ಪ್ರಧಾನಿ ಮೋದಿ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದ ರಷ್ಯಾ ಅಧ್ಯಕ್ಷ!
ಭಾರತ ಹಾಗೂ ರಷ್ಯಾ ಬಾಂಧವ್ಯ ಎಷ್ಟು ಗಟ್ಟಿಯಾಗಿದೆಯೋ ಅದೇ ರೀತಿ ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಪ್ರಧಾನಿ ಮೋದಿ ಕೂಡ ಬಾಂಧವ್ಯ ಕಾಪಾಡಿಕೊಂಡು ಬಂದಿದ್ದಾರೆ. ಈ ಮಧ್ಯೆ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಶುರು ಮಾಡಿದ ಬಳಿಕ ಪದೇ ಪದೆ ರಷ್ಯಾ ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿ ಅವರನ್ನ ಹೊಗಳುತ್ತಿದ್ದಾರೆ. ಈಗ ಕೂಡ ಅಷ್ಟೇ ಪಿಎಂ ಮೋದಿ ಬಗ್ಗೆ ಹೆಮ್ಮೆಯ ಮಾತುಗಳನ್ನ ಆಡಿದ್ದಾರೆ.
ಹೌದು, ರಷ್ಯಾ & ಭಾರತ ಸಂಬಂಧ ಇಂದು ನಿನ್ನೆಯದಲ್ಲ. ಈ ಸಂಬಂಧ ಶತಮಾನಗಳ ಇತಿಹಾಸ ಹೊಂದಿದೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಎರಡೂ ದೇಶಗಳ ನಡುವೆ ಹಲವು ರೀತಿಯ ಸಂಬಂಧ ಇತ್ತು. ಅದ್ರಲ್ಲೂ ಸ್ವತಂತ್ರ ಭಾರತದ ಪ್ರತಿಯೊಂದು ಸರ್ಕಾರ ಕೂಡ ರಷ್ಯಾ ಜೊತೆ ಸ್ನೇಹ ಕಾಪಾಡಿಕೊಂಡು ಬಂದಿದೆ. ಅದೇ ರೀತಿ ಪ್ರಧಾನಿ ಮೋದಿ & ಪುಟಿನ್ ಸ್ನೇಹ ಕೂಡ ಗಟ್ಟಿಯಾಗಿದೆ. ಈಗ ಮತ್ತೊಮ್ಮೆ ಪ್ರಧಾನಿ ಮೋದಿ ಅವರ ಕುರಿತು ಹೆಮ್ಮೆಯ ಮಾತನಾಡಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್.

ಭಾರತದ ಪ್ರಧಾನಿ ಬಗ್ಗೆ ಪುಟಿನ್ ಹೇಳಿದ್ದೇನು?
ಪ್ರಧಾನಿ ಮೋದಿ ಅವರು ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಪಿಎಂ ಮೋದಿ ನಾಯಕತ್ವದಲ್ಲಿ ಭಾರತ ಈಗ ಅಭಿವೃದ್ಧಿ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಪುಟಿನ್ ಹೇಳಿದ್ದಾರಂತೆ. ಈ ಬಗ್ಗೆ ರಷ್ಯಾ ಮಾಧ್ಯಮ ಆರ್‌ಟಿ ವರದಿ ಮಾಡಿದೆ. ಅಧ್ಯಕ್ಷ ಪುಟಿನ್, ರಷ್ಯಾ & ಭಾರತದ ನಡುವೆ ಆರ್ಥಿಕ ಭದ್ರತೆ ಮತ್ತು ಸೈಬರ್ ಅಪರಾಧದ ವಿರುದ್ಧ ಹೋರಾಟದ ಕ್ಷೇತ್ರಗಳಲ್ಲಿ ಸಹಯೋಗದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ ಎಂದು ರಷ್ಯಾ ಮಾಧ್ಯಮದ ವರದಿಯಲ್ಲಿ ತಿಳಿಸಲಾಗಿದೆ.
