ಜಮ್ಮು, ಸಾಂಬಾ, ಪಠಾಣ್‌ಕೋಟ್‌ ಮೇಲೆ ಪಾಕಿಸ್ತಾನದಿಂದ ಮತ್ತೆ ಡ್ರೋನ್ ದಾಳಿ

ಪಾಕಿಸ್ತಾನ ಮತ್ತೊಮ್ಮೆ ತನ್ನ ನರಿಬುದ್ದಿ ತೋರಿಸಿದೆ. ಗುರುವಾರ ಭಾರತದ ಗಡಿಯಾದ್ಯಂತ ಕ್ಷಿಪಣಿ, ಡ್ರೋನ್ ದಾಳಿ ಮಾಡುವ ಪಾಕಿಸ್ತಾನದ ಪ್ರಯತ್ನವನ್ನು ಭಾರತ ವಿಫಲಗೊಳಿಸಿತ್ತು. ಶುಕ್ರವಾರ ಕೂಡ ಪಾಕಿಸ್ತಾನ ಮತ್ತೊಮ್ಮೆ ದಾಳಿಗೆ ಪ್ರಯತ್ನಿಸಿದೆ. ಜಮ್ಮು ನಗರದಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದ್ದು ಎಚ್ಚರಿಕೆಯ ಸೈರನ್ ಮೊಳಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ಆಪರೇಷನ್ ಸಿಂಧೂರದ ಭಾಗವಾಗಿ ದೇಶದಲ್ಲಿನ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಿದ ನಂತರ ಪಾಕಿಸ್ತಾನವು ಶೆಲ್ ದಾಳಿ ನಡೆಸುತ್ತಿರುವ ನಡುವೆಯೇ ಈ ಸ್ಫೋಟ ಸಂಭವಿಸಿವೆ. "ನಾನು ಇರುವ ಸ್ಥಳದಿಂದ ಸ್ಫೋಟದ ಶಬ್ದಗಳು, ಬಹುಶಃ ಭಾರೀ ಫಿರಂಗಿ ಶಬ್ದಗಳು ಈಗ ಕೇಳಿಬರುತ್ತಿವೆ" ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

Drones intercepted in jammu samba and pathankot

ಜಮ್ಮು ನಗರ ಕತ್ತಲೆಯಲ್ಲಿರುವ ಚಿತ್ರವನ್ನು ಸಹ ಅವರು ಪೋಸ್ಟ್ ಮಾಡಿದ್ದಾರೆ, ಜಮ್ಮುವಿನಲ್ಲಿ ಈಗ ಬ್ಲ್ಯಾಕೌಟ್. ನಗರದಾದ್ಯಂತ ಸೈರನ್‌ಗಳು ಕೇಳಿಬರುತ್ತಿವೆ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. "ಜಮ್ಮುವಿನಲ್ಲಿ ಮತ್ತು ಸುತ್ತಮುತ್ತಲಿನ ಎಲ್ಲರಿಗೂ ನನ್ನ ಪ್ರಾಮಾಣಿಕ ಮನವಿ, ದಯವಿಟ್ಟು ಬೀದಿಗೆ ಬರಬೇಡಿ, ಮನೆಯಲ್ಲಿಯೇ ಇರಿ ಅಥವಾ ಮುಂದಿನ ಕೆಲವು ಗಂಟೆಗಳ ಕಾಲ ನೀವು ಆರಾಮವಾಗಿ ಇರಬಹುದಾದ ಹತ್ತಿರದ ಸ್ಥಳದಲ್ಲಿ ಇರಿ. ವದಂತಿಗಳನ್ನು ನಿರ್ಲಕ್ಷಿಸಿ, ಆಧಾರರಹಿತ ಅಥವಾ ಪರಿಶೀಲಿಸದ ಸುದ್ದಿಗಳನ್ನು ಹರಡಬೇಡಿ ಮತ್ತು ನಾವು ಇದನ್ನು ಒಟ್ಟಾಗಿ ಎದುರಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಹಲವು ಕಡೆಗಳಲ್ಲಿ ಡ್ರೋನ್ ದಾಳಿ ಪ್ರಯತ್ನ

ಜಮ್ಮು, ಸಾಂಬಾ (ಜಮ್ಮು ಮತ್ತು ಕಾಶ್ಮೀರ), ಪಠಾಣ್‌ಕೋಟ್ ಮತ್ತು ಫಿರೋಜ್‌ಪುರ (ಪಂಜಾಬ್‌) ಮತ್ತು ಜೈಸಲ್ಮೇರ್ (ರಾಜಸ್ಥಾನದಲ್ಲಿ)ಗಳಲ್ಲಿ ಡ್ರೋನ್‌ಗಳು ಕಾಣಿಸಿಕೊಂಡಿವೆ. ಬಾರ್ಮರ್ ಮತ್ತು ಪೋಖ್ರಾನ್ ಸೇರಿದಂತೆ ಈ ಪ್ರದೇಶಗಳಲ್ಲಿ ಹಲವು ಬಾರಿ ಸ್ಫೋಟದ ಶಬ್ದ ಕೇಳಿಬಂದಿದೆ.

ಗಡಿಯಾದ್ಯಂತ 36 ಸ್ಥಳಗಳಲ್ಲಿ ಸುಮಾರು 300 ರಿಂದ 400 ಡ್ರೋನ್‌ಗಳನ್ನು ನಿಯೋಜಿಸಲಾಗಿದ್ದು, ಭಾರತೀಯ ಪಡೆಗಳು ಈಗಾಗಲೇ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಿವೆ. ಆರಂಭಿಕ ತನಿಖೆಗಳ ಪ್ರಕಾರ ಪಾಕಿಸ್ತಾನ ದಾಳಿ ಮಾಡಲು ಬಳಸಿದ ಡ್ರೋನ್‌ಗಳು ಟರ್ಕಿಶ್ ನಿರ್ಮಿತ ಆಸಿಸ್‌ಗಾರ್ಡ್ ಸೊಂಗಾರ್ ಮಾದರಿಗಳಾಗಿದ್ದವು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+