ಚುಟುಕು: ವಿದಿಶಾದಲ್ಲಿ ಸುಷ್ಮಾ ಸ್ವರಾಜ್ ನಾಮಪತ್ರ ಸಲ್ಲಿಕೆ
ಬೆಂಗಳೂರು, ಏ.4: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. ಯುಪಿಎ ಸರ್ಕಾರ ನಡೆಸಿರುವ ಪಿಂಕ್ ಚಳವಳಿ ಬಗ್ಗೆ ಮೋದಿ ನೀಡಿರುವ ಹೇಳಿಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.
2.00: ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸಿದ್ದಾರೆ.
1.30: ನಿರ್ಭಯಾ ಫಂಡ್ ಹೆಸರಿನಲ್ಲಿ ಸಂಗ್ರಹಿಸಿದ 1000 ಕೋಟಿ ರು ಏನಾಯಿತು? ಮಹಿಳಾ ಸಂರಕ್ಷಣೆ ಬಗ್ಗೆ ಸ್ಪಷ್ಟನೆ ನೀಡಿ ಎಂದು ಸೋನಿಯಾ ಅವರಿಗೆ ಪ್ರಶ್ನೆ ಎಸೆದ ನರೇಂದ್ರ ಮೋದಿ.

1.20: ಒಡಿಶಾ ಹಾಗೂ ಬಿಹಾರದಲ್ಲಿ ಇಬ್ಬರು ಎಎಪಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
12.00: ನರೇಂದ್ರ ಮೋದಿ ಅವರು ಮಹಾರಾಷ್ಟ್ರ ಹಾಗೂ ಒಡಿಶಾದಲ್ಲಿ ಭಾರತ್ ವಿಜಯ್ ಸಮಾವೇಶ ನಡೆಸುತ್ತಿದ್ದಾರೆ.
10.50: ಮೋದಿ ಅಂಕಿ ಅಂಶ ತೆಗೆದು ನೋಡಲಿ. ಎನ್ ಡಿಎ ಅಧಿಕಾರ ಅವಧಿಯಲ್ಲೇ ಹೆಚ್ಚು ಮಾಂಸ ರಫ್ತು ಮಾಡಲಾಗಿದೆ. ಗುಜರಾತ್ ಸರ್ಕಾರ ಗೋ ಮಾತಾ ರಕ್ಷಣೆ ಹೇಗೆ ಮಾಡಲು ಸಾಧ್ಯ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
BJP leader Sushma Swaraj files her nomination from Vidisha pic.twitter.com/ORV2ITrcdY
— ANI (@ANI_news) April 4, 2014 10.40: ವಡೋಧರಾದಲ್ಲಿ ನರೇಂದ್ರ ಮೋದಿ ಪೋಸ್ಟರ್ ಜಾಗದಲ್ಲಿ ತಮ್ಮ ಪೋಸ್ಟರ್ ಹಾಕಲು ಅನುಮತಿ ಕೇಳಿದ ಕಾಂಗ್ರೆಸ್ ಅಭ್ಯರ್ಥಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಮನವಿ ತಿರಸ್ಕರಿಸಿದ ಚುನಾವಣಾ ಆಯೋಗ.

10.00: ವಾಜಪೇಯಿ ಸರ್ಕಾರದ ಅವಧಿಯಲ್ಲಿ ಸುಮಾರು 3.5 ಲಕ್ಷ ಮೆಟ್ರಿಕ್ ಟನ್ ಮಾಂಸ ರಫ್ತು ಮಾಡಲಾಗಿದೆ ಎಂದು ಶಕೀಲ್ ಅಹ್ಮದ್ ಟ್ವೀಟ್.
9.30: ನರೇಂದ್ರ ಮೋದಿ ಅವರು ಬಾಬಾ ರಾಮದೇವ್ ಭೇಟಿ ಮಾಡಬಹುದಾದರೆ, ಸೋನಿಯಾ ಗಾಂಧಿ ಅವರು ಇಮಾಮ್ ಬುಖಾರಿ ಭೇಟಿ ಏಕೆ ಮಾಡಬಾರದು ಎಂದು ಕಾಂಗ್ರೆಸ್ ನಾಯಕ ಮೀಮ್ ಅಫ್ಜಲ್ ಪ್ರಶ್ನೆ
Modi talks against Meat Export but maximum Meat Factories came up in NDA regime. What has Gujarat Govt done for protection of Gau Mata?
— digvijaya singh (@digvijaya_28) April 4, 2014 











Click it and Unblock the Notifications