ಕೊರೊನಾ: 'ರೋಗಿಗಳಿಗೆ ಆ್ಯಂಟಿ ಎಚ್ಐವಿ ಔಷಧಿ ಬೇಡ'

ನವದೆಹಲಿ, ಏಪ್ರಿಲ್ 2: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಅತಿ ಗಂಭೀರ ಸ್ಥಿತಿಯಲ್ಲಿರುವವರಿಗೆ ಆ್ಯಂಟಿ ಎಚ್ಐವಿ ಔಷಧಿ ನೀಡಲಾಗುತ್ತಿತ್ತು. ಆದರೆ ಅದನ್ನು ನೀಡದಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

Recommended Video

      ಲಾಕ್ ಡೌನ್ ಆದೇಶದವರೆಗೆ ರಾಜ್ಯದಲ್ಲಿ ಉಚಿತ ಹಾಲು ಪೂರೈಕೆಗೆ BSY ಸೂಚನೆ | Free Milk | KMF | Bangalore

      ಕೇಂದ್ರ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವಾಲಯ ಈ ಕುರಿತಂತೆ ಮಾಹಿತಿ ನೀಡಿದ್ದು, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಈ ಹಿಂದೆ ಶಿಫಾರಸ್ಸು ಮಾಡಲಾಗಿದ್ದ ಆ್ಯಂಟಿ ಎಚ್ಐವಿ ಔಷಧಿಗಳಾದ ಲೋಪಿನವೀರ್-ರಿಟೋನವಿರ್ ಸಂಯೋಜನೆ (combination of Lopinavir-Ritonavir) ಯನ್ನು ನೀಡಲಾಗುತ್ತಿತ್ತು.

      ಆದರೆ ಈ ವರೆಗೂ ಕೊರೋನಾ ವೈರಸ್ ಗೆ ಯಾವುದೇ ನಿರ್ದಿಷ್ಠ ಔಷಧಿ ಪರಿಣಾಮಕಾರಿ ಎಂದು ದೃಢಪಟ್ಟಿಲ್ಲ.

      ಹೀಗಾಗಿ ಆ್ಯಂಟಿ ಎಚ್ಐವಿ ಔಷಧಿ ಬಳಕೆ ಬೇಡ ಅದರ ಬದಲಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆ್ಯಂಟಿ ಮಲೇರಿಯಾ ಔಷಧಿಯಾದ hydroxycholoroquine and antibiotic azithromycin ಅನ್ನು ಬಳಕೆ ಮಾಡುವಂತೆ ಹೇಳಿದೆ.

      ಔ‍ಷಧಿಣೆಯನ್ನು ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ನೀಡಬೇಕು

      ಔ‍ಷಧಿಣೆಯನ್ನು ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ನೀಡಬೇಕು

      ಅಂತೆಯೇ ಈ ಔಷಧಿಗಳನ್ನು ಸಂಪೂರ್ಣ ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲೇ ನೀಡತಕ್ಕದ್ದು ಎಂದು ಸಚಿವಾಲಯ ಹೇಳಿದ್ದು, ರೋಗಿಯಲ್ಲಿನ ಬದಲಾವಣೆಗಳ ಕುರಿತು ಕ್ಷಣಕ್ಷಣದ ಮಾಹಿತಿ ಪಡೆದು ದಾಖಲಿಸುವಂತೆ ಸೂಚಿಸಲಾಗಿದೆ.

      ಬ್ರಿಟನ್‌ನಲ್ಲಿ 199 ಸೋಂಕಿತರಿಗೆ ಆ್ಯಂಟಿ ಎಚ್ಐವಿ ಔಷಧಿ ನೀಡಲಾಗಿತ್ತು

      ಬ್ರಿಟನ್‌ನಲ್ಲಿ 199 ಸೋಂಕಿತರಿಗೆ ಆ್ಯಂಟಿ ಎಚ್ಐವಿ ಔಷಧಿ ನೀಡಲಾಗಿತ್ತು

      ಈ ಹಿಂದೆ ಇಂಗ್ಲೆಂಡ್ ಮೂಲದ ವೈದ್ಯಕೀಯ ಪತ್ರಿಕೆಯೊಂದು ಬ್ರಿಟನ್ ನಲ್ಲಿ 199 ಸೋಂಕಿತರಿಗೆ ಆ್ಯಂಟಿ ಎಚ್ಐವಿ ಔಷಧಿ ನೀಡಲಾಗಿತ್ತು. ಈ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು ಎಂದು ವರದಿ ಮಾಡಿತ್ತು. ಇತ್ತ ಫ್ರಾನ್ಸ್ ನ ನಿಯತಕಾಲಿಕೆಯೊಂದು ವೈದ್ಯರು ನೀಡಿದ ಆ್ಯಂಟಿ ಮಲೇರಿಯಾ ಔಷಧಿಯಾದ hydroxycholoroquine and antibiotic azithromycin ನಿಂದಾಗಿ 80 ಕೊರೋನಾ ರೋಗಿಗಳ ಪೈಕಿ 78 ಮಂದಿ ಗುಣಮುಖರಾಗಿದ್ದಾರೆ ಎಂದು ವರದಿ ಮಾಡಿತ್ತು.

      ಔಷಧಿಗಳಿಂದ ಸೈಡ್ ಎಫೆಕ್ಟ್

      ಔಷಧಿಗಳಿಂದ ಸೈಡ್ ಎಫೆಕ್ಟ್

      ಅಲ್ಲದೆ ಔಷಧಿಯಿಂದಾದ ಸೈಡ್ ಎಫೆಕ್ಟ್ ಗಳ ಕುರಿತು ಕಡ್ಡಾಯವಾಗಿ ಕೇಸ್ ಶೀಟ್ ನಲ್ಲಿ ನಮೂದಿಸುವಂತೆ ಸಚಿವಾಲಯ ಸೂಚಿಸಿದೆ. ಅಂತೆಯೇ ಈ ಔಷಧಿಗಳನ್ನು 12 ವರ್ಷಕ್ಕಿಂತ ಕೆಳಗಿನ ಪುಟ್ಟ ಮಕ್ಕಳಿಗೆ ಮತ್ತು ಗರ್ಭಿಣಿ ರೋಗಿಗಳಿಗೆ, ಮಗುವಿಗೆ ಹಾಲುಣಿಸುವ ಸ್ತ್ರೀ ರೋಗಿಗಳಿಗೆ ನೀಡದಂತೆಯೂ ಸೂಚಿಸಲಾಗಿದೆ.

      ಕೊರೊನಾ ವೈರಸ್‌ಗೆ ನಿರ್ದಿಷ್ಟ ಲಸಿಕೆ ಇಲ್ಲ

      ಕೊರೊನಾ ವೈರಸ್‌ಗೆ ನಿರ್ದಿಷ್ಟ ಲಸಿಕೆ ಇಲ್ಲ

      ಕೊರೊನಾ ವೈರಸ್ ಗೆ ನಿರ್ಧಿಷ್ಠ ಔಷಧಿ ಅಥವಾ ಲಸಿಕೆ ಇಲ್ಲದ ಕಾರಣ ಆಯಾ ಕ್ಷಣಕ್ಕೆ ಸಿಕ್ಕ ಮಾಹಿತಿಗಳಿಗೆ ಅನುಸಾರವಾಗಿ ಔಷಧಿಗಳ ಶಿಫಾರಸು ಮಾಡುವುದಾಗಿ ಅದನ್ನೇ ಬಳಕೆ ಮಾಡುವಂತೆ ವೈದ್ಯರಿಗೆ ಇಲಾಖೆ ಸೂಚನೆ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+