ಹಾಗೇ ರಷ್ಯಾ ಅಧ್ಯಕ್ಷ ಪುಟಿನ್, ನಾವು ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ರಾಜಕೀಯ ಸಂಬಂಧ ಹಂಚಿಕೊಳ್ಳುತ್ತೇವೆ ಅಂತಾ ಹೇಳಿದ್ದಾರಂತೆ. ಇನ್ನು, ಪ್ರಧಾನಿ ಮೋದಿ ತುಂಬಾ ಬುದ್ಧಿವಂತ ವ್ಯಕ್ತಿ. ಹೀಗಾಗಿ ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ ಎಂದು ಹೇಳುವ ಮೂಲಕ, ಪುಟಿನ್ ಭಾರತದ ಜೊತೆಗಿನ ಸಂಬಂಧ ವೃದ್ಧಿಯ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಇದೀಗ ಪುಟಿನ್ ಹೇಳಿರುವ ಮಾತು ಜಗತ್ತಿನಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಅದ್ರಲ್ಲೂ ಅಮೆರಿಕ, ಕೆನಡಾ ಕಣ್ಣು ಬೀಳುವಂತೆ ಮಾಡಿದೆ.

ಮೋದಿ ಬಗ್ಗೆ ಪುಟಿನ್ ಹೊಗಳಿಕೆ
ಇನ್ನು ಕೆಲದಿನಗಳ ಹಿಂದಷ್ಟೇ ಪ್ರಧಾನಿ ಮೋದಿ ಬಗ್ಗೆ ಪುಟಿನ್ ಹೆಮ್ಮೆ ವ್ಯಕ್ತಪಡಿಸಿದ್ದರು. ಅಷ್ಟಕ್ಕು ರಷ್ಯಾ ಬಂದರು ನಗರಿ ವ್ಲಾಡಿವೋಸ್ಟಾಕ್‌ನಲ್ಲಿ ನಡೆದಿದ್ದ 8ನೇ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಅಂದ್ರೆ ಇಇಎಫ್ ಶೃಂಗಸಭೆಯಲ್ಲಿ ಪುಟಿನ್ ಮಾತನಾಡಿದ್ರು. ಈ ವೇಳೆ ಪುಟಿನ್ ಪ್ರಧಾನಿ ಮೋದಿ 'ಮೇಕ್ ಇನ್ ಇಂಡಿಯಾ' ನೀತಿ ಶ್ಲಾಘಿಸಿದ್ದರು. ರಷ್ಯಾ ನಿರ್ಮಿತ ಕಾರುಗಳ ಬಗ್ಗೆ ಕೇಳಿಬಂದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಪುಟಿನ್, ರಷ್ಯಾದ ಈ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡಿದ್ರು. 90 ರ ದಶಕದಲ್ಲಿ ರಷ್ಯಾ ಹೇಗೆ ತನ್ನ ಸ್ವಂತ ನೆಲದಲ್ಲಿ ಕಾರು ಉತ್ಪಾದನೆ ಮಾಡದೆ, ಆಮದು ಮಾಡಿಕೊಳ್ಳುತ್ತಿತ್ತು ಎಂಬುದನ್ನು ಹೇಳಿದ್ದರು. ಅಲ್ಲದೆ ಭಾರತದ ರೀತಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದಿದ್ದರು.
ಒಟ್ನಲ್ಲಿ ಒಂದು ಕಡೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಭಾರತದ ಬಗ್ಗೆ ಮಾತನಾಡಿದ ಸಂದರ್ಭದಲ್ಲೇ ರಷ್ಯಾ ಅಧ್ಯಕ್ಷ ಪುಟಿನ್ ಭಾರತವನ್ನು ಹೊಗಳಿದ್ದಾರೆ. ಅದರಲ್ಲೂ ಪಿಎಂ ಮೋದಿ ಬಗ್ಗೆ ವ್ಲಾದಿಮಿರ್ ಪುಟಿನ್ ನೀಡಿರುವ ಹೇಳಿಕೆ ಇದೀಗ ನ್ಯಾಟೋ ಪಡೆಗಳ ಗಮನ ಸೆಳೆದಂತೆ ಕಾಣುತ್ತಿದೆ. ಅದ್ರಲ್ಲೂ ರಷ್ಯಾ & ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಲು ಇಂತಹ ಬೆಳವಣಿಗೆ ಪರೋಕ್ಷವಾಗಿ ಪ್ರಭಾವ ಬೀರುತ್ತಿವೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications