ತಾಯಿಯ ಮೆದುಳನ್ನೇ ಫ್ರೈ ಮಾಡಿ ತಿಂದ ಕ್ರೂರ ಮಗ

ರಾಯ್ಪುರ, ಆಗಸ್ಟ್ 29: ತಂದೆ ತಾಯಿಯರನ್ನು ನೋಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವೃದ್ಧಾಶ್ರಮಕ್ಕೆ ಅಟ್ಟುವ ಮಕ್ಕಳಿದ್ದಾರೆ, ಆದರೆ ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನೇ ಕೊಂದು ಬೇಯಿಸಿ ತಿನ್ನಲು ಹೊರಟ ಕ್ರೂರ ಘಟನೆ ನಡೆದಿದೆ.

ಮಗನಿಗೆ ವಿಪರೀತ ಕುಡಿಯುವ ಚಟ, ದಿನನಿತ್ಯ ತಾಯಿಗೆ ಹಣ ಕೊಡುವಂತೆ ಆತ ಪೀಡಿಡುತ್ತಿದ್ದ ಆದರೆ ಹಣ ನೀಡಲು ಒಪ್ಪದ ಕಾರಣ ತಾಯಿಯನ್ನು ಕೊಲೆ ಮಾಡಿರುವ ಘಟನೆ ಛತ್ತೀಸ್‍ಗಢದ ಖಾರ್ಸಿ ಜಿಲ್ಲೆಯಲ್ಲಿ ನಡೆದಿದೆ.

ಸೀತಾರಾಮ್ ಒರಾನ್ ತಾಯಿಯನ್ನು ಕೊಂದ ಮಗ. ಸೀತಾರಾಮ್ ತನ್ನ ತಾಯಿ ಫುಲೋಬಾಯಿ ಜೊತೆ ವಾಸಿಸುತ್ತಿದ್ದನು. ಅಲ್ಲದೆ ಕುಡಿತದ ಚಟಕ್ಕೆ ಬಲಿಯಾಗಿದ್ದನು. ಸೀತಾರಾಮ್ ಹರಿತವಾದ ವಸ್ತುವಿನಿಂದ ತನ್ನ ತಾಯಿಗೆ ಹೊಡೆದಿದ್ದಾನೆ. ನಂತರ ಆಕೆಯ ತಲೆ ಬುರುಡೆಯನ್ನು ತೆರೆದು ಮೆದುಳನ್ನು ಫ್ರೈ ಮಾಡಲು ಹಾಕಿದ್ದಾನೆ.

Drunkard Hacks Mom To Death Caught Frying Her Body

ಆದರೆ ಸೀತಾರಾಮ್ ಆ ಮೆದುಳನ್ನು ತಿನ್ನುವ ಮೊದಲು ಅವರ ಕಿರಿಯ ಸಹೋದರನ ಪತ್ನಿ ಸ್ಥಳಕ್ಕೆ ಬಂದಿದ್ದಾರೆ. ಸಹೋದರನ ಪತ್ನಿಯನ್ನು ನೋಡುತ್ತಿದ್ದಂತೆ ಸೀತಾರಾಮ್ ಸ್ಥಳದಿಂದ ಪರಾರಿ ಆಗಿದ್ದಾನೆ.

ಈ ವೇಳೆ ಸೀತಾರಾಮ್ ರಕ್ತ ಆಗಿರುವ ಬಟ್ಟೆಯಲ್ಲೇ ಯಾವುದೋ ಪ್ರದೇಶದಲ್ಲಿ ಅಡಗಿಕೊಂಡಿದ್ದನು. ಬಳಿಕ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಸೀತಾರಾಮ್ ಕೃತ್ಯ ನೋಡಿದ ಮಹಿಳೆ ತನ್ನ ಪತಿಗೆ ಅತ್ತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಹುಡುಕಾಡಲು ಶುರು ಮಾಡಿದ್ದಾರೆ.

ಸದ್ಯ ಪೊಲೀಸರು ಸೀತಾರಾಮ್ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸೀತಾರಾಮ್ ಕಿರಿಯ ಸಹೋದರ ಆತನನ್ನು ಮದ್ಯ ಸೇವಿಸಬೇಡ ಎಂದು ಹಲವು ಬಾರಿ ಹೇಳಿದ್ದಾರೆ. ಆದರೆ ಈ ವಿಷಯಕ್ಕಾಗಿ ಸೀತಾರಾಮ್ ತನ್ನ ಸಹೋದರನ ಬಳಿ ಜಗಳವಾಡುತ್ತಿದ್ದನು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+