'ಫೇಸ್ ಬುಕ್, ಟ್ವಿಟ್ಟರ್ ಐಡಿ ನೀಡಿಕೆ ಕಡ್ಡಾಯ'
ವಾರಣಾಸಿ, ಮಾ.25: ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. ಮೊದಲಿಗೆ ಓದಿ ಭ್ರಷ್ಟಾಚಾರದ ಭಸ್ಮಾಸುರ ಸಂಹಾರಕ್ಕೆ ಸಿದ್ದವಾಗಿರುವ ಜನ ಸಾಮಾನ್ಯ ನಾಯಕರ ಅರವಿಂದ್ ಸುದ್ದಿ ಪ್ರಮುಖವಾಗಿದೆ.
4.30: ಚುನಾವಣಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಆಸ್ತಿ ವಿವರದ ಜತೆಗೆ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಜೀಮೇಲ್, ಯೂಟ್ಯೂಬ್, ವೆಬ್ ತಾಣಗಳ ಅಧಿಕೃತ ಖಾತೆ ವಿವರ ಸಲ್ಲಿಸುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಸೂಚನೆ ಹೊರಡಿಸಿದೆ.
4.15: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಧಾರವಾಡದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ
3.30: ವಾರಣಸಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮೊಟ್ಟೆ ಹಾಗೂ ಇಂಕ್ ಎಸೆತ.
3.15: ಕಾಂಗ್ರೆಸ್ ನಿಂದ ಮಾ.26ರಂದು ಪಕ್ಷದ ಪ್ರಣಾಳಿಕೆ ಬಿಡುಗಡೆ.
2.45: ಸುಖ್ವಿಂದರ್ ಸಿಂಗ್ ಹಾಡಿರುವ ಬಿಜೆಪಿ ಥೀಮ್ ಸಾಂಗ್ Mein desh nahin jhukne doonga ಆಡಿಯೋ, ವಿಡಿಯೋ ರಿಲೀಸ್ ಮಾಡಿದ ಅರುಣ್ ಜೇಟ್ಲಿ

2.25: ಡಿಎಂಕೆ ಪಕ್ಷ ಮಾಜಿ ಕೇಂದ್ರ ಸಚಿವ ಎಂಕೆ ಅಳಗಿರಿ ಅವರನ್ನು ಪಕ್ಷ ವಿರೋಧಿ ಎಂದು ಪಕ್ಷದಿಂದ ಉಚ್ಚಾಟನೆ ಮಾಡಿದೆ. ಅಳಗಿರಿ ಅವರು ಪಕ್ಷ ಸಂಸ್ಥಾಪಕ ಎಂ. ಕರುಣಾನಿಧಿ ಅವರ ಹಿರಿಯ ಪುತ್ರ.
2.00: ಲಾಲು ಅವರ ಪತ್ನಿ ರಾಬ್ರಿ ದೇವಿ ಅವರು ತಮ್ಮ ಸೋದರ ಮಾಜಿ ಸಂಸದ ಸಾಧು ಯಾದವ್ ಅಲಿಯಾಸ್ ಅನಿರುದ್ಧ್ ಪ್ರಸಾದ್ ವಿರುದ್ಧ ಸರನ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
1.45: ಮೋದಿ ಬರಲಿ, ದಿಗ್ವಿಜಯ್ ಬರಲಿ ನಾನು ಸ್ಪರ್ಧಿಸಲು ಸಿದ್ಧ. ನಾನು ಸ್ಥಳೀಯನಲ್ಲ ಆದರೆ, ಇದು ಲೋಕಲ್ ಎಲೆಕ್ಷನ್ ಅಲ್ಲ : ವಾರಣಾಸಿಯಲ್ಲಿ ಕೇಜ್ರಿವಾಲ್ ಹೇಳಿಕೆ.
1.30: ನಿವೃತ್ತ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಗಾಜಿಯಾಬಾದ್ ನಿಂದ ಕಣಕ್ಕಿಳಿಯುತ್ತಿದ್ದಾರೆ.

