ಚುಟುಕು: ಕೇಜ್ರಿವಾಲ್ ನಂತರ ಮೋದಿ ನಾಮಪತ್ರ
ಬೆಂಗಳೂರು, ಏ.22: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
5.45: ವಾರಣಾಸಿಯಲ್ಲಿ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧೆಗಿಳಿದಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಏ.23ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಮೋದಿ ಅವರು ಏ.24ರಂದು ನಾಮಪತ್ರ ಸಲ್ಲಿಸಲಿದ್ದಾರೆ.
5.10: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂಸಿಂಗ್ ಯಾದವ್ ಅವರು ಅಜಮ್ ಘರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

4.30: ಅಮ್ಮ ಸೋನಿಯಾ ಗಾಂಧಿ ಪರ ಮಗಳು ಪ್ರಿಯಾಂಕಾ ಗಾಂಧಿ ಮತಯಾಚನೆ. ರಾಯ್ ಬರೇಲಿಯಲ್ಲಿ ಭರ್ಜರಿ ಭಾಷಣ.
10.55: ಬಿಜೆಪಿಯ ಕೆಲವು ಹಿತೈಷಿಗಳ ದ್ವೇಷ ಭಾಷಣ ನಿಜಕ್ಕೂ ದುಃಖಕರ, ಇದರಿಂದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಭಿವೃದ್ಧಿ, ಒಳ್ಳೆ ಆಡಳಿತದ ಬಗ್ಗೆ ಮಾತನಾಡಲು ಕಷ್ಟವಾಗುತ್ತಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಂದ ಟ್ವೀಟ್.
Petty statements by those claiming to be BJP's well wishers are deviating the campaign from the issues of development & good governance.
— Narendra Modi (@narendramodi) April 22, 2014 10.00: ಎಎಪಿ ನಾಯಕ ಆಶುತೋಷ್ ಅವರು ತೊಗಾಡಿಯಾ ಅವರನ್ನು ತಕ್ಷಣವೇ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ. ತೊಗಾಡಿಯಾ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ, ಆರೆಸ್ಸೆಸ್, ವಿಎಚ್ ಪಿ ಗೆ ಶೇಮ್ ಎಂದಿದ್ದಾರೆ.

9.45: ತೃಣಮೂಲ ಕಾಂಗ್ರೆಸ್ ನ ಅಸಾನ್ಸೋಲ್ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಅವರು ವಂಚನೆ ಆರೋಪ ಎದುರಿಸುತ್ತಿದ್ದು, ಮಂಗಳವಾರ ಕೋರ್ಟಿನ ಮುಂದೆ ಶರಣಾಗತರಾಗಲಿದ್ದಾರೆ.
9.30: ಆಂಧ್ರಪ್ರದೇಶದಲ್ಲಿ ನರೇಂದ್ರ ಮೋದಿ ಅವರು ಸರಣಿ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಲಾಲ್ ಬಹದ್ದೂರ್ ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಜತೆ ಮೋದಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.












Click it and Unblock the Notifications