ಅತ್ಯಾಧುನಿಕ ಅಗ್ನಿ ಪ್ರೈಮ್ ಕ್ಷಿಪಣಿ ಯಶಸ್ವಿ ಪ್ರಯೋಗ ಯಶಸ್ವಿ
ಭುವನೇಶ್ವರ, ಜೂನ್ 28; ಒಡಿಶಾ ಕರಾವಳಿಯ ಸೇನಾ ನೆಲೆಯಿಂದ 'ಅಗ್ನಿ ಪ್ರೈಮ್' ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಯಿತು. ಪ್ರಯೋಗ ಯಶಸ್ವಿಯಾಗಿದೆ ಎಂದು ಡಿಆರ್‌ಡಿಓ ಹೇಳಿದೆ.
ಸೋಮವಾರ ಬಾಲಸೊರ್ ಕರಾವಳಿಯ ಸೇನಾ ನೆಲೆಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಿಂದ ಬೆಳಗ್ಗೆ 10.55ಕ್ಕೆ ಉಡಾವಣೆ ಮಾಡಲಾಯಿತು. ಅತ್ಯಾಧುನಿಕ ರೂಪಾಂತರಿ ಕ್ಷಿಪಣಿ 'ಅಗ್ನಿ ಪ್ರೈಮ್' ಪ್ರಯೋಗ ಯಶಸ್ವಿಯಾಗಿ ನಡೆದಿದೆ.
'ಅಗ್ನಿ ಪ್ರೈಮ್' ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಕ್ಷಿಪಣಿಯಾಗಿದೆ. 2 ಸಾವಿರ ಕಿ. ಮೀ. ದೂರ ಕ್ರಮಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಡಿಆರ್‌ಡಿಓ ಈ ಕ್ಷಿಪಣಿಯನ್ನು ಅಭಿವೃದ್ಧಿಗೊಳಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಅಣ್ವಸ್ತ್ರ ಹೊತ್ತೊಯ್ಯುವಂತಹ ಸಾಮರ್ಥ್ಯವನ್ನು ಹೊಂದಿದೆ. ಯೋಜನೆಯ ಪ್ರಕಾರವೇ ಕ್ಷಿಪಣಿ ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ಡಿಆರ್‌ಡಿಓ ಹೇಳಿದೆ.
'ಅಗ್ನಿ ಪ್ರೈಮ್' ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, ಮೊಬೈಲ್ ಲಾಂಚರ್ ಮೂಲಕವೂ ಉಡಾವಣೆ ಮಾಡಬಹುದಾಗಿದೆ. ಪೂರ್ವ ಕರಾವಳಿಯ ಟೆಲಿಮೆಟ್ರಿ ಮತ್ತು ರಡಾರ್ ಕೇಂದ್ರಗಳು ಕ್ಷಿಪಣಿಯನ್ನು ಪತ್ತೆ ಹಚ್ಚಿ ಮೇಲ್ವಿಚಾರಣೆ ಮಾಡಿವೆ.
India successfully test-fired the Agni-Prime missile today, off the coast of Odisha.
— ANI (@ANI) June 28, 2021
It can hit targets up to a range of 2000 kms, & is very short & light in comparison with other missiles in this class. A lot of new technologies incorporated in the new missile: DRDO officials pic.twitter.com/zq7ffypqFM
ಭೂಮಿಯಿಂದ ಭೂಮಿಗೆ ಹಾರಾಟ ಮಾಡುವ ಈ ಕ್ಷಿಪಣಿ 1000 ಕೆ. ಜಿ. ಪೆಲೋಡ್ ಅಥವ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಅಗ್ನಿ-1 ಕ್ಷಿಪಣಿಗಿಂತ ತುಂಬಾ ಹಗುರವಾಗಿದೆ.












Click it and Unblock the Notifications