರಗಳು ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಭೀತಿ ಮತ್ತು ಗೊಂದಲ ನಾಗರಿಕರನ್ನು ಆವರಿಸಿದೆ. ಅನೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯ ಸಂದೇಶವನ್ನು ಕಳುಹಿಸಲಾಗಿದ್ದು ಸಾರ್ವಜನಿಕರಲ್ಲಿ ಗೊಂದಲವನ್ನೇ ಸೃಷ್ಟಿ ಮಾಡಿದೆ.

ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳಾಗುವ ಎಚ್ಚರಿಕೆಯ ಈ ಸಂದೇಶಗಳು ಮೊಬೈಲ್ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ. ಈ ಅಧಿಸೂಚನೆಯ ಬಗ್ಗೆ ಹಲವರು ಆಶ್ಚರ್ಯ ಪಡುತ್ತಿದ್ದಾರೆ. ವಿವಿಧ ಸರ್ಚ್ ಇಂಜಿನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ಈ ಎಚ್ಚರಿಕೆ ಸಂದೇಶಗಳನ್ನು ಹಂಚಿಕೊಂಡಿದ್ದಾರೆ. ಈ ಸಂದೇಶದಲ್ಲಿ ಹವಮಾನದ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಅನೇಕ ಸೆಲ್ ಫೋನ್ ಬಳಕೆದಾರರು ಗೊಂದಲಕ್ಕೊಳಗಾಗಿ ಸಂದೇಶವನ್ನು ಅಳಿಸಿದ್ದಾರೆ. ಒಬ್ಬ ಮೊಬೈಲ್ ಬಳಕೆದಾರರು "ಭಯಪಡುವ ಯಾವುದೇ ಕಾರಣವಿಲ್ಲ, ಏಕೆಂದರೆ ಇದು ತೀವ್ರವಾದ ಬಿರುಗಾಳಿ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಸಂದೇಶವಾಗಿರಬಹುದು, ಇದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಸಂಭವನೀಯ ಜೀವ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಬಹುದು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವರದಿಗಳ ಪ್ರಕಾರ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾವು ಧ್ವನಿ ಮತ್ತು ಡೇಟಾ ಸೇವೆಗಳಿಗಾಗಿ ಸೆಲ್ಯುಲಾರ್ ಮೊಬೈಲ್ ಸೇವಾ ಪೂರೈಕೆದಾರರ ನೆಟ್‌ವರ್ಕ್ ಗುಣಮಟ್ಟವನ್ನು ನಿರ್ಣಯಿಸಲು ದೇಶಾದ್ಯಂತ 20 ಸ್ಥಳಗಳಲ್ಲಿ ಡ್ರೈವ್ ಪರೀಕ್ಷೆಗಳನ್ನು ನಡೆಸಿತು. ಆರಂಭಿಕ ಎಚ್ಚರಿಕೆಯು ಜನರನ್ನು ಸೆಳೆಯಿತು. ಆದರೆ ಈ ಪರೀಕ್ಷೆಗಳು ಸರ್ಕಾರದ ವಿಪತ್ತು ಎಚ್ಚರಿಕೆಯ ತಂತ್ರಗಳ ಭಾಗವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ಹಮವಾನ ಸಂಬಂಧಿತದ ಎಚ್ಚರಿಕೆಯ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ನಡೆಸಲಾದ ಪರೀಕ್ಷೆಗಳ ಸಮಯದಲ್ಲಿ ದೂರಸಂಪರ್ಕ ಇಲಾಖೆ ಇದನ್ನು ನಡೆಸುತ್ತದೆ. ವರದಿಯ ಪ್ರಕಾರ, ಒಟ್ಟಾರೆ ವಿಪತ್ತು ಜಾಗೃತಿ ಮತ್ತು ಸನ್ನದ್ಧತೆಯನ್ನು ಉತ್ತೇಜಿಸಲು, ತುರ್ತು ಎಚ್ಚರಿಕೆಗಳೊಂದಿಗೆ ಪರಿಚಿತರಾಗಲು ಬಳಕೆದಾರರಿಗೆ ಇದು ಸಹಾಯ ಮಾಡುತ್ತದೆ.
ಎಚ್ಚರಿಕೆಗಳು ಕೇವಲ ಪರೀಕ್ಷೆಯಾಗಿದೆ. ಬದಲಿಗೆ ಇದು ಯಾವುದೇ ಬೆದರಿಕೆಗಳ ಸಂದೇಶವಲ್ಲ ಎಂದು ಟೆಲಿಕಾಂ ಸಚಿವಾಲಯ ಸ್ಪಷ್ಟಪಡಿಸಿದೆ. ಸಂದೇಶಗಳನ್ನು 10:20 AM ಕ್ಕೆ ರಾಷ್ಟ್ರವ್ಯಾಪಿ ರವಾನಿಸಲಾಯಿತು. ನಂತರದ ಎಚ್ಚರಿಕೆಗಳನ್ನು 10:25 AM ಮತ್ತು 10:31 AM ಕ್ಕೆ ಕಳುಹಿಸಲಾಯಿತು, ಇವೆಲ್ಲವೂ ಭಾರತ ಸರ್ಕಾರದಿಂದ ನಡೆಸಲಾದ ಪರೀಕ್ಷೆಗಳು ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಟೆಲಿಕಾಂ ಸಚಿವಾಲಯ ಮತ್ತು ಜಿಲ್ಲೆ/ರಾಜ್ಯ ಅಧಿಕಾರಿಗಳು ಈ ಎಚ್ಚರಿಕೆಗಳ ಮೂಲ ಮತ್ತು ಉದ್ದೇಶದ ಬಗ್ಗೆ ಯಾವುದೇ ತಕ್ಷಣದ ಪ್ರತಿಕ್ರಿಯೆ ಅಥವಾ ಸ್ಪಷ್ಟೀಕರಣವನ್ನು ನೀಡಲು ವಿಫಲರಾಗಿದೆ.












Click it and Unblock the Notifications