Chandrayaan-3: ‘ಚಂದ್ರಯಾನ-3’ ಕಥೆ ಮುಗಿದು ಹೋಯಿತಾ?
ಚಂದ್ರನ ಮೇಲೆ ಈಗಾಗಲೇ ಸೂರ್ಯ ಮುಳುಗುತ್ತಿದ್ದಾನೆ ಇದು ಭಾರತೀಯರಿಗೆ ಭಯವನ್ನ ತಂದಿದೆ. ಅರೆ ಚಂದ್ರನ ಮೇಲೆ ಸೂರ್ಯ ಮುಳುಗುತ್ತಿದ್ದರೆ ಭಾರತೀಯರಿಗೆ ಏಕೆ ಆತಂಕ? ಅಂದ್ರಾ. ಅದಕ್ಕೂ ಕಾರಣ ಇದೆ, ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆ ಚಂದ್ರನ ದಕ್ಷಿಣ ಧ್ರುವದ ಅಧ್ಯಯನಕ್ಕೆ ಉಡಾಯಿಸಿದ್ದ 'ಚಂದ್ರಯಾನ-3' ಲ್ಯಾಂಡರ್ & ರೋವರ್ ಕಥೆ ಮುಗಿದಂತೆ ಕಾಣುತ್ತಿದೆ.
ಹೌದು ಸುಮಾರು 10-11 ದಿನಗಳ ಹಿಂದೆ ಚಂದ್ರನ ಮೇಲೆ ಸೂರ್ಯ ಉದಯಿಸಲು ಶುರು ಮಾಡಿದ್ದ. ಆಗ ಚಂದ್ರನ ದಕ್ಷಿಣ ಧ್ರುವದಲ್ಲಿ ಮೈಕೊರೆಯುವ ಚಳಿಯಲ್ಲಿ ಗಾಢ ನಿದ್ದೆಗೆ ಜಾರಿದ್ದ, ಭಾರತದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್‌ನ ಮತ್ತೆ ಅಧ್ಯಯನಕ್ಕೆ ಸಜ್ಜುಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ ಮೊದಲ ಪ್ರಯತ್ನದಲ್ಲಿ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಇಸ್ರೋ ಸಂಸ್ಥೆ ಕಳೆದ 10 ದಿನದಿಂದ ನಿರಂತರವಾಗಿ ಈ ಪ್ರಯತ್ನ ನಡೆಸುತ್ತಲೇ ಬಂದಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದ್ರೆ ಮತ್ತೆ ರೋವರ್ ಹಾಗೂ ಲ್ಯಾಂಡರ್ ನಿದ್ದೆಯಿಂದ ಏಳುವುದು ಡೌಟ್ ಅಂತಾ ಹೇಳಲಾಗುತ್ತಿದೆ.

ಇಸ್ರೋ ಸಂಸ್ಥೆಗೆ ಯಾಕೆ ಹೀಗಾಯ್ತು?
ಚಂದ್ರನ ಮೇಲೆ ಭೂಮಿಯ ರೀತಿ ವಾತಾವರಣ ಇಲ್ಲ, ಹೀಗಾಗಿ ಅಲ್ಲಿ ಸೂರ್ಯನ ಶಾಖ ಬಿದ್ದರೆ ಅತಿಯಾದ ಬಿಸಿ. ಹಾಗೇ ಸೂರ್ಯ ಮುಳುಗಿದರೆ ಅತಿಯಾದ ಚಳಿ ಇರುತ್ತೆ. ಇದೇ ಕಾರಣಕ್ಕೆ ಚಂದ್ರನ ಮೇಲೆ ಸುಮಾರು -120ರಿಂದ -200 ಡಿಗ್ರಿ ಮೈಕೊರೆಯುವ ಚಳಿ ನಡುವೆ ನಿದ್ದೆಗೆ ಜಾರಿದ ಭಾರತದ 'ವಿಕ್ರಮ್' ಲ್ಯಾಂಡರ್ ಮತ್ತು 'ಪ್ರಜ್ಞಾನ್' ರೋವರ್ ಶಾಶ್ವತವಾಗಿ ಮಲಗಿರುವ ಸಾಧ್ಯತೆ ಇದೆ. ಭಾರತದ ಇಸ್ರೋ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು. ಆ ನಂತರ ಸುಮಾರು 14 ದಿನಗಳ ಕಾಲ ಭಾರತದ ಇಸ್ರೋ ಸಂಸ್ಥೆ ನಿರ್ಮಿಸಿದ್ದ ಲ್ಯಾಂಡರ್ ಹಾಗೂ ರೋವರ್ ಒಟ್ಟಾಗಿ ಕೆಲಸ ಮಾಡಿದ್ದವು.
ಹೀಗೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಮತ್ತೆ ಸೂರ್ಯ ಮುಳುಗುವ ಸಮಯಕ್ಕೆ ಇಸ್ರೋ ಸಂಸ್ಥೆ ಲ್ಯಾಂಡರ್ ಹಾಗೂ ರೋವರ್‌ನ ನಿದ್ದೆಗೆ ಜಾರಿಸಿತ್ತು. ಆದ್ರೆ ಹೀಗೆ ನಿದ್ದೆ ಮಾಡ್ತಿದ್ದ 'ವಿಕ್ರಮ್' ಲ್ಯಾಂಡರ್ & 'ಪ್ರಜ್ಞಾನ್' ರೋವರ್ ಚಂದ್ರನ ಮೇಲೆ ಮತ್ತೆ ಸೂರ್ಯೋದಯ ಆದ ಬಳಿಕ ನಿದ್ದೆಯಿಂದ ಎದ್ದೇಳಬೇಕಿತ್ತು. ಈಗಿನ ಪರಿಸ್ಥಿತಿ ನೋಡಿದ್ರೆ ಅವು ಶಾಶ್ವತವಾಗಿ ಮಲಗಿರುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಭಾರತೀಯರಿಗೆ ಇದು ಆಘಾತ ನೀಡಿದೆ. ಆದರೆ ಭಾರತವು ಮಾಡಿರುವ ಸಾಧನೆ ಮಾತ್ರ ಇತಿಹಾಸದ ಪುಟದಲ್ಲಿ ಅಜರಾಮರ.

