ಒಡಿಶಾದ ದುರ್ಗ್-ಪುರಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ: ಪ್ರಯಾಣಿಕರಲ್ಲಿ ಭೀತಿ
ಒಡಿಶಾದ ನೌಪಾದಾ ಜಿಲ್ಲೆಯ ದುರ್ಗ್ ಪುರಿ ಎಕ್ಸ್‌ಪ್ರೆಸ್‌ನ ಬೋಗಿಯೊಳಗೆ ಗುರುವಾರ ಸಣ್ಣ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಭಯಭೀತರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಅದೇ ದಿನ ಬಿಡುಗಡೆಯಾದ ECoR ಹೇಳಿಕೆಯಲ್ಲಿ "ಬ್ರೇಕ್ ಪ್ಯಾಡ್‌ಗಳಿಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯು ಬ್ರೇಕ್ ಪ್ಯಾಡ್‌ಗಳಿಗೆ ಸೀಮಿತವಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ" ಎಂದು ಅದು ಹೇಳಿದೆ.

ಗುರುವಾರ ಸಂಜೆ ಖರಿಯಾರ್ ರಸ್ತೆ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ರೈಲಿನ ಬಿ3 ಕೋಚ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ರೈಲ್ವೆ ಅಧಿಕಾರಿಗಳು ಒಂದು ಗಂಟೆಯೊಳಗೆ ಸಮಸ್ಯೆಯನ್ನು ಸರಿಪಡಿಸಿದರು ಮತ್ತು ರೈಲು ರಾತ್ರಿ 11 ಗಂಟೆಗೆ ನಿಲ್ದಾಣದಿಂದ ಹೊರಟಿತು ಎಂದು ಅದು ಹೇಳಿದೆ.
ಹೊಗೆ ಪತ್ತೆಯಾದಾಗ ಅನೇಕ ಪ್ರಯಾಣಿಕರು ರೈಲಿನಿಂದ ಹೊರಬಂದರು, ಇತರರು ಭಯಭೀತರಾದರು. ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ಅತ್ಯಂತ ಭೀಕರ ರೈಲು ದುರಂತಕ್ಕೆ ದೇಶವು ಸಾಕ್ಷಿಯಾದ ಕೆಲವು ದಿನಗಳ ನಂತರ ಈ ಘಟನೆಯು ನಡೆದಿದೆ.
ಒಡಿಶಾ ರೈಲು ದುರಂತ:
ಒಡಿಶಾ ರೈಲು ದುರಂತ 288 ಜನರನ್ನು ಬಲಿ ತೆಗೆದುಕೊಂಡಿದೆ. 1,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಅಪಘಾತದಲ್ಲಿ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ.
ಒರಿಸ್ಸಾದಲ್ಲಿ ನಡೆದಿರುವ ರೈಲು ದುರಂತದಲ್ಲಿ ಮೃತಪಟ್ಟಿರುವ 288 ದುರ್ದೈವಿಗಳಲ್ಲಿ 150 ಮಂದಿಯ ಗುರುತು ಇನ್ನೂ ಸಿಕ್ಕಿಲ್ಲ. ಇದು ಒರಿಸ್ಸಾ ಸರ್ಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಮೃತರ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸುವ ಕೆಲಸವನ್ನು ತ್ವರಿತವಾಗಿ ಮಾಡಲಾಗುತ್ತಿದೆ. ಆದರೆ, ಶವಾಗೃಹಗಳಲ್ಲಿ ಇನ್ನೂ 150 ಶವಗಳಿದ್ದು ಅವರ ಸಂಬಂಧಿಕರನ್ನು ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಬಾಲಾಸೋರ್ ಘಟನೆಯಲ್ಲಿ ಮೃತಪಟ್ಟವರ ಶವಗಳನ್ನು ಸುಮಾರು 55 ಆ್ಯಂಬುಲೆನ್ಸ್ ಗಳಲ್ಲಿ ಈಗಾಗಲೇ ಭುವನೇಶ್ವರದಲ್ಲಿರುವ ಏಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ತಂದಿರಿಸಲಾಗಿದೆ. ಮೃತಪಟ್ಟವರ ಸಂಬಂಧಿಕರು ಬಂದು ಈ ಶವಗಳನ್ನು ನೋಡುತ್ತಿದ್ದಾರೆ. ಆದರೆ, ಅವರಿಗೆ ಗುರುತು ಹಿಡಿಯಲು ಆಗುತ್ತಿಲ್ಲ.
ಅಪಘಾತದ ಭೀಕರತೆಯಿಂದಾಗಿ ಅನೇಕ ಶವಗಳು ಗುರುತು ಸಿಗಲಾರದಷ್ಟು ನಜ್ಜುಗೊಜ್ಜಾಗಿವೆ. ಇದರಿಂದಾಗಿ, ಕೆಲವು ಸಂಬಂಧಿಕರಿಗೆ ಶವಗಳನ್ನು ಗುರುತು ಹಿಡಿಯುವಲ್ಲಿ ಭಾರೀ ಗೊಂದಲವಾಗುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶವಗಳು ಗುರುತು ಹಿಡಿಯದ ಪರಿಸ್ಥಿತಿಯಲ್ಲಿರುವುದರಿಂದ ಕೆಲವರು ತಮ್ಮ ಸಂಬಂಧಿಕರ ಶವಗಳನ್ನೇ ಗುರುತಿಸದಿರುವಂಥ ಪರಿಸ್ಥಿತಿಯೂ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಇದೆಲ್ಲಾ ಒಂದು ಕಡೆಯದ್ದಾದರೆ, ಈ ಶವಗಳನ್ನು ಕಾಪಾಡುವ ಹೊಣೆ ಹೊತ್ತಿರುವ ಭುವನೇಶ್ವರ ಏಮ್ಸ್ ವೈದ್ಯರ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಹೊಸ ತಲೆನೋವು ಶುರುವಾಗಿದೆ. ಅಷ್ಟು ಪ್ರಮಾಣ ಶವಗಳನ್ನು ಅವುಗಳ ಸಂಬಂಧಿಕರು ಸಿಗುವವವರೆಗೆ ಕಾಪಾಡುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಈ ಕುರಿತಂತೆ ತಮ್ಮ ಮುಂದಿರುವ ಸವಾಲುಗಳ ಬಗ್ಗೆ ಅಲ್ಲಿನ ವೈದ್ಯರಾದ ಡಾ. ಪ್ರಭಾಸ್ ರಂಜನ್ ತ್ರಿಪಾಠಿ ವಿವರಿಸಿದ್ದಾರೆ.












Click it and Unblock the Notifications