ದೇಶೀಯ ವಿಮಾನಗಳ ನಿರ್ಬಂಧ ನವೆಂಬರ್ 24ರವರೆಗೆ ವಿಸ್ತರಣೆ
ನವದೆಹಲಿ, ಜುಲೈ 24: ನಾಗರಿಕ ವಿಮಾನಯಾನ ಸಂಸ್ಥೆಯು ದೇಶೀಯ ವಿಮಾನಗಳಿಗೆ ವಿಧಿಸಿದ್ದ ನಿರ್ಬಂಧವನ್ನು ನವೆಂಬರ್ 24ರವರೆಗೆ ವಿಸ್ತರಿಸಿದೆ.
ನವೆಂಬರ್ 24ರವರೆಗೆ ಅಥವಾ ಮುಂದಿನ ಆದೇಶದವರೆಗೆ ನಿರ್ಬಂಧ ಮುಂದುವರೆಯಲಿದೆ. ವಿಮಾನ ಟಿಕೆಟ್ ದರವೂ ಕೂಡ ಹಾಗೆಯೇ ಇರಲಿದೆ.
ದೇಶೀಯ ವಿಮಾನಯಾನದ ಟಿಕೆಟ್ ದರ 2 ಸಾವಿರದಿಂದ 6500ರೂ ವರೆಗೆ ಇರಲಿದೆ.ದೇಶೀಯ ವಿಮಾನದಲ್ಲಿ ಶೇ.40ರಷ್ಟು ಪ್ರಯಾಣಿಕರಿರಬಹುದು ಎಂದು ಸೂಚನೆ ನೀಡಲಾಗಿದೆ. ಎರಡು ತಿಂಗಳ ಅಂತರದ ಬಳಿಕ ಮೇ ಅಂತ್ಯದಲ್ಲಿ ದೇಶೀಯ ವಿಮಾನಗಳ ಸೇವೆಯನ್ನು ಆರಂಭಿಸಲಾಯಿತು. ಇದುವರೆಗೆ ವಂದೇ ಭಾರತ್ ಯೋಜನೆಯನ್ನು ಹೊರತುಪಡಿಸಿ ಯಾವುದೇ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸುತ್ತಿಲ್ಲ.

40 ನಿಮಿಷಗಳ ದೂರದ ಪ್ರಯಾಣವನ್ನು ಮೊದಲ ಸೆಕ್ಷನ್, 40-60 ನಿಮಿಷಗಳ ಪ್ರಯಾಣವನ್ನು ಸೆಕ್ಷಷ್ 2 ಹಾಗೂ 60-90 ಸೆಕ್ಷನ್ 3, 90-120 ಸೆಕ್ಷನ್ 4, 120-150 ನಿಮಿಷಗಳ ಅಂತರವನ್ನು ಸೆಕ್ಷನ್ 5 ಎಂದು ತಿಳಿಸಲಾಗಿದೆ ಹೀಗೆ ಒಟ್ಟು 7 ಸೆಕ್ಷನ್‌ಗಳಿರಲಿವೆ.
ಹಾಗೆಯೇ 2 ಸಾವಿರದಿಂದ 18,600ರವರೆಗೂ ಟಿಕೆಟ್ ದರವಿರಲಿದೆ. ನವೆಂಬರ್ ಅಷ್ಟೊತ್ತಿಗೆ ವಿಮಾನದಲ್ಲಿ ಶೇ.55-60ರಷ್ಟು ಮಂದಿ ಪ್ರಯಾಣಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications