ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್ ಹಾರಾಟ, ಪೊಲೀಸರಿಂದ ತನಿಖೆ!
ನವದೆಹಲಿ, ಜುಲೈ 03; ಭಾರತದ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ನಿವಾಸದ ಮೇಲೆ ಡ್ರೋನ್ ಹಾರಾಟ ನಡೆಸಿದೆ. ಸೋಮವಾರ ಮುಂಜಾನೆ ಈ ಘಟನೆ ನಡೆದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸೋಮವಾರ ಮುಂಜಾನೆ 5.30ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ನಿವಾಸದ ಮೇಲೆ ಡ್ರೋನ್ ಹಾರಾಟ ನಡೆಸಿದೆ. ಭದ್ರತಾ ದೃಷ್ಟಿಯಿಂದ ಮೋದಿ ನಿವಾಸ ನೋ ಫ್ಲೈಯಿಂಗ್ ಝೋನ್ ವ್ಯಾಪ್ತಿಗೆ ಒಳಪಡಲಿದೆ. ಆದರೂ ಸಹ ಅಲ್ಲಿ ಡ್ರೋನ್ ಹಾರಾಟ ನಡೆಸಿರುವ ಪ್ರಕರಣ ನಡೆದಿದೆ.

ನರೇಂದ್ರ ಮೋದಿ ಭದ್ರತಾ ಉಸ್ತುವಾರಿ ನೋಡಿಕೊಳ್ಳುವ ಎಸ್‌ಪಿಜಿ ಈ ಕುರಿತು ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. ದೆಹಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಆರಂಭಿಸಿದ್ದಾರೆ.
ದೆಹಲಿ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, 'ಹಾರಾಟ ನಿಷೇಧ ವಲಯವಾದ ಪ್ರಧಾನಿ ನಿವಾಸ ಮೇಲೆ ಡ್ರೋನ್ ಹಾರಾಟ ನಡೆಸಿದ ಮಾಹಿತಿ ಸಿಕ್ಕಿದೆ. ಎಸ್‌ಪಿಜಿ ಈ ಕುರಿತು ದೆಹಲಿ ಪೊಲೀಸರನ್ನು ಮುಂಜಾನೆ 5.30ಕ್ಕೆ ಸಂಪರ್ಕಿಸಿದೆ. ತನಿಖೆ ನಡೆಯುತ್ತಿದೆ' ಎಂದು ಹೇಳಿದ್ದಾರೆ.
#UPDATE | Information was received at the NDD control room about an unidentified flying object near PM's residence. Thorough searches were made in nearby areas but no such object was detected. The air traffic control room (ATC) was also contacted, they also didn't detect any such…
— ANI (@ANI) July 3, 2023
ಪೊಲೀಸರಿಂದ ಹುಡುಕಾಟ; ನರೇಂದ್ರ ಮೋದಿ ನಿವಾಸದ ಮೇಲೆ ಹಾರಾಟ ನಡೆಸಿದ ಡ್ರೋನ್‌ಗಾಗಿ ದೆಹಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಸಹ ಯಾವುದೇ ಡ್ರೋನ್ ಪತ್ತೆಯಾಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ಭದ್ರತೆಯನ್ನು Special Protection Group (SPG) ನೋಡಿಕೊಳ್ಳುತ್ತದೆ. ಆದರೆ ಅವರು ದೆಹಲಿಯಲ್ಲಿನ ನಿವಾಸದಲ್ಲಿ ಇರುವಾಗ ದೆಹಲಿ ಪೊಲೀಸರು ಮತ್ತು ಎಸ್‌ಪಿಜಿ ಗ್ರೂಪ್ ಸೇರಿ ವಿವಿಧ ಹಂತಗಳಲ್ಲಿ ಭದ್ರತೆಯನ್ನು ನೀಡಲಾಗುತ್ತದೆ. ದೆಹಲಿ ಪೊಲೀಸರು ಸಹ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತಾರೆ.
ಭದ್ರತಾ ದೃಷ್ಟಿಯಿಂದ ಮೋದಿ ನಿವಾಸ, ಪ್ರಧಾನಿ ಮೋದಿ ಸಾಗುವ ಮಾರ್ಗ, ಪ್ರಧಾನಿ ಕಾರ್ಯಕ್ರಮಗಳು ನಡೆಯುವ ಪ್ರದೇಶಗಳು ನೋ ಫ್ಲೈಯಿಂಗ್ ಝೋನ್ ವ್ಯಾಪ್ತಿಗೆ ಒಳಪಡುತ್ತವೆ. ಈ ಸ್ಥಳಗಳಲ್ಲಿ ಡ್ರೋನ್, ವಿಮಾನ, ಹೆಲಿಕಾಪ್ಟರ್ ಹಾರಾಟ ನಡೆಸುವಂತಿಲ್ಲ. ಆದರೆ ಮೋದಿ ಸರ್ಕಾರಿ ನಿವಾಸದ ಮೇಲೆ ಡ್ರೋನ್ ಹಾರಿದ್ದು, ಕುತೂಹಲ, ಅಚ್ಚರಿಗೆ ಕಾರಣವಾಗಿದೆ.











Click it and Unblock the Notifications