ಚಂದ್ರನ ಮೇಲೆ 14 ದಿನ ಕತ್ತಲೆ!
ಅಷ್ಟಕ್ಕೂ ಚಂದ್ರನ ಅಂಗಳದಲ್ಲಿ ವಿಕ್ರಮ್ ಇಳಿದ ನಂತರ ರೋವರ್ ಚಂದ್ರನ 1 ಪೂರ್ತಿ ದಿನ ಅಂದರೆ ಭೂಮಿ ಲೆಕ್ಕದಲ್ಲಿ 14 ದಿನ ಕೆಲಸ ಮಾಡಿತ್ತು. ಆದರೆ ಅಲ್ಲಿ ಮತ್ತೆ ಸೂರ್ಯ ಮುಳುಗಿ ಕಗ್ಗತ್ತಲು ಆವರಿಸಿತ್ತು. ಆಗ ಇಸ್ರೋ ವಿಜ್ಞಾನಿಗಳು ವೈಜ್ಞಾನಿಕ ಮಾಹಿತಿ ಸಂಗ್ರಹದ ಕಾರ್ಯ ನಿಲ್ಲಿಸಿದ್ದರು. ಈ ಮೂಲಕ ಇಸ್ರೋ ವಿಜ್ಞಾನಿಗಳು ಲ್ಯಾಂಡರ್ ಮತ್ತು ರೋವರ್ ನಿದ್ರಾವಸ್ಥೆಗೆ ಕಳುಹಿಸಿದ್ದರು. ಈಗ ಮತ್ತೊಮ್ಮೆ ಆ ಉಪಕರಣಗಳನ್ನ ನಿದ್ದೆ ಮೂಡ್‌ನಿಂದ ಎಬ್ಬಿಸಬೇಕಿತ್ತು. ಹೀಗೆ ಕಳೆದ 10-11 ದಿನದಿಂದ ನಿರಂತರವಾಗಿ ಪ್ರಯತ್ನಿಸಿದರೂ ಇದು ವರ್ಕೌಟ್ ಆಗಿಲ್ಲ.
ಒಟ್ನಲ್ಲಿ ರೋವರ್ ಮತ್ತು ಲ್ಯಾಂಡರ್ ಮತ್ತೆ ನಿದ್ದೆಯಿಂದ ಎದ್ದೇಳದೇ ಇದ್ದರೂ ಭಾರತದ ಇಸ್ರೋ ಮಾಡಿರುವ ಸಾಧನೆ ಮಾತ್ರ ಎಂದಿಗೂ ಮರೆಯಲಾಗದು. ಏಕೆಂದರೆ ಚಂದ್ರನಲ್ಲಿನ ದಕ್ಷಿಣ ಧ್ರುವದ ಮೇಲೆ ಮೊಟ್ಟಮೊದಲು ಲ್ಯಾಂಡರ್ ಇಳಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತೆ. ಹೀಗಾಗಿ ಭಾರತ ಮಾಡಿರುವ ಸಾಧನೆ ಮಾತ್ರ ಎಂದೆಂದಿಗೂ ಅಜರಾಮರ.












Click it and Unblock the Notifications