ಚುಟುಕು ಸುದ್ದಿ: 'ಮೋದಿ ಎಂದರೆ ಭಾರತ ವಿಭಜನೆ ಮಾದರಿ'
ಬೆಂಗಳೂರು, ಏ.28: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
1.45: ಮೋದಿ ಎಂದರೆ ಭಾರತ ವಿಭಜನೆ ಮಾದರಿ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.
1.30 : ಬಿಹಾರದ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
1.15: ರಾಹುಲ್ ಗಾಂಧಿ ಅವರು ಪಂಜಾಬಿನ ಭಟಿಂಡಾದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ.

11.00: ಆಂಧ್ರಪ್ರದೇಶದಲ್ಲಿ ಚುನಾವಣಾ ಕಣದ ಬಿಸಿಲು ದಿನೇದಿನೇ ಏರುತ್ತಿದೆ. ಈ ನಡುವೆ ಚುನಾವಣಾ ಪ್ರಚಾರ ನಿರತ ಬಿಜೆಪಿ ಅಭ್ಯರ್ಥಿ ದಗ್ಗುಬಾಟಿ ಪುರಂಧೇಶ್ವರಿ ಅವರ ಮೇಲೆ ಪೆಪ್ಪರ್ ಸ್ಪ್ರೇ ದಾಳಿ ಮಾಡಲಾಗಿದೆ.. ಆಂಧ್ರದ ಮಾಜಿ ಸಿಎಂ ದಿವಂಗತ ಎನ್ ಟಿ ರಾಮರಾವ್ ಅವರ ಪುತ್ರಿ, ಬಾಲಕೃಷ್ಣ, ಹರಿಕೃಷ್ಣ ಅವರ ಸೋದರಿ ಪುರಂದೇಶ್ವರಿ ಅವರ ಮೇಲೆ ಮೆಣಸಿನ ಪುಡಿ ಎರಚಿರುವುದನ್ನು ಟಿಡಿಪಿ ತೀವ್ರವಾಗಿ ಖಂಡಿಸಿದೆ.

10.40: ಗುಜರಾತಿನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ನಡೆಸಲಿದ್ದಾರೆ.
10.00: ವಾರಣಾಸಿಯಲ್ಲಿ 32 ಸಾವಿರ ಸಿಬ್ಬಂದಿಗಳನ್ನು 1650 ಮತಗಟ್ಟೆ ಕಾಯಲಿಕ್ಕೆ ನಿಯೋಜಿಸಲಾಗಿದೆ.












Click it and Unblock the Notifications