Mumbai Diwali: ದಿಯಾ ಮಿರ್ಜಾ ವಿಡಿಯೋ ಡಿಲೀಟ್‌ಗೆ ಹೈಕೋರ್ಟ್ ಗರಂ; ಬಿಎಂಸಿಗೆ ತರಾಟೆ, ಮಹತ್ವದ ಆದೇಶ

ಮುಂಬೈ: ದೀಪಾವಳಿ ಹಬ್ಬದಾಚರಣೆಗೆ ದೇಶವೇ ಸಜ್ಜಾಗಿದೆ. ಆದರೆ ಹಬ್ಬದ ಹೊತ್ತಿನಲ್ಲಿ ಸಿಡಿಸುವ ಪಟಾಕಿಯಿಂದ ಸಾಕಷ್ಟು ವಾಯು-ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುಂಬೈನ ಸಾರ್ವಜನಿಕ ಸ್ಥಳದಲ್ಲಿ ಪಟಾಕಿ ಸಿಡಿಸದೇ ಪರಿಸರ ಸ್ನೇಹಿ ಆಚರಣೆಗೆ ಕರೆ ನೀಡಿದ್ದ ನಟಿ ದಿಯಾ ಮಿರ್ಜಾ ಅವರ ವಿಡಿಯೋ ಡಿಲೀಟ್ ಮಾಡಿರುವುದು ವಿವಾದ ಸೃಷ್ಟಿಸಿದೆ. ಇದಕ್ಕೆ ಬೇಸರ ವ್ಯಕ್ತಪಡಿಸಿದ ಹೈಕೋರ್ಟ್, ವಿಡಿಯೋ ಪುನರ್ ಅಪ್ಲೋಡ್‌ಗೆ ಆದೇಶಿಸಿದೆ.

ಪರಿಸರ ಸ್ನೇಹಿ ಹಾಗೂ ಪಟಾಕಿ-ಮುಕ್ತ ದೀಪಾವಳಿ ಆಚರಣೆಗೆ ನಟಿ ದಿಜಾ ಅವರು ಕರೆ ನೀಡಿದ್ದ ವಿಡಿಯೋಗೆ ರಾಜಕಾರಣಿಗಳಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೆ ವಿಡಿಯೋವನ್ನು 'ಬೃಹನ್ಮುಂಬೈ ಮಹಾನಗರ ಪಾಲಿಕೆ' (ಬಿಎಂಸಿ) ಡಿಲೀಟ್ ಮಾಡಿತ್ತು. ಈ ವಿಚಾರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಭಾರತ ಜಾತ್ಯಾತೀತ ರಾಷ್ಟ್ರ ಅಲ್ಲವೇ. ಪರಿಸರ ಕಾಳಜಿ ವಿಚಾರದಲ್ಲಿ ರಾಜಕೀಯಕ್ಕೆ ಅವಕಾಶ ವಿಲ್ಲ ಎಂದಿತು. ನಟಿ ದಿಯಾ ಅವರ ಜಾಗೃತಿ ವಿಡಿಯೋ ಮರಳಿ ಅಪ್ಲೊಡ್ ಮಾಡುವಂತೆ ಬಿಎಂಸಿಗೆ ನಿರ್ದೇಶಿಸಿ ಮಹತ್ವದ ಆದೇಶ ಹೊರಡಿಸಿತು.

Diya Mirza Video Row

ಅಷ್ಟಕ್ಕೂ ಏನಿದು ವಿವಾದ?

ಪರಿಸರ ಸ್ನೇಹಿ ಹಾಗೂ ಪಟಾಕಿ-ಮುಕ್ತ ದೀಪಾವಳಿ ಆಚರಣೆ ಹಿನ್ನೆಲೆಯಲ್ಲಿ 'ಬೃಹನ್ ಮುಂಬೈ ಮಹಾನಗರ ಪಾಲಿಕೆ' (ಬಿಎಂಸಿ) ಅಭಿಯಾನ ಆರಂಭಿಸಿತ್ತು. ಅದರ ಭಾಗವಾಗಿ ಪರಿಸರ ಸ್ನೇಹಿ ಆಚರಣೆಗಾಗಿ ದಿಯಾ ಮಿರ್ಜಾ, ಮಾಧುರಿ ದೀಕ್ಷಿತ್, ಕ್ರಿಕೆಟಿಗ ಅಜಿಂಕ್ಯ ರಹಾನೆ ಸೇರಿದಂತೆ ಸೆಲೆಬ್ರೆಟಿಗಳು ಅಭಿಯಾನದಲ್ಲಿ ಪಾಲ್ಗೊಂಡು ವಿಡಿಯೋ ಮಾಡಿ ಕರೆ ನೀಡಿದ್ದರು. ಬಿಎಂಸಿಯ ಎಲ್ಲರ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಪರಿಸರ ಜಾಗೃತಿ ಮೂಡಿಸಿತ್ತು.

