ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6,000 ಕೋಟಿ ರೂ. ಮಾದಕ ವಸ್ತು ಜಾಲದಲ್ಲಿ ಪಂಜಾಬ್ ಮಾಜಿ ಸಚಿವ

By ವಿಕಾಸ್ ನಂಜಪ್ಪ
|
Google Oneindia Kannada News

ಚಂಡೀಗಢ, ಜುಲೈ 13: 6,000 ಕೋಟಿ ರೂಪಾಯಿಯ ಮಾದಕ ವಸ್ತು ಕಳ್ಳ ಸಾಗಣೆ ಜಾಲಕ್ಕೆ ಸಂಬಂಧಪಟ್ಟ ಪ್ರಕರಣದಲ್ಲಿ ಪಂಜಾಬ್ ಮಾಜಿ ಸಚಿವ ಹಾಗೂ ಶಿರೋಮಣಿ ಅಕಾಲಿದಳದ ಪ್ರಮುಖ ನಾಯಕ ಸ್ವರಣ್ ಸಿಂಗ್ ಫಿಲ್ಲೌರ್ ಹೆಸರು ಕೇಳಿ ಬಂದಿದೆ.

ಜಾರಿ ನಿರ್ದೇಶನಾಲಯ 6,000 ಕೋಟಿ ರೂಪಾಯಿ ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸದಂತೆ ಜಾರ್ಜ್ ಶೀಟ್ ಸಲ್ಲಿಸಿದ್ದು ಅದರಲ್ಲಿ ಸ್ವರಣ್ ಸಿಂಗ್ ಹಾಗೂ ಅವರ ಪುತ್ರ ಻ವಿನಾಶ್ ಚಂದರ್ ರನ್ನೂ ಆರೋಪಿಯನ್ನಾಗಿ ಹೆಸರಿಸಿದೆ.
2013ರಲ್ಲಿ ಈ ಪ್ರಕರಣವನ್ನು ಫತೇಘರ್ ಪೊಲೀಸರು ಬಯಲಿಗೆಳೆದಿದ್ದರು. ಈ ವೇಳೆ ಈ ಪ್ರಕರಣದ ಕಿಂಗ್ ಪಿನ್ ಅರ್ಜುನ ಪ್ರಶಸ್ತಿ ವಿಜೇತ ಕುಸ್ತಿ ಪಟು ಮತ್ತು ಮಾಜಿ ಪೊಲೀಸ್ ಅಧಿಕಾರಿ ಜಗದೀಶ್ ಭೋಲಾ ಎಂದು ಗೊತ್ತಾಗಿತ್ತು.

ED names SAD leader in Rs 6,000 crore drug case case

ವಿಚಾರಣೆ ವೇಳೆ 300 ಕೆಜಿ ಮೆಥಾಫೆಟಮೈನ್ ಮಾದಕ ವಸ್ತವನ್ನು ರೇವ್ ಪಾರ್ಟಿಗಳಿಗೆ ಪೂರೈಸಿದ್ದು ಬಹಿರಂಗವಾಗಿತ್ತು.

8,400 ಪುಟಗಳ ಜಾರ್ಜ್ ಶೀಟ್ ನಲ್ಲಿ ಮಾಜಿ ಸಂಪುಟ ಕಾರ್ಯದರ್ಶಿ ಅವಿನಾಶ್ ಚಂದರ್ 45 ಲಕ್ಷ ಲಂಚ ನೀಡಿದ್ದಾಗಿಯೂ ಉಲ್ಲೇಖವಾಗಿದೆ.

English summary
The Enforcement Directorate on Wednesday filed a chargesheet in the Rs 6,000 crore drug smuggling case. The ED has named prominent Shiromani Akali Dal leader and former minister Swaran SIngh Phillaur and his son Avinash Chander.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X