ಶ್ರೀನಗರ ಶಾಲೆಯಲ್ಲಿ 'ಡ್ರೆಸ್ ಕೋಡ್' ವಿವಾದ: ಭಯೋತ್ಪಾದಕರ ಬೆದರಿಕೆ ಬಳಿಕ ಕ್ಷಮೆಯಾಚಿಸಿದ ಪ್ರಾಂಶುಪಾಲರು
ಶ್ರೀನಗರ, ಜೂನ್. 09: ಶಾಲೆಯಲ್ಲಿ ಡ್ರೆಸ್ ಕೋಡ್ ಹೇರಲಾಗುತ್ತಿದೆ ಎಂಬ ಆರೋಪದ ಮೇಲೆ ಭಯೋತ್ಪಾದಕ ಗುಂಪು ಬೆದರಿಕೆ ಹಾಕಿದ್ದ ಶ್ರೀನಗರದ ಶಾಲೆಯ ಪ್ರಾಂಶುಪಾಲರೊಬ್ಬರು ಕ್ಷಮೆಯಾಚಿಸಿದ್ದಾರೆ. ವಿಶ್ವ ಭಾರತಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರು ಕೆಲವು ವಿದ್ಯಾರ್ಥಿನಿಯರಿಗೆ ಶಾಲೆಯೊಳಗೆ (ಅಬಯಾ) ಉದ್ದನೆಯ ನಿಲುವಂಗಿಯನ್ನು ಧರಿಸದಂತೆ ಹೇಳಿದ್ದರು ಎನ್ನಲಾಗಿದೆ.
ಆದರೂ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸಲು ಪ್ರೋತ್ಸಾಹಿಸಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳು ಡ್ರೆಸ್ ಕೋಡ್ ಸ್ವೀಕರಿಸಲು ನಿರಾಕರಿಸಿ ಗುರುವಾರ ಪ್ರತಿಭಟನೆ ನಡೆಸಿದದ್ದರು. ಪ್ರಾಂಶುಪಾಲರು ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಬಯಾ ಧರಿಸಲು ಬಯಸಿದರೆ ಮದರಸಾ (ಇಸ್ಲಾಮಿಕ್ ಸೆಮಿನರಿ)ಗೆ ಸೇರಬೇಕೆಂದು ಪ್ರಿನ್ಸಿಪಾಲ್ ಹೇಳಿದ್ದರು ಎಂದು ಹುಡುಗಿಯರು ಆರೋಪಿಸಿದ್ದಾರೆ. ಆದರೆ ಪ್ರಾಂಶುಪಾಲರು ಆರೋಪವನ್ನು ನಿರಾಕರಿಸಿದ್ದಾರೆ.

ಗುರುವಾರ ಬೆಳಗ್ಗೆ ಶ್ರೀನಗರದ ರೈನಾವಾರಿಯಲ್ಲಿರುವ ವಿಷು ಭಾರತಿ (ವಿಬಿ) ಶಾಲೆಯ ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದರಿಂದ ಶಾಲೆಯ ಆವರಣಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಸಂಸ್ಥೆಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. "ನಾವು ಅಬಯಾ ಧರಿಸಲು ಬಯಸಿದರೆ ನಾವು ಮದರಸಾಕ್ಕೆ ಹೋಗಬೇಕು ಎಂದು ನಮಗೆ ಹೇಳಲಾಗುತ್ತಿದೆ. ಶಾಲೆಯ ವಾತಾವರಣ ಹಾಳು ಮಾಡುತ್ತಿದ್ದೇವೆ ಎಂದು ಶಾಲಾ ಆಡಳಿತ ಮಂಡಳಿ ಆರೋಪಿಸುತ್ತಿದೆ" ಎಂದು ಪ್ರತಿಭಟನಾನಿರತ ವಿದ್ಯಾರ್ಥಿಯೊಬ್ಬರು ಹೇಳಿದ್ದರು.
ಶಾಲೆಯ ಆಡಳಿತವು ಮಾಧ್ಯಮಗಳಿಗೆ ಅವರು ಹಿಜಾಬ್‌ಗೆ ವಿರುದ್ಧವಾಗಿಲ್ಲ ಆದರೆ ವಿದ್ಯಾರ್ಥಿಗಳು ಡ್ರೆಸ್ ಕೋಡ್ ಅನ್ನು ಅನುಸರಿಸಬೇಕೆಂದು ಹೇಳಿದ್ದರು. ಪ್ರತಿಭಟನೆಯ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾದ ನಂತರ, ಮಾಧ್ಯಮಗಳಲ್ಲಿಯೂ ಇದು ಸುದ್ದಿಯಾಯಿತು. ರಾಜಕೀಯ ಮುಖಂಡರು ಶಾಲಾ ಅಧಿಕಾರಿಗಳನ್ನು ಟೀಕಿಸಿದರು ಮತ್ತು ಅಬಯಾ ಸಮಸ್ಯೆಯನ್ನು ಕರ್ನಾಟಕದಲ್ಲಿ ಹಿಜಾಬ್ ನಿಷೇಧದೊಂದಿಗೆ ಹೋಲಿಕೆ ಮಾಡಲಾರಂಭಿಸಿದರು.

ಇದು ಮತ್ತಷ್ಟು ವಿವಾದಕ್ಕೆ ಕಾರಣವಾಯಿತು. ಸ್ವಲ್ಪ ಸಮಯದ ನಂತರ, ಭಯೋತ್ಪಾದಕ ಗುಂಪು ಪ್ರಾಂಶುಪಾಲರನ್ನು ಗುರಿಯಾಗಿಸಿಕೊಂಡು ಬೆದರಿಕೆಯ ಹೇಳಿಕೆಯನ್ನು ನೀಡಿತು. ಅವರು ಬಲಪಂಥೀಯ ಅನುಯಾಯಿ ಎಂದು ಆರೋಪಿಸಿತು. ಇದರಿಂದ ಸಂಜೆ ವೇಳೆಗೆ ಪ್ರಾಂಶುಪಾಲರು ಹೇಳಿಕೆ ನೀಡಿ, ವಿದ್ಯಾರ್ಥಿಗಳು ಹಾಗೂ ಪೋಷಕರ ಭಾವನೆಗೆ ಧಕ್ಕೆ ತಂದಿದ್ದಕ್ಕಾಗಿ ಕ್ಷಮೆಯಾಚಿಸಿದರು.
"ಇಂದಿನ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ನನ್ನ ಹೇಳಿಕೆಯನ್ನು ತಪ್ಪಾಗಿ ಹೇಳಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಅಥವಾ ಪೋಷಕರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಅದಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ. ವಿದ್ಯಾರ್ಥಿಗಳು ಅಬಯಾ ಧರಿಸಬಹುದು ಮತ್ತು ತರಗತಿಗಳಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ" ಎಂದು ಪ್ರಾಂಶುಪಾಲರು ಹೇಳಿದ್ದಾರೆ.












Click it and Unblock the Notifications