ಇದರಲ್ಲಿ ನಟಿ ದಿಜಾ ಮಿರ್ಜಾ ಅವರು ಮುಂಬೈನಲ್ಲಿ ಮಾಲಿನ್ಯ ಹೆಚ್ಚಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಹೊಡೆಯದಂತೆ ಮನವಿ ಮಾಡಿದ್ದರು. ಶಬ್ದ, ವಾಯು ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಅವರು ವಿಡಿಯೋ ಮೂಲಕ ಕೋರಿದ್ದರು. ಆ ವಿಡಿಯೋವನ್ನೂ ಬಿಎಂಸಿ ಅಪ್ಲೋಡ್ ಮಾಡಿತ್ತು.

ದಿಯಾ ವಿಡಿಯೋ ಮಾತ್ರವೇ ಡಿಲೀಟ್

ವಿಡಿಯೋ ನೋಡಿದ ಮುಂಬೈ ಬಿಜೆಪಿ ಮುಖ್ಯಸ್ಥ ಅಮೀತ್ ಸಾತಮ್ ಅವರು ಆಕ್ಷೇಪ ವ್ಯಕ್ತಪಡಿಸಿದ ನಂತರ ಮತ್ತು ಮೇಯರ್ ರಿತು ತಾವ್ಡೆ ಅವರು ದಿಯಾ ಮಿರ್ಜಾ ಅವರನ್ನು "ಹಿಂದೂ ವಿರೋಧಿ" ಎಂದು ಕರೆದರು. ಅದಾಗುತ್ತಿದ್ದಂತೆ ಬಿಎಂಸಿ ದಿಜಾ ಅವರಿಗೆ ಸಂಬಂಧಿಸಿದ ವಿಡಿಯೋವನ್ನು ಮಾತ್ರವೇ ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಿತ್ತು. ಈ ವಿಚಾರ ಕೋರ್ಟ್‌ ಅಂಗಳಕ್ಕೆ ಹೋಗುತ್ತಿದ್ದಂತೆ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಯಿತು.

ಆಕ್ಷೇಪಿಸಿದ ಜನಪ್ರತಿನಿಧಿಗಳಗೆ ಕೋರ್ಟ್ ತರಾಟೆ

ನ್ಯಾಯಪೀಠವು, ಆರೋಗ್ಯ ಕಾಳಜಿ ವಿಚಾರದಲ್ಲಿ ರಾಜಕೀಯ ಸಲ್ಲದು. ಅವರು ಬೇರೆ ಧರ್ಮದವರು ಎಂದ ಮಾತ್ರಕ್ಕೆ ಅವರನ್ನು ಹೇಗೆ ವಿರೋಧಿಸುತ್ತೀರಿ? ಭಾರತ ಜಾತ್ಯಾತೀತ ರಾಷ್ಟ್ರ ಅಲ್ಲವೇ? ಎಂದು ಪ್ರಶ್ನಿಸಿತು. ಪರಸರ, ಆರೋಗ್ಯ ಕಾಳಜಿ ಕುರಿತು ಸಾಮಾಜಿಕವಾಗಿ ಮಾತನಾಡುವಾಗ ರಾಜಕೀಯಕ್ಕೆ ಜಾಗವಿಲ್ಲ ಎಂದು ದಿಯಾ ಅವರ ವಿಡಿಯೋಗೆ ಆಕ್ಷೇಪಿಸಿದ ಜನಪ್ರತಿನಿಧಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಇಂತಹ ವಿಚಾರದಲ್ಲಿ ರಾಜಕಾರಣಿಗಳ ಒತ್ತಡಕ್ಕೆ 'ಬೃಹನ್ ಮುಂಬೈ ಮಹಾನಗರ ಪಾಲಿಕೆ' (ಬಿಎಂಸಿ) ಮಣಿಯುವ ಅಗತ್ಯವಿರಲಿಲ್ಲ ಎಂದು ತಿಳಿಸಿದ ನ್ಯಾಯಪೀಠವು, ಕೂಡಲೇ ಅವರ ವಿಡಿಯೋವನ್ನು ಮರ ಅಪ್ಲೋಡ್ ಮಾಡುವಂತೆ ಬಿಎಂಸಿಗೆ ಸೂಚಿಸಿ ಆದೇಶಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+