ಮನೋಹರ್ ಪರಿಕ್ಕರ್ ವಿರುದ್ದ ಚುನಾವಣಾ ಆಯೋಗಕ್ಕೆ ದೂರು
ಪಣಜಿ, ಫೆಬ್ರವರಿ 1: ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ವಿರುದ್ಧ ಗೋವಾ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ಶೀಘ್ರದಲ್ಲೇ ಆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಬಿಜೆಪಿ ಪರವಾಗಿ ಪ್ರಚಾರಕ್ಕೆ ತೆರಳಿದ್ದ ಪರಿಕ್ಕರ್, ಚುನಾವಣಾ ರ್ಯಾಲಿಯೊಂದರಲ್ಲಿ ಭಾಷಣ ಮಾಡುತ್ತಾ ''ಮತದಾರರು ಯಾವುದೇ ಅಭ್ಯರ್ಥಿ ಅಥವಾ ಪಕ್ಷದಿಂದ ಹಣ ಪಡೆಯಬಹುದು. ಆದರೆ, ಮತವನ್ನು ಮಾತ್ರ ಬಿಜೆಪಿಗೇ ಹಾಕಬೇಕು'' ಎಂದು ತಾಕೀತು ಮಾಡಿದ್ದರು.

ಈ ಹೇಳಿಕೆಯು ವಿವಾದವನ್ನೆಬ್ಬಿಸಿದ್ದು ಗೋವಾದ ರಾಜಕೀಯ ಪಕ್ಷವಾದ ಗೋವಾ ಫಾರ್ವಾರ್ಡ್ ಪಕ್ಷದ ವಕ್ತಾರ ದುರ್ಗಾದಾಸ್ ಕಾಮತ್ ಎಂಬುವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ದೂರಿನ ಜತೆಯಲ್ಲಿ ಪರಿಕ್ಕರ್ ಅವರು ಮಾಡಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆಯುಳ್ಳ ಭಾಷಣದ ವೀಡಿಯೋ ತುಣುಕನ್ನೂ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications