ಬಕ್ರೀದ್ ಹಬ್ಬ: ಕರ್ನಾಟಕದಲ್ಲಿ ಶಾಲಾ-ಕಾಲೇಜು & ಬ್ಯಾಂಕ್‌ ರಜೆ ವಿವರ

Holiday: ಈ ವರ್ಷದ ಆರಂಭದಿಂದಲೂ ದೇಶದ ಹಲವೆಡೆ ಶಾಲಾ-ಕಾಲೇಜುಗಳು ಸೇರಿದಂತೆ ಬ್ಯಾಂಕ್‌ಗಳಿಗೆ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಬಕ್ರೀದ್ ಹಬ್ಬ ಹಿನ್ನೆಲೆ ಜೂನ್‌ 6 ಮತ್ತು 7ರಂದು ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕರ್ನಾಟಕದ ಹಲವೆಡೆ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ವರ್ಷದ ಆರಂಭದಿಂದಲೂ ಹಲವು ಜಿಲ್ಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಪ್ರತಿಭಟನೆ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಳಿಕ ಪರೀಕ್ಷೆಗಳೆಲ್ಲಾ ಮುಗಿದ ಹಿನ್ನೆಲೆ ಬೇಸಿಗೆ ರಜೆಯನ್ನೂ ನೀಡಲಾಗಿದ್ದು, ಇದೀಗ ಈ ರಜೆಯೂ ಮುಕ್ತಾಯವಾಗಿ ಶಾಲಾ-ಕಾಲೇಜುಗಳು ಪುನರಾರಂಭವಾಗಿವೆ. ಈ ನಡುವೆಯೇ ಮತ್ತೊಂದು ರಜೆ ಬರಲಿದ್ದು, ಇದರಿಂದ ಈ ಬಾರಿ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಲಿದೆ.

Eid al-Adha School-College and Bank Holiday Details in Karnataka

ಬಕ್ರೀದ್ ಹಬ್ಬ ಹಿನ್ನೆಲೆ ಜೂನ್‌ 6ರಂದು ಕೆಲವೆಡೆ ಮಾತ್ರ ಬ್ಯಾಂಕ್‌ಗಳಿಗೆ ರಜೆ ಇರಲಿದ್ದು, ಜೂನ್‌ 7ರಂದು ದೇಶದ ಬಹುತೇಕ ರಾಜ್ಯಗಳಲ್ಲಿ ರಜೆ ಇರಲಿದೆ. ಮಾಹಿತಿಯ ಪ್ರಕಾರ, ಜೂನ್‌ 7ರಂದು ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಬ್ಯಾಂಕ್‌, ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಇರಲಿದೆ.

ಇನ್ನೂ ದೇಶದ ಕೆಲವೆಡೆ ಜೂನ್ 6ರಿಂದ 8ರ ವರೆಗೆ ಬ್ಯಾಂಕುಗಳು ಮುಚ್ಚಲ್ಪಡಲಿವೆ. ಜೂನ್ 6ರಂದು ಈದ್ - ಉಲ್ - ಅಧಾ (ಬಕ್ರೀದ್) ಮತ್ತು ಜೂನ್ 7 ಬಕ್ರೀದ್ (ಈದ್ - ಉಜ್- ಜುಹಾ) ಆಚರಣೆ ಮಾಡಲಾಗುತ್ತದೆ. ಬಳಿಕ ಜೂನ್ 8 ಭಾನುವಾರ ಇರುವುದರಿಂದ ಒಟ್ಟು ಮೂರು ದಿನ ರಜೆ ಸಿಕ್ಕಂತಾಗಲಿದೆ. ಕೆಲವೊಂದು ರಾಜ್ಯಗಳಲ್ಲಿ ಜೂನ್ 11ರಂದು ಸಂತ ಗುರು ಕಬೀರ್ ಜಯಂತಿ ಅಥವಾ ಸಾಗಾ ದವಾ ಇರುವುದರಿಂದ ಬ್ಯಾಂಕುಗಳಿ ಮುಚ್ಚಲ್ಪಡಲಿವೆ. ಈ ಜಯಂತಿಯನ್ನು ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶದಲ್ಲಿ ಆಚರಣೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ?: ಜೂನ್ 1 ಭಾನುವಾರ ಈಗಾಗಲೇ ರಜೆ ಸಿಕ್ಕಿದೆ. ಇನ್ನೂ ಜೂನ್ 7 ಶನಿವಾರ ಬಕ್ರೀದ್, ಜೂನ್ 8 ಭಾನುವಾರ, ಜೂನ್ 14, ಎರಡನೇ ಶನಿವಾರ, ಜೂನ್ 15 ಭಾನುವಾರ, ಜೂನ್ 22 ಭಾನುವಾರ, ಜೂನ್ 28 ನಾಲ್ಕನೇ ಶನಿವಾರ, ಜೂನ್ 29 ಭಾನುವಾರ ಸೇರಿ ಒಟ್ಟು ಈ ತಿಂಗಳಿನಲ್ಲಿ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ನಾಲ್ಕು ದಿನ ರಜೆ ಸಿಕ್ಕಂತಾಗಲಿದೆ.

ಜೂ 27ರಂದು ರಥಯಾತ್ರೆ ಅಥವಾ ಕಾಂಗ್ ಅಥವಾ ರಥಜಾತ್ರಾ ಹಿನ್ನೆಲೆ ಒಡಿಶಾ ಮತ್ತು ಮಣಿಪುರದಲ್ಲಿ ಸರ್ಕಾರಿ ಕಚೇರಿಗಳು ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದೇ ದಿನ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯೂ ಇರಲಿದೆ. ಈಗಾಗಲೇ ದೇಶದ ಹಲವಡೆ ಬೇಸಿಗೆ ರಜೆ ಮುಕ್ತಾಯವಾಗಿದ್ದು, ಶಾಲಾ-ಕಾಲೇಜುಗಳು ಸಹ ಆರಂಭವಾಗಿವೆ. ಈ ನಡುವೆಯೂ ಮತ್ತೆ ಈ ತಿಂಗಳಲ್ಲಿ ರಜೆ ಬರಲಿವೆ.

ಕರ್ನಾಟಕದಲ್ಲಿ ಬೇಸಿಗೆ ರಜೆ ಮುಗಿದು, ಮೇ 29ರಿಂದ ಶಾಲೆಗಳು ಆರಂಭವಾಗಿವೆ. ಈ ನಡುವೆಯೇ ಭಾರೀ ಮಳೆ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ರಜೆಯನ್ನು ಮುಂದುವರೆಸಲಾಗಿದ್ದು, ಇದೀಗ ಮಳೆ ಕಡಿಮೆಯಾದ ಹಿನ್ನೆಲೆ ಮತ್ತೆ ಆರಂಭ ಮಾಡಲಾಗಿದೆ. ಈ ನಡುವೆಯೇ ಮತ್ತೆ ಬಕ್ರೀದ್‌ ಹಬ್ಬ ಹಿನ್ನೆಲೆ ಮತ್ತೊಂದು ದಿನ ರಜೆ ಸಿಕ್ಕಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+