ಮೆಟ್ರೋದಲ್ಲಿ ಡಿಶುಂ ಡಿಶುಂ: ಚಲಿಸುವ ರೈಲಿನಲ್ಲಿ ಬಡಿದಾಡಿಕೊಂಡ ವ್ಯಕ್ತಿಗಳು, ಏನ್ ಆಯ್ತು ರೀ ನಿಮಗೆ ಎಂದ ಜನರು
ನವದೆಹಲಿ, ಡಿಸೆಂಬರ್ 20: ನವದೆಹಲಿಯಲ್ಲಿ ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಮಾತಿಗೆ ಮಾತು ಬೆಳೆದು ಪರಸ್ಪರ ಕೈಮಿಲಿಸಿ ಹಿಗ್ಗಾಮುಗ್ಗಾ ಬಡಿದಾಡಿಕೊಂಡ ವಿಡಿಯೋ ಈಗ ವೈರಲ್ ಆಗಿದೆ.
ದೆಹಲಿ ಮೆಟ್ರೋದಲ್ಲಿ ನಡೆದ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಕ್ಲಿಪ್‌ನಲ್ಲಿ ಇಬ್ಬರು ಪುರುಷರು ಪರಸ್ಪರ ನಿರಂತರವಾಗಿ ಪಂಚ್ ಮಾಡುತ್ತಿರುವುದು ವೈರಲ್ ಆಗಿದೆ.

ಈ ಇಬ್ಬರು ವ್ಯಕ್ತಿಗಳು ಹೊಡೆದಾಟದ ಹಿಂದಿನ ಕಾರಣ ತಿಳಿದುಬಂದಿಲ್ಲ. ಮೆಟ್ರೋ ಕೋಚ್‌ನಲ್ಲಿ ಇತರ ಪ್ರಯಾಣಿಕರು ಕಳವಳಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳಿಂದ ತುಂಬಿದೆ. ಕೆಲವರು ಅವರ ನಡವಳಿಕೆಗಾಗಿ ಇಬ್ಬರನ್ನು ದೂಷಿಸಿದ್ದಾರೆ ಮತ್ತು ಇತರರು ಅವರನ್ನು ಒಲಿಂಪಿಕ್ಸ್‌ಗೆ ಕಳುಹಿಸಬೇಕು ಎಂದು ತಮಾಷೆ ಮಾಡಿದ್ದಾರೆ.
ಈ ಗಲಾಟೆ ಬಗ್ಗೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಕೂಡ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ವಿಡಿಯೋದಲ್ಲಿ ಮೆಟ್ರೋ ಕೋಚ್‌ನೊಳಗೆ ಹೊಡೆದಾಡಿಕೊಂಡು ಪರಸ್ಪರ ದಾಳಿಯಲ್ಲಿ ನಿರತರಾಗಿರುವ ವ್ಯಕ್ತಿಗಳು ಹೊಡೆಯುವುದನ್ನು ತಪ್ಪಿಸಲು ಇತರ ಪ್ರಯಾಣಿಕರು ಬದಿಗೆ ತೆರಳಿದರು.
@gharkekalesh pic.twitter.com/lFGVCrJung
— Arhant Shelby (@Arhantt_pvt) December 16, 2023
ಕೆಲವು ಪ್ರಯಾಣಿಕರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರೂ ವ್ಯಕ್ತಿಗಳು ಪರಸ್ಪರರ ಮೇಲೆ ಗುದ್ದಾಡುವುದನ್ನು ಮುಂದುವರೆಸಿದರು. ವಿಡಿಯೋ ಪೂರ್ತಿ ಅವರು ತಾವು ಬಡಿದಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ. ಈ ವೀಡಿಯೊವನ್ನು ಸುಮಾರು 2,000 ಬಾರಿ ವೀಕ್ಷಿಸಲಾಗಿದೆ. ಹಲವಾರು ಬಳಕೆದಾರರಿಂದ ಪ್ರತಿಕ್ರಿಯೆ ಬಂದಿದೆ.
ಕಾಮೆಂಟ್‌ನಲ್ಲಿ "ಇಬ್ಬರೂ ವಿದ್ಯಾವಂತರು ಮತ್ತು ಭಾರತದ ರಾಜಧಾನಿಯಲ್ಲಿ ವಾಸಿಸುತ್ತಿದ್ದಾರೆ" ಎಂದು ಬಳಕೆದಾರರೊಬ್ಬರು ಹೇಳಿದರು. "ಪಂಚ್‌ಗಳು ತುಂಬಾ ವೃತ್ತಿಪರವಾಗಿವೆ. ಇದು ಮೊಹಮ್ಮದ್ ಅಲಿ ವರ್ಸಸ್ ಜಾರ್ಜ್ ಚುವಾಲೋ ಮಟ್ಟದ ಬಾಕ್ಸಿಂಗ್" ಎಂದು ಇನ್ನೊಬ್ಬರು ಹೇಳಿದರು.
"ಎರಡೂ ವಜ್ರಗಳು ಮತ್ತು ಎರಡನ್ನೂ ಒಲಿಂಪಿಕ್ಸ್ ಆಟಗಳಿಗೆ ಕಳುಹಿಸಬೇಕು" ಎಂದು ಮೂರನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದೇ ರೀತಿಯ ವೀಡಿಯೊ ಜೂನ್‌ನಲ್ಲಿಯೂ ಕಾಣಿಸಿಕೊಂಡಿತ್ತು, ಇಬ್ಬರು ಪುರುಷರು ಕಿಕ್ಕಿರಿದ ದೆಹಲಿ ಮೆಟ್ರೋ ಕೋಚ್‌ನಲ್ಲಿ ಜಗಳದಲ್ಲಿ ತೊಡಗಿದ್ದರು.
ಪುರುಷರು ಗುದ್ದಾಡುತ್ತಾ ಒಬ್ಬರನ್ನೊಬ್ಬರು ತಳ್ಳಲು ಯತ್ನಿಸುತ್ತಿರುವುದು ಕೂಡ ಕಂಡು ಬಂದಿದೆ. ಡಿಎಂಆರ್‌ಸಿ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಮೆಟ್ರೋದಲ್ಲಿ ಪ್ರಯಾಣಿಸುವಾಗ ಜವಾಬ್ದಾರಿಯಿಂದ ವರ್ತಿಸುವಂತೆ ಪ್ರಯಾಣಿಕರನ್ನು ಒತ್ತಾಯಿಸುವಂತೆ ಸೂಚಿಸಿದೆ. ಫ್ಲೈಯಿಂಗ್ ಸ್ಕ್ವಾಡ್‌ಗಳು ಇಂತಹ ನಡವಳಿಕೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತವೆ ಮತ್ತು ಅಶಿಸ್ತಿನ ಪ್ರಯಾಣಿಕರ ವಿರುದ್ಧ ಕ್ರಮದ ಎಚ್ಚರಿಕೆ ನೀಡುತ್ತವೆ ಎಂದು ಅದು ಹೇಳಿದೆ.












Click it and Unblock the Notifications