ಭಾರತದಲ್ಲಿ ಕೊರೊನಾಗೆ 2ಡಿಜಿ ಪುಡಿ ಔಷಧಿ ಸಿಗುವುದು ಯಾವಾಗ?

ನವದೆಹಲಿ, ಮೇ 20: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ ಔಷಧಿ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಔಷಧಿಯು ಜೂನ್ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಕೊರೊನಾವೈರಸ್ ಸೋಂಕಿನ ಎರಡನೇ ಅಲೆಯಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಸೋಂಕಿತರು ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಉಸಿರಾಟ ಸಮಸ್ಯೆ ಎದುರಿಸುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಜೀವಕೋಶ ಪ್ರವೇಶಿಸುವ 2ಡಿಜಿ ಔಷಧಿಯು ರೋಗಾಣುವಿನ ಹರಡುವಿಕೆ ಪ್ರಮಾಣವನ್ನು ತಗ್ಗಿಸುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವಂತೆ ನೋಡಿಕೊಳ್ಳುವ ಶಕ್ತಿ ಈ ಔಷಧಿಗಿದೆ ಎಂದು ಸಂಸ್ಥೆ ಹೇಳಿದೆ.

2ಡಿಜಿ ಔಷಧಿ ಸಹಾಯದಿಂದ ಕೊವಿಡ್-19 ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವೈದ್ಯಕೀಯ ಪ್ರಯೋಗದ ಸಂದರ್ಭದಲ್ಲಿ ಈ ಔಷಧಿಯ ಅಣು ರೋಗಿಗಳು ಕಡಿಮೆ ಅವಧಿಯಲ್ಲಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಇದರ ಜೊತೆಗೆ ವೈದ್ಯಕೀಯ ಆಮ್ಲಜನಕದ ಮೇಲಿನ ಹೆಚ್ಚಿನ ಅವಲಂಬನೆ ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

2ಡಿಜಿ ಔಷಧಿಗೆ ಮೇ 15ರಂದು ಅನುಮೋದನೆ

2ಡಿಜಿ ಔಷಧಿಗೆ ಮೇ 15ರಂದು ಅನುಮೋದನೆ

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಹೈದ್ರಾಬಾದಿನ ರೆಡ್ಡೀಸ್ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಕೊರೊನಾವೈರಸ್ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಔಷಧಿಗೆ ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಮೇ 15ರಂದು ಅನುಮೋದನೆ ನೀಡಿತ್ತು. ಇದರ ಹೊರತಾಗಿ ದೇಶದಲ್ಲಿ ಪ್ರಸ್ತುತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ವಿತರಿಸಲು ಏಪ್ರಿಲ್ 12ರಂದು ಅನುಮೋದನೆ ನೀಡಲಾಗಿದೆ.

ಭಾರತದ ಮಾರುಕಟ್ಟೆಗೆ 2ಡಿಜಿ ಔಷಧಿ ಬರುವುದು ಯಾವಾಗ?

ಭಾರತದ ಮಾರುಕಟ್ಟೆಗೆ 2ಡಿಜಿ ಔಷಧಿ ಬರುವುದು ಯಾವಾಗ?

ಭಾರತದ ಮಾರುಕಟ್ಟೆಗಳಿಗೆ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಔಷಧಿಯು ಯಾವಾಗ ಲಗ್ಗೆ ಇಡಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೂನ್ ತಿಂಗಳ ಮಧ್ಯಭಾಗದಲ್ಲಿ ಔಷಧಿ ಸರಬರಾಜು ಮಾಡಲಾಗುವುದು ಎಂದು ಹೈದ್ರಾಬಾದ್ ಮೂಲದ ಡಾ. ರೆಡ್ಡೀಸ್ ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯಕ್ಕೆ 2 ಡಿಯಾಕ್ಸಿ-ಡಿ-ಗ್ಲುಕೋಸ್(2ಡಿಜಿ) ಔಷಧಿಯು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. 2 ಡಿಜಿ ಹೆಸರಿನಲ್ಲಿ ಔಷಧಿಯನ್ನು ಮಾರಾಟ ಮಾಡುತ್ತಿರುವ ಏಜೆಂಟರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಕಂಪನಿ ಹೇಳಿದೆ.

2ಡಿಜಿ ಔಷಧಿ ಕಾರ್ಯವಿಧಾನ ಹೇಗೆ ಇರುತ್ತೆ?

