ಬುಡಕಟ್ಟು ಸಮುದಾಯದ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಗ್ಯಾರಂಟಿ?

ಬಿಜೆಪಿ ಮತ್ತೆ ಹೊಸ ಬಲ, ಹುಮ್ಮಸ್ಸಿನ ಮೂಲಕ ಮುನ್ನುಗ್ಗಿದೆ. ಅದ್ರಲ್ಲೂ ಪಂಚರಾಜ್ಯ ಚುನಾವಣೆ ಫಲಿತಾಂಶ 2024 ರ ಲೋಕಸಭೆ ಚುನಾವಣೆಗೆ ಮೊದಲು ಬಲ ತುಂಬುತ್ತಿದ್ದು, ಬಿಜೆಪಿ ಕೇಂದ್ರ ನಾಯಕರು ಫುಲ್ ಖುಷ್ ಆಗಿದ್ದಾರೆ. ಹೀಗಾಗಿ ಬುಡಕಟ್ಟು ಸಮುದಾಯದ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ನೀಡಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ.

ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಎಲೆಕ್ಷನ್ ನಡೆದಿದ್ದು 5 ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಹೊರಬಿದ್ದಿರುವ 5 ರಾಜ್ಯದ ರಿಸಲ್ಟ್ ಪೈಕಿ ಈಗಾಗಲೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯ ಕಂಡಿದೆ. ಇದು ಬಿಜೆಪಿಗೆ ಮತ್ತಷ್ಟು ಬಲ ತುಂಬಿದೆ. ಅದರಲ್ಲೂ ಛತ್ತೀಸ್‌ಗಢ ರಾಜ್ಯದಲ್ಲಿ ಪಕ್ಕಾ ಕಾಂಗ್ರೆಸ್ ಗೆಲ್ಲುತ್ತೆ ಅಂತಾ ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಇದನ್ನೆಲ್ಲಾ ಮೀರಿ ಈಗ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು, ಇಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡಲು ಬಿಜೆಪಿ ವರಿಷ್ಠರು ಚಿಂತಿಸುತ್ತಿದ್ದಾರೆ.

Discover Who Will Be The Next CM Of Chhattisgarh State

ಬುಡಕಟ್ಟು ಸಮುದಾಯದ ನಾಯಕ ಸಿಎಂ?

ಈಗಿನ ಪರಿಸ್ಥಿತಿ ಅವಲೋಕನ ಮಾಡಿದರೆ, ಬಿಜೆಪಿಗೆ ಛತ್ತೀಸ್‌ಗಢ ರಾಜ್ಯದಲ್ಲಿ ಬುಡಕಟ್ಟು ಸಮುದಾಯದ ನಾಯಕ ಬೇಕು. ಏಕೆಂದ್ರೆ ಛತ್ತೀಸ್‌ಗಢದಲ್ಲಿ ಈ ಸಮುದಾಯವೇ ಅಂತಿಮ ಎನ್ನಬಹುದು. ಸಾಕಷ್ಟು ಕ್ಷೇತ್ರಗಳಲ್ಲಿ ಬುಡಕಟ್ಟು ಸಮುದಾಯ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗೇ ಈ ಬಾರಿ ಬುಡಕಟ್ಟು ಸಮುದಾಯದ ಮತಗಳು ಬಿಜೆಪಿ ಪರವಾಗಿದ್ದ ಕಾರಣಕ್ಕೆ ಬಿಜೆಪಿ ಗೆದ್ದು ಬೀಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಇನ್ನು ಈ ಸಮಯದಲ್ಲೇ, ಬುಡಕಟ್ಟು ಸಮುದಾಯ ನಾಯಕನಿಗೆ ಸಿಎಂ ಪಟ್ಟ ನೀಡಲು ಬಿಜೆಪಿ ವರಿಷ್ಟು ಚರ್ಚೆಯ ನಡೆಸಿದ್ದಾರೆ ಎನ್ನಲಾಗಿದೆ. ಹಾಗಾದರೆ ಯಾರು ಅವರೆಲ್ಲಾ? ಈ ಬಾರಿ ಛತ್ತೀಸ್‌ಗಢ ರಾಜ್ಯದಲ್ಲಿ ಯಾರಿಗೆ ಸಿಎಂ ಪಟ್ಟ ಸಿಗಬಹುದು? ಸಿಎಂ ರೇಸ್‌ನಲ್ಲಿ ಇರುವ ನಾಯಕರು ಯಾರು? ಯಾರು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

Discover Who Will Be The Next CM Of Chhattisgarh State

ಛತ್ತೀಸ್‌ಗಢ ನೂತನ ಸಿಎಂ ಯಾರು?

ವಿಷ್ಣು ದೇವ್ ಸಾಯಿ ಛತ್ತೀಸ್‌ಗಢದ ರಾಜಕೀಯದಲ್ಲಿ ಹಿಡಿತ ಹೊಂದಿದ್ದಾರೆ. ಹಾಗೇ ಇದೇ ನಾಯಕ ಬುಡಕಟ್ಟು ಸಮುದಾಯವನ್ನ ಕೂಡ ಪ್ರತಿನಿಧಿಸುತ್ತಾರೆ. ಹೀಗಾಗಿ ಬಿಜೆಪಿ ಕೇಂದ್ರ ನಾಯಕರ ಮೊದಲ ಆಯ್ಕೆ ವಿಷ್ಣು ದೇವ್ ಸಾಯಿ ಆಗಬಹುದು ಎನ್ನಲಾಗಿದೆ. ಇವರ ಜತೆ ರೇಣುಕಾ ಸಿಂಗ್, ರಾಮವಿಚಾರ್ ನೇತಮ್, ಅರುಣ್ ಸಾವೋ ಹೆಸರು ಕೂಡ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿದೆ.

ಮಧ್ಯ ಭಾರತದ ರಾಜ್ಯದಲ್ಲಿ ಏನಾಗುತ್ತಿದೆ?

ಒಟ್ನಲ್ಲಿ ಬಿಜೆಪಿ ಕೇಂದ್ರ ನಾಯಕರು ಈಗ ಅಳೆದು ತೂಗಿ ಲೆಕ್ಕ ಹಾಕುತ್ತಿದ್ದಾರೆ. ಯಾಕೆ ಅಂದ್ರೆ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಅಲರ್ಟ್ ಆಗಿ ಹೆಜ್ಜೆ ಇಡಬೇಕು. ಅದರಲ್ಲೂ ಸಮುದಾಯದ ಬಲ ಹೆಚ್ಚಾಗಿರುವ ನಾಯಕರಿಗೆ ಈಗ ಒತ್ತು ನೀಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಛತ್ತೀಸ್‌ಗಢ ಅಖಾಡದಲ್ಲಿ ಏನು ಬೇಕಾದರೂ ಆಗಲಿದೆ. ಇದಕ್ಕಾಗಿ ಕಾದು ನೋಡಬೇಕಿದೆ ಅಂತಿದ್ದಾರೆ ರಾಜಕೀಯ ತಜ್ಞರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+