1.15: ಬಂಗಾಳದ ಸ್ಟಾರ್ ಪ್ರಚಾರಕ ನಟ ದೇವ್ ಅತ್ಯಾಚಾರ ಕುರಿತಂತೆ ನೀಡಿದ ಹೇಳಿಕೆ ಕ್ಷಮೆಯಾಚಿಸಿದ್ದಾರೆ.
12.30: ರಾಜಸ್ಥಾನದ ಬರ್ಮಾರ್ ಕ್ಷೇತ್ರದಿಂದ ಕರ್ನಲ್ ಸೋನಾ ರಾಮ್ ಚೌಧುರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ, ಜಸ್ವಂತ್ ಸಿಂಗ್ ವಿರುದ್ಧ ಸ್ಪರ್ಧೆ.
11.45: ಆಮ್ ಆದ್ಮಿ ಪಕ್ಷದ ಸಮಾವೇಶಕ್ಕಾಗಿ ಉತ್ತರಪ್ರದೇಶಕ್ಕಾಗಿ ವಾರಣಾಸಿಗೆ ಬಂದಿರುವ ಅರವಿಂದ್ ಕೇಜ್ರಿವಾಲ್ ಅವರು ಜನರ ಅಭಿಮತ ಕೇಳಿ ಮೋದಿ ವಿರುದ್ಧ ಸ್ಪರ್ಧೆಗಿಳಿಯುವುದನ್ನು ಘೋಷಿಸಲಿದ್ದಾರೆ.
11.00: ವಾರಣಾಸಿಯ ಪವಿತ್ರ ಗಂಗಾ ನದಿಯಲ್ಲಿ ಮಿಂದು ಕಾಶಿ ವಿಶ್ವೇಶ್ವರ ಸ್ವಾಮಿಯ ಸನ್ನಿಧಿಗೆ ತೆರಳಿದ ಜನ ಸಾಮಾನ್ಯರ ಪಕ್ಷದ ಅರವಿಂದ್ ಕೇಜ್ರಿವಾಲ್
10.45: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಬೋಗಸ್ ವೋಟಿಂಗ್ ಡಬ್ಬಲ್ ವೋಟಿಂಗ್ ಹೇಳಿಕೆ ವಿರುದ್ಧ ಆಯೋಗಕ್ಕೆ ಎಎಪಿ ಅಧಿಕೃತ ದೂರು ದಾಖಲು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

10.30: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳ ಹಾಗೂ ತ್ರಿಪುರ ಚುನಾವಣಾ ಪ್ರಚಾರದಲ್ಲಿ ಭಾಗಿ
10.00: ಅನಿಲ ಬೆಲೆ ಏರಿಕೆ ಕುರಿತಂತೆ ಬಗ್ಗೆ ಚುನಾವಣಾ ಆಯೋಗ ನೀಡಿರುವ ತೀರ್ಪಿನ ಬಗ್ಗೆ ಸಾಲಿಸಿಟರ್ ಜನರಲ್ ಅವರ ಸಲಹೆ ಪಡೆಯಲಿರುವ ಯುಪಿಎ ಸರ್ಕಾರ.
9.30: ಪಶ್ಚಿಮ ಬಂಗಾಳದ ಕಾಂಗ್ರೆಸ್ ಹಾಲಿ ಸಂಸದೆ ದೀಪಾ ದಾಸ್ ಮುನ್ಶಿ ಅವರು ಅಳಿಯ ಸತ್ಯರಂಜನ್ ದಾಸ್ ಮುನ್ಶಿ (ತೃಣಮೂಲ ಕಾಂಗ್ರೆಸ್) ವಿರುದ್ಧ ಸ್ಪರ್ಧಿಸಲಿದ್ದಾರೆ.
9.00: ಕೇಂದ್ರ ಸಚಿವ ಸಚಿನ್ ಪೈಲಟ್ ವಿರುದ್ಧ ರಾಜಸ್ಥಾನದ ಅಜ್ಮೇರ್ ನಲ್ಲಿ ಬಿಜೆಪಿ ಬೆಂಬಲಿತ ಜಾಟ್ ನಾಯಕರನ್ನು ಕಣಕ್ಕಿಳಿಸುವ ಸುಳಿವು ಸಿಕ್ಕಿದೆ.












Click it and Unblock the Notifications