ಚುಟುಕು: ಗೆದ್ದ ಮೇಲೆ ಪ್ರತ್ಯೇಕ ರಾಜ್ಯದ ಭರವಸೆ
ಬೆಂಗಳೂರು, ಏ.10: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
4.30: ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಮತದಾನ ಮಾಡಿದ ನಂತರ ಮಾತನಾಡಿ, ಪ್ರತ್ಯೇಕ ಬುಂದೇಲ್ ಖಂಡ್ ರಾಜ್ಯ ಸ್ಥಾಪನೆ ಭರವಸೆ ನೀಡಿದ್ದಾರೆ. ಮೋದಿ ಸರ್ಕಾರ ಕೇಂದ್ರದಲ್ಲಿ ಬಂದ ಮೂರು ವರ್ಷಗಳಲ್ಲಿ ಹೊಸ ರಾಜ್ಯ ಸ್ಥಾಪನೆ ಮಾಡುತ್ತೇನೆ ಎಂದಿದ್ದಾರೆ.
3.45: ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರು ಪಶ್ಚಿಮ ಬಂಗಾಳದ ಮಾಲ್ಡದಲ್ಲಿ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ.
2.00: ದಿನಕ್ಕೊಮ್ಮೆ ಮೋದಿ ಅವರನ್ನು ಬೈಯದಿದ್ದರೆ ಮಮತಾಗೆ ತಿಂದಿದ್ದು ಅರಗುವುದಿಲ್ಲ: ಉಮಾ ಭಾರತಿ.

1.30: ರಾಹುಲ್ ಗಾಂಧಿ ಅವರು ರಾಜಸ್ಥಾನದ ಝುಂಜುನು, ಉದಯಪುರ್, ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತನಾಗಿದ್ದಾರೆ.
1.00: ಗಲಭೆ ಪೀಡಿತ ಮುಜಾಫರ್ ನಗರದ 150 ಕುಟುಂಬಗಳು ತಮ್ಮ ಕ್ಷೇತ್ರಕ್ಕೆ ಹಿಂತಿರುಗಿ ಮತದಾನ ಮಾಡಿದ್ದಾರೆ.
12.30: ಮತ ಹಾಕಿದ ಮೇಲೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಮೋದಿ ಅಲೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಸೋನಿಯಾ ಹಾಗೂ ರಾಹುಲ್ ಪರ ಮಾತ್ರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.
11.15: ಲೋಕಸಭೆ ಚುನಾವಣೆ ಗುರುವಾರ ಪ್ರಮುಖ ಘಟವನ್ನು ತಲುಪಿದ್ದು, ದೇಶದ 11 ರಾಜ್ಯ ಮತ್ತು ಮೂರು ಕೇಂದ್ರ ಆಡಳಿತ ಪ್ರದೇಶದಲ್ಲಿ ಬೆಳಗ್ಗೆಯಿಂದ ಮೂರನೇ ಹಂತದ ಮತದಾನ ಆರಂಭವಾಗಿದೆ.
11.00: ದೆಹಲಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮೀನಾಕ್ಷಿ ಲೇಖಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕಿರಣ್ ಬೇಡಿ, ನಾಗ್ಪುರದಲ್ಲಿ ನಿತಿನ್ ಗಡ್ಕರಿ, ತಿರುವನಂತಪುರದಲ್ಲಿ ಶಶಿ ತರೂರ್ ಹಾಗೂ ಚಂಡೀಗಢದಲ್ಲಿ ಪವನ್ ಕುಮಾರ್ ಬನ್ಸಾಲ್, ನೋಯ್ಡಾದಲ್ಲಿ ಆಮ್ ಆದ್ಮಿ ಪಕ್ಷದ ಪ್ರಶಾಂತ್ ಭೂಷಣ್ ಮುಂತಾದವರು ಮತದಾನ ಮಾಡಿದ ಮೊದಲಿಗರು.

10.45: ಉತ್ತರ ಪ್ರದೇಶದ ಗಲಭೆ ಪೀಡಿತ ಮುಜಾಫರ್ನಗರದಲ್ಲಿ ದಾಖಲೆಯ ಮತದಾನವಾಗಿದ್ದು, ಮತದಾನ ಆರಂಭವಾದ ಕೇವಲ 2 ಗಂಟೆಗಳಲ್ಲೇ ಶೇ.12ರಷ್ಟು ಮತದಾನವಾಗಿದೆ.
10.00: ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ನಾಗಪುರದಲ್ಲಿ ಮತ ಚಲಾಯಿಸಿದ್ದಾರೆ. ಎಎಪಿ ನಾಯಕ ಮನೀಶ್ ಸಿಸೋಡಿಯಾ ಪಾಂಡವ್ ನಗರ, ದೆಹಲಿಯಲ್ಲಿ ಮತ ಹಾಕಿದ್ದಾರೆ.
9.45: ನಕ್ಸಲರ ಬೆದರಿಕೆ ಹಿನ್ನೆಲೆಯಲ್ಲಿ ಬಿಹಾರದ ಜಮೂಹಿ ಲೋಕಸಭಾ ಕ್ಷೇತ್ರದ 12 ಮತಕೇಂದ್ರಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ.












Click it and Unblock the Notifications