ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಚಿದಂಬರಂಗೆ ಸಂಕಷ್ಟ?

Recommended Video

      ಜೈಲಿಗೆ ಹೋಗುವಾಗಲೂ ಮೋದಿ ಸರಕಾರವನ್ನು ಅಣಕಿಸಿದ ಚಿದಂಬರಂ | P Chidambaram

      ನವದೆಹಲಿ, ಸೆ. 08: ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂಗೆ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನವಾಗಿ ಬಸವಳಿದಿದ್ದಾರೆ. ಈಗ ಮತ್ತೊಂದು ಪ್ರಕರಣದಲ್ಲಿ ಅವರನ್ನು ವಿಚಾರಣೆಗೊಳಪಡಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಜ್ಜಾಗುತ್ತಿದ್ದಾರೆ.

      ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ವಿಮಾನ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪಿ ಚಿದಂಬರಂ ಪ್ರಶ್ನಿಸಲು ಜಾರಿ ನಿರ್ದೇಶನಾಲಯವು ಮುಂದಾಗಿದ್ದು, ಕೋರ್ಟಿನಲ್ಲಿ ಈ ಬಗ್ಗೆ ಮನವಿ ಸಲ್ಲಿಸಲಿದೆ ಎಂದು ಒನ್ಇಂಡಿಯಾಕ್ಕೆ ತಿಳಿದು ಬಂದಿದೆ. ಈ ಮುಂಚೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಸಮನ್ಸ್ ಜಾರಿ ಮಾಡಲಾಗಿತ್ತು.

      ಆದರೆ, ಅಷ್ಟರಲ್ಲಿ ಐಎನ್ಎಕ್ಸ್ ಮೀಡಿಯಾ ಕೇಸ್ ಮುನ್ನಲೆಗೆ ಬಂದು, ಚಿದಂಬರಂ ಬಂಧನವೂ ಆಗಿದೆ. ಆದರೆ, ಐಎನ್ಎಕ್ಸ್ ಮೀಡಿಯಾ ಕೇಸಿನಲ್ಲೂ ಚಿದಂಬರಂ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಅವಕಾಶ ಸಿಕ್ಕಿಲ್ಲ.

      ED set to question Chidambaram in Air India case

      ಏರ್​ಇಂಡಿಯಾ ಹಾಗೂ ಇಂಡಿಯನ್​ ಏರ್​ಲೈನ್ಸ್​ಗಾಗಿ ಒಟ್ಟು 111 ವಿಮಾನಗಳ ಖರೀದಿ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ಮುಂದಾಗಿದೆ. 2006ರಲ್ಲಿ ಯುರೋಪಿಯನ್​ ಏರೋಸ್ಪೇಸ್​ ಕಂಪನಿ ಏರ್​ಬಸ್​ನಿಂದ 43 ಏರ್ ಕ್ರಾಫ್ಟ್ ಹಾಗೂ 68 ಬೋಯಿಂಗ್ ವಿಮಾನ ಖರೀದಿಸಲು ಪಿ.ಚಿದಂಬರಂ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೆ, ಈ ಮಾಹಿತಿಯನ್ನು ಗೃಹ ಸಚಿವಾಲಯದ ಒಪ್ಪಿಗೆಗೆ ಕಳಿಸುವ ಸಂದರ್ಭದಲ್ಲಿ ನೀಡಿದ ಮಾಹಿತಿ ಮತ್ತು ಖರೀದಿ ಸಂದರ್ಭದ ಮಾಹಿತಿಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿತ್ತು.

      ಸುಮಾರು 70000 ಕೋಟಿ ರು ಮೌಲ್ಯದ ಖರೀದಿಯಲ್ಲಿ ಮಧ್ಯವರ್ತಿ ದೀಪಕ್​ ತಲ್ವಾರ್​ ವಿಮಾನಯಾನ ಸಂಸ್ಥೆಗೆ ಲಾಭವಾಗಿದ್ದು, ಏರ್ ಇಂಡಿಯಾಕ್ಕೆ ನಷ್ಟವಾಗಿದೆ ಎಂದು ವಾದಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+