2ಡಿಜಿ ಔಷಧಿ ಕಾರ್ಯವಿಧಾನ ಹೇಗೆ ಇರುತ್ತೆ?

ಕೊವಿಡ್-19 ವಿರೋಧಿ ಔಷಧಿ ಆಗಿರುವ 2ಡಿಜಿ ಪುಡಿ ರೂಪದಲ್ಲಿ ಇರಲಿದ್ದು, ನೀರಿನಲ್ಲಿ ಬೆರೆಸಿ ಕುಡಿಯುವ ಮೂಲಕ ಸೇವಿಸಬಹುದಾಗಿದೆ. 2ಡಿಜಿ ಔಷಧಿಯು ಕೊರೊನಾವೈರಸ್ ರೋಗಾಣುವನ್ನು ಒಂದು ಕಡೆ ಸಂಗ್ರಹಿಸಿ ದೇಹವನ್ನೆಲ್ಲಾ ಹರಡುವ ಅಪಾಯವನ್ನು ತಪ್ಪಿಸುವುದರ ಜೊತೆಗೆ ವೈರಸ್ ವಿರುದ್ಧ ಹೋರಾಡಲಿದೆ. ಈ ಔಷಧಿಯಿಂದ ರೋಗಿಗಳಲ್ಲಿ ತೀವ್ರ ಉಸಿರಾಟ ಸಮಸ್ಯೆ ನಿಯಂತ್ರಣಕ್ಕೆ ಬರಲಿದ್ದು, ವೈದ್ಯಕೀಯ ಆಮ್ಲಜನಕ ಬಳಕೆ ಪ್ರಮಾಣ ತಗ್ಗಲಿದೆ. ಮನುಷ್ಯನ ದೇಹದಲ್ಲಿ ಶಕ್ತಿ ಉತ್ಪಾದನೆ ಮತ್ತು ಕೊವಿಡ್-19 ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು 2ಡಿಜಿ ಔಷಧಿಯು ವೃದ್ಧಿಯಾಗುವಂತೆ ಮಾಡುತ್ತದೆ. ರೋಗಾಣುಗಳ ಉತ್ಪತ್ತಿ ಮತ್ತು ಬೆಳವಣಿಗೆಯನ್ನು ತಡೆಗಟ್ಟುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. RT-PCR ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದರೂ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಗೆ ವೈದ್ಯರ ಸಲಹೆ ಮೇರೆಗೆ ಈ ಔಷಧಿ ಬಳಸಲು ಅವಕಾಶವಿದೆ.

Recommended Video

    ಒಟ್ಟು ಸೊಂಕೀತರ ಸಂಖ್ಯೆ ಎಷ್ಟು ಗೊತ್ತಾ?
    2ಡಿಜಿ ಔಷಧಿಯ ಬೆಲೆ ಇನ್ನೂ ನಿಗದಿಯಾಗಿಲ್ಲ

    2ಡಿಜಿ ಔಷಧಿಯ ಬೆಲೆ ಇನ್ನೂ ನಿಗದಿಯಾಗಿಲ್ಲ

    ಭಾರತದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಔಷಧಿಯ ಬೆಲೆ ಎಷ್ಟು ಎಂಬುದನ್ನು ಈವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ನ್ಯೂಸ್ 18 ಮೂಲಗಳ ಪ್ರಕಾರ, ರೆಡ್ಡೀಸ್ ಪ್ರಯೋಗಾಲಯ ಹಾಗೂ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಔಷಧಿಗೆ 500-600 ರೂಪಾಯಿ ನಿಗದಿಗೊಳಿಸುವ ಸಾಧ್ಯತೆಯಿದೆ. ಪ್ರಸ್ತುತ ಆಸ್ಪತ್ರೆಗಳ ಅಗತ್ಯತೆಗೆ ತಕ್ಕಂತೆ ನಿಗದಿತ ಪ್ರಮಾಣದಲ್ಲಿ ಔಷಧಿ ಉತ್ಪಾದನೆ ಮಾಡಲಾಗುತ್ತಿದೆ. ಈ ಔಷಧಿ ಉತ್ಪಾದನೆ ರೀತಿ ತುಂಬಾ ಸುಲಭವಾಗಿದ್ದು, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸುಲಭವಾಗಿ ಕೈಗೆಟುಕಲಿದೆ ಎಂದು ಹೇಳಲಾಗುತ್ತಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+