ಚುಟುಕು: ಏ.1ಕ್ಕೆ ಮೋದಿ ಚುನಾವಣೆ ಕಚೇರಿ ಆರಂಭ
ಬೆಂಗಳೂರು, ಮಾ.30: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
* ಏ.1ಕ್ಕೆ ಮೋದಿ ಚುನಾವಣೆ ಕಚೇರಿ ಆರಂಭಗೊಳ್ಳಲಿದ್ದು, ಮೋದಿ ಆಪ್ತ ಅಮಿತ್ ಶಾ ಅವರು ಉದ್ಘಾಟನೆ ಮಾಡಲಿದ್ದಾರೆ.
* 1971 ರಿಂದ ನಂತರ ಬಾಂಗ್ಲಾದೇಶದಿಂದ ವಲಸೆ ಬಂದು ಅಸ್ಸಾಂ ಇತರೆಡೆ ಸೇರಿಕೊಂಡಿರುವ ಜನರ ಲೆಕ್ಕ ಹಾಕಬೇಕಿದೆ. ಅಕ್ರಮ ವಲಸೆ ತಡೆಗಟ್ಟಬೇಕು.
* ಚುನಾವಣೆ ಮತ ಪ್ರಚಾರ ಸಂದರ್ಭದಲ್ಲಿ ಜಯಲಲಿತಾ ಅವರು ಹೆಲಿಕಾಪ್ಟರ್ ಬಳಕೆ ಬಗ್ಗೆ ವಿಪಕ್ಷಗಳಿಂದ ಟೀಕೆ.
* ಬಿಜೆಪಿಯಿಂದ ಉಚ್ಚಾಟಿತ ಸಾಬೀರ್ ಅಲಿಯಿಂದ ಮುಖ್ತಾರ್ ಅಬ್ಬಾಸ್ ನಖ್ವಿಗೆ ಬೆದರಿಕೆ

10.25: ಹಿರಿಯ ರಾಜಕಾರಣಿ, ಮಾಜಿ ಸಚಿವ ಜಸ್ವಂತ್ ಸಿಂಗ್ ಅವರನ್ನು ಬಿಜೆಪಿಯಿಂದ 6 ವರ್ಷಗಳ ಉಚ್ಚಾಟನೆ ಮಾಡಲಾಗಿದೆ. ರಾಜಸ್ಥಾನದ ಬಾರ್ಮಾರ್ ನಿಂದ ಜಸ್ವಂತ್ ಸಿಂಗ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
10.20: ತೆಲಂಗಾಣದ ಒಟ್ಟು 17 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 11 ಕ್ಷೇತ್ರಕ್ಕೆ ಬೇಡಿಕೆ, 8 ಸೀಟು ಕೊಡುತ್ತೀವಿ ಎಂದ ಟಿಡಿಪಿ. ಮುರಿದ ಮಾತುಕತೆ, ತೆಲಂಗಾಣದಲ್ಲಿ ಬಿಜೆಪಿ-ಟಿಡಿಪಿ ಹೊಂದಾಣಿಕೆ ಇಲ್ಲ.

10.10: ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷದ ಜತೆ ಚುನಾವಣೋತ್ತರ ಮೈತ್ರಿಗೆ ನಾವು ಸಿದ್ಧ ಎಂದು ಸಿಪಿಐ(ಎಂ). ಆದರೆ, ಜಯಲಲಿತಾ ಅವರು ಕಾಂಗ್ರೆಸ್, ಬಿಜೆಪಿ ಜತೆ ಯಾವುದೇ ಮೈತ್ರಿ ಹೊಂದಬಾರದು ಎಂದು ಸೀತಾರಾಮ್ ಯೆಚೂರಿ ಹೇಳಿಕೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
9.45: ಮೋದಿ ನೀಡಿದ ಮೂರು 'ಎಕೆ' ಹೇಳಿಕೆಗೆ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಅವರಿಗೆ ಬೆಂಬಲ. ಅರವಿಂದ್ ಕೇಜ್ರಿವಾಲ್ ಪಾಕಿಸ್ತಾನಿ ಏಜೆಂಟ್ ಎಂದು ಪುನರುಚ್ಚಾರ.
9.00: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಅಜಮ್ ಘರ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ.












Click it and Unblock the Notifications