ಚು. ಚುಟುಕು: ಇದು ಕಾಂಗ್ರೆಸ್ಸಿನ ವಿದಾಯ ಯಾತ್ರೆ : ಬಿಜೆಪಿ
ಬೆಂಗಳೂರು, ಮೇ.10: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
5.00: ಉತ್ತರಪ್ರದೇಶದ ಸಿಎಂ ಅಖಿಲೇಶ್ ಯಾದವ್ ಅವರಿಂದ ಬೃಹತ್ ಪ್ರಚಾರ ಮೆರವಣಿಗೆ.
4.15: ರಾಹುಲ್ ಗಾಂಧಿ ಉತ್ತರಪ್ರದೇಶದ ಚಂದೌಲಿಯಲ್ಲಿ ಮತಯಾಚನೆ.
4.00: ಉತ್ತರ ಪ್ರದೇಶದ ಖುಷಿನಗರದಲ್ಲಿ ಮೋದಿ ಚುನಾವಣಾ ಪ್ರಚಾರ.
13.00: ವಾರಣಾಸಿಯಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಅಭ್ಯರ್ಥಿ ಅಜಯ್ ರಾಯ್ ಪರ ನಡೆಸಿರುವ ಪ್ರಚಾರ ಮೆರವಣಿಗೆ ಬಗ್ಗೆ ಅಣಕವಾಡಿರುವ ಬಿಜೆಪಿ 'ಇದು ಕಾಂಗ್ರೆಸ್ಸಿನ ಅಂತಿಮ ವಿದಾಯ ಯಾತ್ರೆ' ಎಂದಿದೆ
12.45: ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಅವರಿಗೆ ಮೇ.23ರಂದು ಹಾಜರಾಗುವಂತೆ ಮುಂಬೈ ಕೋರ್ಟಿನಿಂದ ಸಮನ್ಸ್ ಬಂದಿದೆ.
12.30: ಮುಸ್ಲಿಮರ ಶೇ 60 ರಷ್ಟು ಮತಗಳನ್ನು ಇಟ್ಟುಕೊಂಡು ಗೆಲ್ಲಲು ಆಗುವುದಿಲ್ಲ. ವಾರಣಾಸಿ ಲೆಕ್ಕಾಚಾರ ಬೇರೆ ಇದೆ ಎಂದು ಬಿಜೆಪಿ ಹೇಳಿಕೆ.

12.15: ಬಿಸ್ಮಿಲ್ಲಾ ಖಾನ್ ಅವರ ಕುಟುಂಬ ರಾಹುಲ್ ಗಾಂಧಿ ರೋಡ್ ಶೋಗಾಗಿ ವಿಶೇಷವಾಗಿ ಹಿಮ್ಮೇಳ ಒದಗಿಸಿದರು.
11.45: ಖ್ವಾಮಿ ಏಕ್ತಾ ದಳ ನಾಯಕ ಮುಖ್ತಾರ್ ಅನ್ಸಾರಿ ಬಿಡುಗಡೆಯನ್ನು ಪ್ರಶ್ನಿಸಿದ ಬಿಜೆಪಿ.11.00: ವಾರಣಾಸಿಯಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಮೆರವಣಿಗೆಗೆ ಚುನಾವಣಾ ಆಯೋಗ ಅನುಮತಿ ನೀಡಿರುವುದಕ್ಕೆ ಬಿಜೆಪಿ ನಾಯಕ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. ಮೋದಿ ಅವರ ಸಮಾವೇಶಕ್ಕೆ ಸುರಕ್ಷತೆಯ ನೆಪ ಹೇಳಿ ಮೆರವಣಿಗೆ ರದ್ದು ಮಾಡಿದ್ದೇಕೆ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.
10.45: ವಾರಣಾಸಿಯಲ್ಲಿ ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರು ರೋಡ್ ಶೋ ನಡೆಸಲಿದ್ದಾರೆ.
9.00 : ವಾರಣಾಸಿಯಲ್ಲಿ ಬೃಹತ್ ರೋಡ್ ಶೋ ಆರಂಭಿಸಿದ ರಾಹುಲ್ ಗಾಂಧಿ

8.30: ಮೋದಿ ವಿರುದ್ಧ ದ್ವೇಷ ಭಾಷಣ ಹಿನ್ನೆಲೆ ರಾಹುಲ್ ಗಾಂಧಿಗೆ ಆಯೋಗದಿಂದ ನೋಟಿಸ್.
8.15: ಅಮೇಥಿ ಬೂತಿನಲ್ಲಿ ಕಾಣಿಸಿಕೊಂಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತನಿಖೆ ಮುಂದುವರೆದಿದೆ.












Click it and Unblock the Notifications