ಚುಟುಕು: ವರುಣ್ ನಾಮಪತ್ರ, ವಾರಣಾಸಿಯಲ್ಲಿ ಕೇಜ್ರಿ
ಬೆಂಗಳೂರು, ಏ.15: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
11.05: ಸುಲ್ತಾನ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
10.45 : ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರು ವಾರಾಣಸಿಗೆ ಬಂದು ನೆಲೆಸಿದ್ದು, ಚುನಾವಣೆ ಮುಗಿಯುವ ತನಕ ಅಲ್ಲೇ ಠಿಕಾಣಿ ಹೂಡಲಿದ್ದಾರೆ.
10.30: ಅಮೇಥಿಯಲ್ಲಿ ಇನ್ನು ಕೆಲವು ಕ್ಷಣಗಳಲ್ಲಿ ಆಮ್ ಆದ್ಮಿ ಪಕ್ಷದ ಕುಮಾರ್ ವಿಶ್ವಾಸ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ.

9.35: ಬಿಜೆಪಿ ಅಧ್ಯಕ್ಷ, ಲಕ್ನೋ ಅಭ್ಯರ್ಥಿ ರಾಜನಾಥ್ ಸಿಂಗ್ ಅವರು ಮುಸ್ಲಿಂ ನಾಯಕರೊಂದಿಗೆ ನಡೆಸಿದ ಮಾತುಕತೆ ಕಂಡು ಸಮಾಜವಾದಿ ಪಕ್ಷ ಕಿಡಿ ಕಾರಿದೆ. ಮತಬ್ಯಾಂಕ್ ಗಾಗಿ ಬಿಜೆಪಿ ಏನು ಬೇಕಾದರೂ ಮಾಡಬಲ್ಲದು ಎಂದು ಎಸ್ಪಿ ನಾಯಕ ರಾಜೇಂದ್ರ ಚೌಧುರಿ ಹೇಳಿದ್ದಾರೆ.












Click it and Unblock the Notifications